ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ ಮತ ಎಣಿಕೆ

ಜಮ್ಮು–ಕಾಶ್ಮೀರ, ಜಾರ್ಖಂಡ್‌ನತ್ತ ಎಲ್ಲರ ಚಿತ್ತ
Last Updated 22 ಡಿಸೆಂಬರ್ 2014, 11:01 IST
ಅಕ್ಷರ ಗಾತ್ರ

ಶ್ರೀನಗರ/ರಾಂಚಿ(ಪಿಟಿಐ): ಜಮ್ಮು–ಕಾಶ್ಮೀರ ಹಾಗೂ ಜಾರ್ಖಂಡ್‌ ರಾಜ್ಯದ ವಿಧಾನಸಭೆಗೆ ಐದು ಹಂತಗಳಲ್ಲಿ  ನಡೆದ  ಚುನಾವಣೆಯ ಮತಎಣಿಕೆ ಪ್ರಕ್ರಿಯೆಯು ನಾಳೆ (ಮಂಗಳವಾರ) ನಡೆಯಲಿದ್ದು, ಎಲ್ಲರ ಚಿತ್ತ ಈ ರಾಜ್ಯಗಳತ್ತ ನೆಟ್ಟಿದೆ.

ಭಯೋತ್ಪಾದಕರು ಹಾಗೂ ನಕ್ಸಲ್‌ ಪೀಡಿತ ರಾಜ್ಯಗಳಲ್ಲಿ ಸುಮಾರು ತಿಂಗಳ ಕಾಲ ವಿವಿಧ ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿತ್ತು.

‘ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮತಎಣಿಕೆ  ಆರಂಭಗೊಳ್ಳಲಿದೆ. ಮತಎಣಿಕೆ ಕೇಂದ್ರಗಳಲ್ಲಿ ಭದ್ರತೆ ಕಾರ್ಯಗಳು ಪ್ರಗತಿಯಲ್ಲಿವೆ’ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಜಮ್ಮು- ಕಾಶ್ಮೀರದಲ್ಲಿ 87 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಉಗ್ರರ ಬೆದರಿಕೆ ಹಾಗೂ ಪ್ರತ್ಯೇಕತಾವಾದಿಗಳ ಬಹಿಷ್ಕಾರದ ನಡುವೆಯೂ ದಾಖಲೆಯ ಮತದಾನ ವರದಿಯಾಗಿತ್ತು.

ಜಾರ್ಖಂಡ್‌ ವರದಿ: ‘ರಾಜ್ಯದ 24 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದಲೇ ಎಣಿಕೆ ಕಾರ್ಯ ಶುರುವಾಗಲಿದೆ’ ಚುನಾವಣಾ ಅಧಿಕಾರಿಯೊಬ್ಬರು ಸೋಮವಾರ ಇಲ್ಲಿ ತಿಳಿಸಿದ್ದಾರೆ.

ನಕ್ಸಲ್‌ ಪೀಡಿತ ಜಾರ್ಖಂಡ್‌ ರಾಜ್ಯ ಎಲ್ಲಾ 81 ವಿಧಾನಸಭಾ ಸ್ಥಾನಗಳಿಗೆ ನಕ್ಸಲರ ಉಪಟಳದ ನಡುವೆಯೂ ದಾಖಲೆಯ ಶೇ 66 ರಷ್ಟು ಮತದಾನದಾನವಾಗಿತ್ತು.

2000ರ ನವೆಂಬರ್ ತಿಂಗಳಲ್ಲಿ ಬಿಹಾರದಿಂದ ಬೇರ್ಪಟ್ಟು ಸ್ವತಂತ್ರ ರಾಜ್ಯವಾಗಿ ಜಾರ್ಖಂಡ್‌ ರಚನೆಯಾದಾಗಿನಿಂದಲೂ ಈ ವರೆಗೂ ಒಂಬತ್ತು ಸರ್ಕಾರಗಳು ಬಂದು ಹೋಗಿವೆ. ಮೂರು ಬಾರಿ ರಾಷ್ಟ್ರಪತಿ ಆಡಳಿತಕ್ಕೂ ಒಳಪಟ್ಟಿತ್ತು.

14 ವರ್ಷಗಳ ಹಿಂದೆ ರಚನೆಯಾದ ಜಾರ್ಖಂಡ್‌ನಲ್ಲಿ ವಿಧಾನಸಭೆಗೆ ನಡೆದ ಮೂರನೇ ಚುನಾವಣೆ ಇದಾಗಿದೆ. ಈ ಮೊದಲು 2005 ಹಾಗೂ 2009ರಲ್ಲಿ ನಡೆದ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಅತಂತ್ರ ಫಲಿತಾಂಶ ದೊರೆತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT