ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳ ಕಕ್ಷೆಗೆ ‘ಮಾವೆನ್‌’

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಎಎಫ್‌ಪಿ): ಮಂಗಳ­ಗ್ರಹದ ವಾತಾವರಣದ ಬದಲಾವಣೆ ಕುರಿತು ಅಧ್ಯಯನ ಮಾಡಲು ಅಮೆರಿ­ಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕಳುಹಿಸಿ­ರುವ ‘ಮಾವೆನ್’ ನೌಕೆ ಸೋಮವಾರ ಮಂಗಳಗ್ರಹವನ್ನು ಸುತ್ತುಹಾಕಲು ಆರಂಭಿಸಿದೆ.

10 ತಿಂಗಳಲ್ಲಿ 71.1 ಕೋಟಿ ಕಿ.ಮೀ. ಕ್ರಮಿಸಿ ಈ ನೌಕೆ ಮಂಗಳ ಕಕ್ಷೆ ಸೇರಿದೆ. ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿದ್ದ ನೀರು ಮತ್ತು ಇಂಗಾಲದ ಡೈ ಆಕ್ಸೈಡ್‌ ಏನಾಯಿತು ಎಂಬ ಕುರಿತು ಈ ನೌಕೆ ಅಧ್ಯಯನ ನಡೆಸಲಿದೆ. ಮಂಗಳ ಗ್ರಹದಲ್ಲಿ ಜೀವಿಗಳ ವಾಸಕ್ಕೆ ಅನುಕೂಲಕರವಾಗಿದ್ದ ವಾತಾವರಣ ಹೇಗೆ ನಶಿಸಿತು ಎಂಬುದು ಈಗಲೂ ನಿಗೂಢವಾದ ವಿದ್ಯಮಾನ. ‘ಮಾವೆನ್‌’ ಈ ಅಂಶಗಳ ಮೇಲೆ ಬೆಳಕು ಚೆಲ್ಲುವ ಸಾಧ್ಯತೆಯಿದೆ.
‘ಮಾವೆನ್‌’ ಯಶಸ್ಸಿನಿಂದ ಬೀಗುತ್ತಿರುವ ನಾಸಾ ವಿಜ್ಞಾನಿಗಳು ಇಸ್ರೊ  ವಿಜ್ಞಾನಿಗಳಿಗೆ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT