ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗ ಹಿಡಿಯಲಷ್ಟೇ ಗೊತ್ತು!

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ತೋಟಗಾರಿಕೆ ಇಲಾಖೆ ಮಾತ್ರವಲ್ಲದೆ ಅರಣ್ಯ ಘಟಕವೂ ಇದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ಈ ಘಟಕ, ರಸ್ತೆಬದಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ನಗರದಲ್ಲಿ ಸಸ್ಯಕ್ಷೇತ್ರದ ವಿಸ್ತರಣೆ ಮಾಡುತ್ತದೆ ಎನ್ನುತ್ತದೆ ಬಿಬಿಎಂಪಿ ದಾಖಲೆ. ಸಾರ್ವಜನಿಕ ನಿವೇಶನ, ಕೆರೆ ದಂಡೆ, ಉದ್ಯಾನದಲ್ಲಿ ನೆಡುತೋಪು ಬೆಳೆಸುವ ಹೊಣೆಯನ್ನೂ ಈ ಘಟಕ ಹೊತ್ತಿದೆಯಂತೆ.

ಒಣಗಿನಿಂತ, ಅಪಾಯಕಾರಿಯಾಗಿ ಪರಿಣಮಿಸಿದ ಮರ ಕತ್ತರಿಸಲು ಅನುಮತಿ ನೀಡುವ ಅಧಿಕಾರವನ್ನು ಈ ಘಟಕಕ್ಕೆ ನೀಡಲಾಗಿದೆ. ಮಳೆಗಾಲದಲ್ಲಿ ಮರಗಳು ಉರುಳಿಬಿದ್ದಾಗ ಅವುಗಳನ್ನು ತೆರವುಗೊಳಿಸುವುದೂ ಇದೇ ಘಟಕ. 

‘ವನ್ಯಜೀವಿಗಳು ನಗರಕ್ಕೆ ನುಗ್ಗಿದಾಗ ಈ ಘಟಕ ಏನು ಮಾಡುತ್ತದೆ’ ಎಂದು ಪ್ರಶ್ನಿಸಿದರೆ, ‘ವನ್ಯಜೀವಿ ಸಂರಕ್ಷಣಾ ತಂಡ ರಚನೆ ಮಾಡಲಾಗಿದ್ದು, ಆ ತಂಡ ಪರಿಸ್ಥಿತಿಯನ್ನು ನಿಭಾಯಿಸುತ್ತದೆ’ ಎಂದು ಅಧಿಕಾರಿಗಳು ಉತ್ತರಿಸುತ್ತಾರೆ.

ತಂಡದಲ್ಲಿರುವ ಸಂರಕ್ಷಕರು ಮಂಗ, ಹಾವು ಹಿಡಿಯುವ ಪರಿಣತಿಯನ್ನಷ್ಟೇ ಹೊಂದಿದ್ದಾರೆ. ಆನೆ, ಚಿರತೆಯಂತಹ ಪ್ರಾಣಿಗಳು ನುಗ್ಗಿದಾಗ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವ ಕೌಶಲ ಅವರಲ್ಲಿಲ್ಲ. ಅಲ್ಲದೆ, ವನ್ಯಜೀವಿಗಳನ್ನು ಸೆರೆ ಹಿಡಿಯಲು ಬೇಕಾದ ಉಪಕರಣ ಅಥವಾ ತಂತ್ರಜ್ಞಾನ ಈ ಘಟಕದಲ್ಲಿಲ್ಲ. ಕಾಡು ಪ್ರಾಣಿ ನುಗ್ಗಿದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ರಾಜ್ಯ ಅರಣ್ಯ ಇಲಾಖೆಯನ್ನೇ ಬಿಬಿಎಂಪಿ ಅವಲಂಬಿಸಿದೆ.

ಅಧಿಕಾರಿಗಳ ಪಡೆ:
ಒಬ್ಬರು ಉಪ ಅರಣ್ಯ ಸಂರಕ್ಷಣಾಧಿಕಾರಿ, ಇಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯಕ್ಕೆ ಒಬ್ಬರಂತೆ ಎಂಟು ಜನ ಉಪ ವಲಯ ಅರಣ್ಯಾಧಿಕಾರಿಗಳನ್ನು ಬಿಬಿಎಂಪಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT