ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕರ ಕ್ರಾಂತಿ!

Last Updated 1 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಮೊಸಳೆಯೊಂದು ತೊಗರಿ ಹೊಲಕ್ಕೆ ನುಗ್ಗಿದ್ದ ಸುದ್ದಿಯು (ಪ್ರ.ವಾ., ನ. 30) ಗ್ರಾಮಸ್ಥರಿಗೆ ಮಾತ್ರವಲ್ಲ ನಮಗೂ ಆತಂಕ ತಂದಿದೆ. ಬೇಳೆಯ ಬೆಲೆ ಮೊದಲೇ ಗಗನಕ್ಕೇರಿರುವಾಗ ಮೊಸಳೆಗಳೆಲ್ಲ ಸಸ್ಯಾಹಾರಿಗಳಾಗಿಬಿಟ್ಟರೆ ಏನು ಗತಿ?

‘ಮಕರ’ ಸಂಕ್ರಾಂತಿಗೆ ತೊಗರಿ ಕಟಾವು ಮಾಡುವುದು ರೂಢಿ. ಈ ವರ್ಷ ಮಕರವೇ ತೊಗರಿ ಕಟಾವು ಮಾಡಲು ಬಂದು ಕ್ರಾಂತಿಯನ್ನೆಬ್ಬಿಸಿದೆ!

ಮೊಸಳೆಯು ಬೇಳೆಯ ಬೆಲೆ ಏರಿಕೆಗಾಗಿ ಕಣ್ಣೀರು ಹಾಕುತ್ತಿತ್ತೇ ಎಂಬುದನ್ನು ವರದಿ ತಿಳಿಸಿಲ್ಲ. ಆ ಕೆಲಸವನ್ನು ರಾಜಕಾರಣಿಗಳು ಈಗಾಗಲೇ ಮಾಡುತ್ತಿರುವುದರಿಂದ ಅದರಲ್ಲಿ ಹೊಸತೇನೂ ಇಲ್ಲ ಎಂದು ವರದಿಗಾರರಿಗೆ ಅನ್ನಿಸಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT