ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಮೇಲ್ಪಂಕ್ತಿ ಆಗದಿರಲಿ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ದೇವರಲ್ಲಿ ನಿವೇದಿಸಿದ ಪ್ರಾರ್ಥನೆಯ ಬಗ್ಗೆ ಮೂಲೆಮನೆ ರತ್ನಾಕರ ಭಿಡೆಯವರ ಅನಿಸಿಕೆ (ವಾ.ವಾ., ನ.14) ಸೂಕ್ತವಾಗಿದೆ.

‘ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ­ಯನ್ನೂ ಕೊಡು’ ಎಂಬ ಮಹಾತ್ಮ ಗಾಂಧೀಜಿಯವರ ಹಿತ­ನುಡಿ­ಯನ್ನು ಮಂತ್ರಿಗಳು ಮರೆತು, ‘ತಮ್ಮ ಮೇಲೆ ಆಪಾದನೆ ಹೊರಿಸಿದವರಿಗೆ ದೇವರು ತಕ್ಕ ಶಿಕ್ಷೆ ಕೊಡಲಿ’ ಎಂದು ಪ್ರಾರ್ಥಿಸಿ­ರುವುದು ಅಪ್ರಬುದ್ಧ ನಡೆ. ಸೇಡನ್ನು ಸೇಡಿ­ನಿಂದಲೇ ತೀರಿ­ಸುವ ಹುನ್ನಾರ. ತಮ್ಮ ಖಾತೆಗೆ ಕಳಂಕ ತರುವ ಮಾತು. ಇದು ವಿದ್ಯಾರ್ಥಿಗಳಲ್ಲಿ ಮೌಢ್ಯವನ್ನು ಬಿತ್ತುವಂತಹ ಕ್ರಮವಾಗಿದೆ. ಇದರ ಬದಲು, ‘ನನ್ನ  ಮೇಲೆ ಆರೋಪ ಹೊರಿಸಿದವರಿಗೆ ಸರಿಯಾದ ಬುದ್ಧಿ ಕೊಡು, ದೇವರೇ’ ಎಂದು ಪ್ರಾರ್ಥಿಸಿದ್ದರೆ ಮಂತ್ರಿ­ಗಳ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ಮೂಡು­ತ್ತಿತ್ತು.

ದೇವಸ್ಥಾನಕ್ಕೆ ಹೋಗಿ ತನ್ನದೇನೂ ತಪ್ಪಿಲ್ಲ­ವೆಂದು ಪ್ರಮಾಣ ಮಾಡಿದ್ದರಲ್ಲಿ ತಪ್ಪಿಲ್ಲ. ಆದರೆ, ಶಿಕ್ಷಣ ಮಂತ್ರಿಗಳು ಬೇಡಿಕೊಂಡ ರೀತಿಯನ್ನು ಮಾತ್ರ ಯಾವ ವಿದ್ಯಾರ್ಥಿಯೂ ಅನುಸರಿಸದೇ ಇರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸು­­ತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT