ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪತ್ತೆ: ಕರ್ನಾಟಕಕ್ಕೆ ಆರು ವಾರಗಳ ಗಡುವು

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದಲ್ಲಿ ನಾಪತ್ತೆಯಾ­ಗಿ­ರುವ 1236 ಮಕ್ಕಳನ್ನು ಆರು ವಾರ­ಗಳ ಒಳಗೆ ಪತ್ತೆ ಹಚ್ಚುವಂತೆ ಸುಪ್ರೀಂ­ಕೋರ್ಟ್ ಮಂಗಳವಾರ ಕರ್ನಾಟಕ ಸರ್ಕಾರಕ್ಕೆ ಗಡುವು ನೀಡಿತು.

ಮಕ್ಕಳ ಹಕ್ಕುಗಳಿಗಾಗಿ ಹೋರಾಡು­ತ್ತಿ­­­­ರುವ ಸ್ವಯಂಸೇವಾ ಸಂಸ್ಥೆ ‘ಬಚಪನ್‌ ಬಚಾವೋ ಆಂದೋ­­ಲನ್‌’, ದೇಶದ ವಿವಿಧೆಡೆ ನಾಪತ್ತೆಯಾ­ಗಿರುವ ಮಕ್ಕ­­ಳನ್ನು ಹುಡುಕಿಕೊಡಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯ­­ಮೂರ್ತಿ ಎಚ್‌.ಎಲ್‌.­ದತ್ತು, ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರ ನ್ಯಾಯಪೀಠ ಈ ಆದೇಶ ನೀಡಿದೆ.

‘ಕೋರ್ಟ್‌ ನೀಡಿದ ಗಡುವಿನ ಒಳ­ಗಾಗಿ ಎಷ್ಟು ಮಕ್ಕಳನ್ನು ಹುಡುಕಿದ್ದೀರಿ ಎಂದು ಆರು ವಾರಗಳ ನಂತರ  ನಮಗೆ ತಿಳಿಸಿ’ ಎಂದು ನ್ಯಾಯ­ಮೂರ್ತಿ­ಗ­ಳು, ಕರ್ನಾ­­­ಟಕ ಸರ್ಕಾರದ  ಪರ ವಾದ ಮಂಡಿ­ಸಿದ ಹಿರಿಯ ವಕೀಲ ಬಸವ­ಪ್ರಭು ಪಾಟೀಲ ಅವರಿಗೆ ಸೂಚಿದರು.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಹಾಗೂ ಡಿಜಿಪಿ ಲಾಲ್‌ರೋಕುಮ್‌ ಪಚಾವೊ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT