ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸುರಕ್ಷತೆಗೆ ಅಭಿಯಾನ

Last Updated 25 ನವೆಂಬರ್ 2014, 20:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಪ್ರಾಥ­ಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ನಗರ ಯೋಜನಾ ತಜ್ಞ ವಿ.ರವಿಚಂದರ್‌ ಅವರು ಆನ್‌ಲೈನ್‌ ಅಭಿಯಾನ ಆರಂಭಿಸಿದ್ದಾರೆ.

ಮಕ್ಕಳ ಸುರಕ್ಷತೆ ಕುರಿತು ನಗರದ ಶಾಲೆಗಳ ಆಡಳಿತ ಮಂಡಳಿ, ಪೋಷ­ಕರು ಹಾಗೂ ಸಾರ್ವ­ಜನಿಕರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿ­ಕೊಳ್ಳಲು ಅವರು ನವೆಂಬರ್‌ 17­ರಂದು ‘ನಮ್ಮ ಮಕ್ಕಳ ಸುರಕ್ಷತೆ (www.nmsbengaluru.org)’ ವೇದಿಕೆ ಶುರು ಮಾಡಿದ್ದಾರೆ. ಈ ವೆಬ್‌ಸೈಟ್‌ನಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ 20ಕ್ಕೂ ಅಧಿಕ ಲೇಖನಗಳು ಇವೆ.

ರಾಜಾಜಿನಗರ, ಕೋರಮಂಗಲ, ಇಂದಿರಾನಗರ ಹಾಗೂ ಎಚ್‌ಎಸ್‌­ಆರ್‌ ಬಡಾವಣೆಯಲ್ಲಿರುವ  ನ್ಯಾಷ­ನಲ್‌ ಪಬ್ಲಿಕ್‌ ಸ್ಕೂಲ್‌, ಕಲ್ಯಾಣ ನಗ­ರದ ಸಿಎಂಆರ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಹೆಣ್ಣೂರು–ಬಾಗಲೂರು ರಸ್ತೆಯ ಬೆಂಗಳೂರು ಇಂಟರ್‌­ನ್ಯಾಷ­ನಲ್‌ ಸ್ಕೂಲ್‌, ಯಲಹಂಕದ ಕೆನಡಿ­ಯನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಬನ್ನೇರುಘಟ್ಟ ರಸ್ತೆಯ ಸಂಹಿತಾ ಅಕಾಡೆಮಿ ಸೇರಿದಂತೆ 17 ಶಾಲೆಗಳು ಅಭಿಯಾನದಲ್ಲಿ ಪಾಲ್ಗೊಂಡು ಪ್ರಮಾಣ­ಪತ್ರ ಸಲ್ಲಿಸಿವೆ. ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಸಿಬ್ಬಂದಿ ನೇಮಕ, ಪೋಷಕರಿಗೆ ಜಾಗೃತಿ, ಇಲಾಖೆ ಜೊತೆ ನಡೆಸಿದ ಸಂವಹನದ ಬಗ್ಗೆ ಮಾಹಿತಿ ನೀಡಿವೆ. ಈ ಅಭಿ­ಯಾನಕ್ಕೆ 208 ಮಂದಿ ಬೆಂಬಲ ಸೂಚಿಸಿದ್ದಾರೆ.

ನಗರದ ಶಾಲೆಗಳಲ್ಲಿ ಇತ್ತೀಚಿನ ದಿನ­ಗಳಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಮಕ್ಕಳ ಸುರಕ್ಷತೆ ಬಗ್ಗೆ ಇನ್ನಷ್ಟು ಕಾಳಜಿ ವಹಿಸುವ ಅಗತ್ಯ ಇದೆ. ಇದಕ್ಕಾಗಿ ವೇದಿಕೆ ಆರಂಭಿಸಲಾ­ಗಿದೆ. ಈ ಮೂಲಕ ನಗರದ ಖಾಸಗಿ ಶಾಲೆಗಳ ಮಾದರಿ ಸುರಕ್ಷತಾ ಕ್ರಮ, ಸಲಹೆ, ಶಿಕ್ಷಣ ಹಾಗೂ ಪೊಲೀಸ್‌ ಇಲಾಖೆಯ ಮಾರ್ಗಸೂಚಿಗಳು ಸೇರಿದಂತೆ ವಿವಿಧ ವಿಷಯಗಳನ್ನು ಮುಕ್ತ­ವಾಗಿ ಚರ್ಚಿಸಬಹುದು ಎಂದು ರವಿಚಂದರ್‌ ತಿಳಿಸಿದರು.

‘ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಪರಿಣಾಮಕಾರಿ ನೀತಿ ರೂಪಿಸುವ ಅಗತ್ಯ ಇದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಅಧಿಕಾರಿಗಳು, ಶಾಲಾ ಸಿಬ್ಬಂದಿ ಹಾಗೂ ಪೋಷಕರ ಜೊತೆಗೂಡಿ ಕಾರ್ಯ­ನಿರ್ವಹಿಸಬೇಕು’ ಎಂದು ಬೆಂಗಳೂರು ಇಂಟರ್‌­ನ್ಯಾಷ­ನಲ್‌ ಸ್ಕೂಲ್‌ನ ಅಜೇಶ್‌ ವೆಬ್‌ಸೈಟ್‌­ನಲ್ಲಿ ಸಲಹೆ ನೀಡಿದ್ದಾರೆ. ಇದೇ ರೀತಿ ಹಲವರು ಸಲಹೆಗಳನ್ನು ನೀಡಿದ್ದಾರೆ.
www.nmsbengaluru.org ನಲ್ಲಿ ಆಸಕ್ತರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT