ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೆ ಅಮಾನುಷವಾಗಿ ಥಳಿಸಿದ ಮನೆಪಾಠದ ಮಹಿಳೆ

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಪಾಠ ಹೇಳಲು ಮನೆಗೆ ಬರು­ತ್ತಿದ್ದ ಮಧ್ಯ ವಯಸ್ಕ ಮಹಿಳೆ ಮೂರು ವರ್ಷದ ಮಗುವಿಗೆ ನಿರ್ದಯ­­ವಾಗಿ ಥಳಿಸಿದ ಘಟನೆ ವರದಿಯಾಗಿದೆ. ನಾಪತ್ತೆಯಾಗಿರುವ ಈ ಮಹಿಳೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇಲ್ಲಿಯ ಲೇಕ್‌ ಟೌನ್‌ ಹೋಮ್‌­ನಲ್ಲಿ­­ರುವ ಮನೆಯೊಂದರಲ್ಲಿ ನಡೆದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಾಯಿ ಮನೆಯಲ್ಲಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.

‘ಘಟನೆಯ ಕುರಿತು ದೂರು ಸ್ವೀಕರಿಸ­ಲಾಗಿದೆ. ಮಗುವಿಗೆ ಥಳಿಸಿದ ಮಹಿಳೆ­ಗಾಗಿ ಶೋಧ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ. ಈ ಮಹಿಳೆಯನ್ನು ಪೂಜಾ ಸಿಂಗ್ ಎಂದು ಗುರುತಿಸಲಾಗಿದೆ. ಮಗುವನ್ನು ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡು ಥಳಿಸಿದ್ದಾಳೆ.

ಮಗು ಚೀರುವುದನ್ನು ಕೇಳಿದ ತಾಯಿ  ಕೋಣೆಗೆ ಬಂದು ಸಿಸಿಟಿವಿ ಕ್ಯಾಮೆರಾ ನೋಡಿದಾಗ ಮಗುವನ್ನು ಹಿಗ್ಗಾಮುಗ್ಗಾ ಹೊಡೆದಿರುವುದು ಗೊತ್ತಾಗಿದೆ. ‘ಐದು ದಿನಗಳ ಹಿಂದಷ್ಟೇ ಮಹಿಳೆ­ಯನ್ನು ಮನೆ ಪಾಠಕ್ಕೆ ನೇಮಿಸಿಕೊಳ್ಳ­ಲಾಗಿತ್ತು’ ಎಂದು ಮಗುವಿನ ಪಾಲಕರು ಹೇಳಿದ್ದಾರೆ.

ಈ ಕುರಿತು ಮಗುವಿನ ಪಾಲಕರು ಮಹಿಳೆಯನ್ನು ಕೇಳಿದಾಗ ‘ಘಟನೆಯ ಕುರಿತು ಕ್ಷಮೆ ಕೇಳಿ, ಪೊಲೀಸರಿಗೆ ದೂರು ನೀಡದಂತೆ ಮನವಿ ಮಾಡಿ­ಕೊಂಡಿದ್ದಾಳೆ’. ಆದರೆ ಈ ಮಹಿಳೆಯ ಪತಿ  ಬೆದರಿಕೆ ಒಡ್ಡಿದ್ದರಿಂದ ಮಗುವಿನ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT