ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೆ ಥಳಿಸಿದ ಮನೆಪಾಠ ಶಿಕ್ಷಕಿ ಬಂಧನ

Last Updated 26 ಜುಲೈ 2014, 11:08 IST
ಅಕ್ಷರ ಗಾತ್ರ

ಕೋಲ್ಕತ್ತ(ಪಿಟಿಐ, ಐಎಎನ್ಎಸ್):
ಮೂರುವರೆ ವರ್ಷದ ಮಗುವಿಗೆ ಮನಬಂದಂತೆ ಥಳಿಸಿದ ಆರೋಪದ ಮೇಲೆ ಮನೆಪಾಠ ಮಾಡುವ ಖಾಸಗಿ ಶಿಕ್ಷಕಿಯನ್ನು ಬಂಧಿಸಲಾಗಿದ್ದು, ಶನಿವಾರ ಶಿಕ್ಷಕಿಯನ್ನು ನ್ಯಾಯಾಲಯ ಐದು ದಿನಗಳ ವರೆಗೆ ಪೊಲೀಸರ ವಶಕ್ಕೆ ನೀಡಿದೆ. 

ಬಂಧಿತ ಆರೋಪಿ ಪೂಜಾ ಸಿಂಗ್ ಬುಧವಾರ ಮಗುವನ್ನು ಥಳಿಸಿರುವ ದೃಶ್ಯ ಸಿಸಿ ಟಿ.ವಿ.ಯಲ್ಲಿ ಸೆರೆಯಾಗಿದ್ದು, ಪ್ರಕರಣದ ಸಂಬಂಧ ವಿಚಾರಣೆ ನಡೆಸಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾದ ಅಪೂರ್ವ ಕುಮಾರ್ ಅವರು ಆರೋಪಿ ಶಿಕ್ಷಕಿಯನ್ನು ಐದು ದಿನಗಳ ವರೆಗೆ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.

ಕಾಲಂ 326(ಗಂಭೀರವಾಗಿ ಗಾಯಗೊಳ್ಳುವಂತೆ ಹಲ್ಲೆ ಮಾಡುವುದು), 379(ಕಳ್ಳತ ಆರೋಪ), 308(ಮಾರಣಾಂತಿಕ ಹಲ್ಲೆ)ರ ಅಡಿ ದೂರು ದಾಖಲಾಗಿದೆ. ಶಿಕ್ಷಕಿ ಮಗುವನ್ನು ನಿಷ್ಕರುಣೆಯಿಂದ ಮನ ಬಂದಂತೆ ಕಾಲಿನಿಂದ ಥಳಿಸಿರುವುದು ಸಿಸಿ ಟಿ.ವಿ.ಯಲ್ಲಿ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಮಗುವಿನ ಪೊಷಕರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT