ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ಆರೈಕೆ ರಜೆ ನೀಡಿ

ಅಕ್ಷರ ಗಾತ್ರ

ಕೇಂದ್ರ ಸರ್ಕಾರ ತನ್ನ ಮಹಿಳಾ ನೌಕರರಿಗೆ ಪ್ರಸೂತಿ ರಜೆಯೊಂದಿಗೆ ಎರಡು ವರ್ಷಗಳ ಕಾಲ ಮಗುವಿನ ಆರೈಕೆಗಾಗಿ ರಜೆಯನ್ನು ನೀಡು­ತ್ತಿರುವುದು  ತಿಳಿದಿರುವ ವಿಷಯ.

ಕರ್ನಾಟಕ ರಾಜ್ಯ ಸರ್ಕಾರವೂ ಎರಡು ವರ್ಷಗಳ ಕಾಲ ಅರ್ಹ ಮಹಿಳಾ ನೌಕರರಿಗೆ ಮಗುವಿನ ಆರೈಕೆಯ ರಜೆ  ನೀಡಲು ಮುಂದಾ­ಗಲಿ. ಈಗಿನ ಕಾಲದಲ್ಲಿ ಗಂಡ–ಹೆಂಡತಿ ಇಬ್ಬರೂ ದುಡಿಯುವುದು ಅನಿ­ವಾರ್ಯ. ಇಂತಹ ಸಮಯದಲ್ಲಿ ಪುಟ್ಟ ಮಕ್ಕಳನ್ನು ನೋಡಿ­ಕೊಳ್ಳಲು ಯಾರೂ ಇಲ್ಲದೆ, ಆರೈಕೆ ಕಷ್ಟ­ವಾಗಿದೆ. ಇದರಿಂದ ಮಗುವಿನ ಸ್ಥಿತಿ ಅತಂತ್ರ ವಾಗು­ತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಮನಸ್ಸು ಮಾಡಿ ಒಂದು ವರ್ಷ ಕಾಲ ಪೂರ್ಣ­ವೇತನ  ಹಾಗೂ ನಂತರದ ಒಂದು ವರ್ಷ ಅರ್ಧವೇತನ ನೀಡಿ, ಮಹಿಳಾ ನೌಕರರ ವೃತ್ತಿ ಜೀವನಕ್ಕೆ ತೊಂದರೆಯಾಗದಂತೆ ಈ ಸೌಲಭ್ಯ ಒದಗಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT