ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ: ಬಾಂಬ್ ಸ್ಫೋಟಕ್ಕೆ 3 ಬಲಿ

Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಇಂಫಾಲ (ಐಎಎನ್‌ಎಸ್‌): ರಸ್ತೆ ಬದಿ ಇರಿಸಿದ್ದ ಪ್ರಬಲ ಬಾಂಬ್ ಸ್ಫೋಟಿಸಿ ಮೂವರು ಕಾರ್ಮಿ­ಕರು ಮೃತಪಟ್ಟು, ನಾಲ್ವರು ಗಾಯ­ಗೊಂಡಿ­ರುವ ಘಟನೆ ಮಣಿ­ಪುರದ ರಾಜಧಾನಿ ಇಂಫಾಲದಲ್ಲಿ ಭಾನುವಾರ ನಡೆದಿದೆ.

ಮೃತರನ್ನು ಶಿವ ಯಾದವ್ (35), ಲಾಲನ್ (35) ಹಾಗೂ ಕುಸುಮ್ ಪಂಡಿತ್ (60) ಎಂದು ಗುರುತಿಸಲಾ­ಗಿದೆ. ಮೂವರೂ ಹೊರ ರಾಜ್ಯದಿಂದ ವಲಸೆ ಬಂದವ­ರಾಗಿದ್ದಾರೆ. ಮಾರು­ಕಟ್ಟೆ ಮತ್ತು ಇಂಫಾಲ ನಗರ ಪೊಲೀಸ್ ಠಾಣೆ ಸಮೀಪದ ಕುಯೊತಾಂಗ್ ಪ್ರದೇಶದಲ್ಲಿ ಬೆಳಿಗ್ಗೆ 6 ಗಂಟೆಗೆ ಘಟನೆ ನಡೆದಿದೆ.

ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸಿ ಸ್ಫೋಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ಹೊಣೆಯನ್ನು ಇದುವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ. ಡಿ. 15ರಂದು ನಗರದ ಮಾರುಕಟ್ಟೆ­ಯೊಂದರಲ್ಲಿ ಉಗ್ರರು ನಡೆಸಿದ್ದ ಸ್ಫೋಟ­ದಲ್ಲಿ ಇಬ್ಬರು ಯುವಕರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT