ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ನಿಗಾ

Last Updated 28 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ವಡೋದರಾ (ಪಿಟಿಐ): ಲೋಕಸಭಾ ಚುನಾವಣೆ ವೇಳೆ ಗುಜ­ರಾತ್‌ನ ವಡೋದರಾ ಕ್ಷೇತ್ರದಲ್ಲಿನ ಎಲ್ಲಾ 1,591 ಮತಗಟ್ಟೆ­ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಚುನಾವಣಾ ಆಯೋಗ ಅಳವಡಿಸಲಿದೆ.

ದೇಶದಲ್ಲಿ ಇಂತಹ ಪ್ರಯೋಗ ನಡೆಯುತ್ತಿರುವುದು ಇದೇ ಮೊದಲು. ಸಿಸಿಟಿವಿ ಕ್ಯಾಮೆರಾದ ಕಣ್ಗಾವಲಿನ ಜೊತೆಗೆ ವಡೋದ­ರಾದ ಎಲ್ಲಾ ಮತ­ಗಟ್ಟೆಗಳಲ್ಲಿ ನಡೆಯಲಿ­ರುವ ಚುನಾ­ವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸ­ಲಾಗು­­ವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್‌
ನವದೆಹಲಿ (ಐಎಎನ್‌ಎಸ್‌):
ಸಿಬಿಐನ ಹೆಚ್ಚುವರಿ ನಿರ್ದೇಶ­ಕಿ­ಯಾಗಿ ಐಪಿಎಸ್‌ ಅಧಿಕಾರಿ ಅರ್ಚನಾ ರಾಮಸುಂದರಮ್‌ ಅವರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸೋಮ­ವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಪತ್ರಕರ್ತ ಹಾಗೂ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ ವಿನೀತ್‌ ನರೇನ್‌  ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ­ಗಳಾದ ಆರ್‌.ಎಂ. ಲೋಧಾ, ಮದನ್‌ ಬಿ.ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಅವರ­ನ್ನೊ­ಳಗೊಂಡ ನ್ಯಾಯ-­ಪೀಠ,  ಕೇಂದ್ರ ಸರ್ಕಾರ ಮತ್ತು ಇತರರಿಗೆ ನೋಟಿಸ್‌ ಜಾರಿ ಮಾಡಿತು.

ಕೇಂದ್ರ ಜಾಗೃತ ಆಯೋಗ ಕಾಯ್ದೆ ಮತ್ತು ದೆಹಲಿ ವಿಶೇಷ ಪೊಲೀಸ್ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಮನಸೋ ಇಚ್ಛೆ ಈ ನೇಮಕ ಮಾಡ­ಲಾಗಿದೆ ಎಂದು ಅರ್ಜಿಯಲ್ಲಿ ದೂರ­ಲಾಗಿದೆ.

‘ಜನರೇ ಕೋರ್ಟ್‌ ಮೆಟ್ಟಿಲೇರಬಹುದು’
ನವದೆಹಲಿ (ಪಿಟಿಐ):
ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸುವ ಸುಳ್ಳು ಪ್ರಮಾಣಪತ್ರಗಳ ವಿರುದ್ಧ ಜನರೇ ನೇರವಾಗಿ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ಪ್ರಮಾಣ ಪತ್ರಗಳಲ್ಲಿ ಸುಳ್ಳು ಮಾಹಿತಿ­ಗಳನ್ನು ನೀಡಲಾಗುತ್ತಿದೆ ಎಂಬ ದೂರುಗಳು ಭಾರಿ ಸಂಖ್ಯೆಯಲ್ಲಿ ಬರು­ತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ರೀತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT