ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ನಿಷೇಧ ಕಾಯ್ದೆ ಜಾರಿಗೆ ತನ್ನಿ

ಪ್ರತಿಪಕ್ಷಗಳಿಗೆ ಆರೆಸ್ಸೆಸ್‌, ಬಿಜೆಪಿ, ವಿಎಚ್‌ಪಿ ಸವಾಲು
Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ/ಕೊಚ್ಚಿ/ನವದೆಹಲಿ  (ಪಿಟಿಐ): ‘ಮತಾಂ­ತರ ಬೇಡ ಎನ್ನುವು­ದಾ­ದರೆ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾ­ಗಿರುವ ಧಾರ್ಮಿಕ ಮತಾಂತರ ನಿಷೇಧ  ಕಾಯ್ದೆಗೆ ಬೆಂಬಲ ನೀಡಿ’ ಎಂದು ಆರ್‌ಎಸ್‌ಎಸ್‌, ವಿಎಚ್‌ಪಿ, ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಶನಿವಾರ ವಿರೋಧ ಪಕ್ಷಗಳಿಗೆ ಸವಾಲು ಹಾಕಿವೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ, ವಿಎಚ್‌ಪಿ ಅಂತರ­ರಾಷ್ಟ್ರೀಯ ಅಧ್ಯಕ್ಷ ಪ್ರವೀಣ್‌ ತೋಗಾಡಿಯಾ, ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಅವರು ‘ಮತಾಂತರ ಕಾಯ್ದೆ ನಿಷೇಧ ಕಾಯ್ದೆ ಜಾರಿಗೆ ಸಿದ್ಧ’ ಎಂದು ಘೋಷಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್‌ ಸ್ವರ್ಣ ಮಹೋ­ತ್ಸವ ಅಂಗವಾಗಿ ಕೋಲ್ಕತ್ತ­ದಲ್ಲಿ ನಡೆದ ಹಿಂದೂ ಸಮ್ಮೇ­ಳನದಲ್ಲಿ ಮಾತನಾಡಿದ ಆರ್ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಮತಾಂತರ ಬೇಡ ಎನ್ನುವುದಾ­ದರೆ ಹಿಂದೂಗಳನ್ನೂ ಮತಾಂ­ತರ ಮಾಡ­ಬೇಡಿ ಎಂದು ಅಲ್ಪ­ಸಂಖ್ಯಾತ­ರಿಗೆ ತಾಕೀತು ಮಾಡಿದರು. 

ಅಲ್ಪಸಂಖ್ಯಾತ­ರನ್ನು ಹಿಂದೂ ಧರ್ಮಕ್ಕೆ ಮರಳಿ ಮತಾಂತರ ಮಾಡು­ತ್ತಿರುವ ಸಂಘ ಪರಿವಾರದ ವಿವಾದಿತ ‘ಘರ್‌ ವಾಪಸಿ’  (ಮರಳಿ ಮನೆಗೆ) ಕಾರ್ಯ­ಕ್ರ­ಮ­ವನ್ನು    ಬಲವಾಗಿ ಸಮರ್ಥಿ­ಸಿ­­ಕೊಂಡ ಅವರು, ಸಂಘ  ಪರಿವಾ­ರ ಮರು ಮತಾಂತರ­ವನ್ನು ಬೆಂಬಲಿ­ಸು­ತ್ತದೆ. ಆ ನಿಲುವಿನಲ್ಲಿ ಯಾವುದೇ ಬದ­ಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿ­ದರು.

ಹಿಂದೂಗಳಿಂದಲೇ ಭಾರತ ಸುರಕ್ಷಿತ
ಹಿಂದೂಗಳು ಇಲ್ಲಿ ಇರುವವರೆಗೂ ಭಾರತ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಹಿಂದೂ­ಗಳು ಇಲ್ಲದಿದ್ದರೆ  ಭಾರ­ತೀಯ­ರೆಲ್ಲರೂ ಅಪಾಯಕ್ಕೆ ಸಿಲುಕ­ಬೇಕಾ­­ಗುತ್ತದೆ. ಇಡೀ ವಿಶ್ವದ ಒಳಿತಿಗಾಗಿ ಬಲಾಢ್ಯ ಹಿಂದೂ ಸಮಾಜ ನಿರ್ಮಾಣ ಅತ್ಯಗತ್ಯ.
– ಮೋಹನ್‌ ಭಾಗವತ್‌ ಆರ್‌ಎಸ್‌ಎಸ್‌ ಮುಖ್ಯಸ್ಥ

ರಾಷ್ಟ್ರ ವಿರೋಧಿಗಳು:  ಆಗ್ರಾ ಮರು ಮತಾಂತರ ಕುರಿತು ಸಂಸತ್‌ನಲ್ಲಿ ವಿರೋಧಿಸುತ್ತಿರುವವರು  ಹಿಂದೂ ಧರ್ಮ ಹಾಗೂ ಭಾರತದ ವಿರೋಧಿ­ಗಳು ಎಂದು ವಿಶ್ವ ಹಿಂದೂ ಪರಿಷತ್‌ ಅಂತರರಾಷ್ಟ್ರೀಯ ಅಧ್ಯಕ್ಷ ಪ್ರವೀಣ್‌ ತೋಗಾಡಿಯಾ ಆರೋಪಿಸಿದರು. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಲ್ಲಿ ಅದನ್ನು ವಿಶ್ವ ಹಿಂದೂ ಪರಿ­ಷತ್‌ ಬೆಂಬಲಿಸು­ವುದಾಗಿ ಅವರು ಘೋಷಿಸಿದರು.

ಅಮಿತ್‌ ಷಾ ಸವಾಲು: ಕೊಚ್ಚಿಯಲ್ಲಿ ಮಾತನಾ­ಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ‘ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಎನ್‌ಡಿಎ ಸರ್ಕಾರ ಸಿದ್ಧ. ಜಾತ್ಯತೀತರೆಂದು ಕರೆದು­ಕೊಳ್ಳುವವರು ಸರ್ಕಾ­ರದ ಈ ನಿಲು­ವನ್ನು ಸಂಸತ್‌ನಲ್ಲಿ ಬೆಂಬ­ಲಿಸಲಿ’ ಎಂದು ಸವಾಲು ಹಾಕಿದರು.  ‘ಬಲವಂತದ ಮತಾಂತರದ ವಿರುದ್ಧ ಮೊದಲಿನಿಂದಲೂ ಬಿಜೆಪಿಯೊಂದೇ ಧ್ವನಿ ಎತ್ತುತ್ತಿರುವ ಏಕೈಕ ಪಕ್ಷ’ ಎಂದು ಅವರು ಸಮರ್ಥಿಸಿಕೊಂಡರು.

‘ಅನಗತ್ಯ ವಿಜೃಂಭಣೆ’: ಮತಾಂತರ ಹಾಗೂ ಉತ್ತಮ ಆಡ­ಳಿತ ದಿನಾಚರಣೆ­ಯಂತಹ ಸಣ್ಣಪುಟ್ಟ ವಿಷ­ಯ­­ಗಳನ್ನು ವಿರೋಧ ಪಕ್ಷಗಳು ಅನ­ಗತ್ಯವಾಗಿ ದೊಡ್ಡ ವಿವಾದವನ್ನಾಗಿ ಬಿಂಬಿ­ಸುತ್ತಿವೆ ಎಂದು  ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆ ಸಚಿವ ರವಿಶಂಕರ್‌ ಪ್ರಸಾದ್‌ ಅಸಮಾ­ಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT