ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಇಬ್ಬರಿಗೆ ವೀಸಾ ನಿರಾಕರಣೆ

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಧರ್ಮಶಾಲಾದಲ್ಲಿ ನಡೆಯಲಿರುವ ‘ಪ್ರಜಾಪ್ರಭುತ್ವ ಮತ್ತು ಚೀನಾ’ ವಿಚಾರಗೋಷ್ಠಿಯಲ್ಲಿ ಭಾಗವ ಹಿಸಲು ಬಯಸಿದ್ದ ಚೀನಾ ವಿರೋಧಿ ಧೋರಣೆ ಹೊಂದಿದ ಲು ಜಿಂಗುಹಾ ಮತ್ತು ರಾ ವೊಂಗಾ ಅವರಿಗೆ ಭಾರತ ಸರ್ಕಾರ ವೀಸಾ ನಿರಾಕರಿಸಿದೆ. ಈ ಮೊದಲು ಡೋಲ್ಕುನ್ ಇಸಾ ಎಂಬವರಿಗೆ  ವೀಸಾ ನಿರಾಕರಿಸಲಾಗಿತ್ತು.

ಲು ಜಿಂಗುಹಾ  ದಾಖಲೆಗಳು ಸರಿ ಇಲ್ಲ ಮತ್ತು ಅವರ ಭೇಟಿಯ ಉದ್ದೇಶ ಸ್ಪಷ್ಟವಾಗಿಲ್ಲ. ರಾ ವೊಂಗಾ ನೀಡಿರುವ ಮಾಹಿತಿ ತಾಳೆಯಾಗದ ಕಾರಣ ವೀಸಾ ನಿರಾಕರಿಸಲಾಗಿದೆ ಎಂದು ವಿದೇಶಾಂಗ ಕಚೇರಿಯ ಮೂಲಗಳು ತಿಳಿಸಿವೆ.

ನ್ಯೂಯಾರ್ಕ್‌ನಲ್ಲಿ ಏರ್‌ ಇಂಡಿಯಾ ವಿಮಾನ ಹತ್ತುವಾಗ ವೀಸಾ ರದ್ದಾಗಿರುವ ವಿಚಾರವನ್ನು ಲು ಜಿಂಗುಹಾಗೆ ತಿಳಿಸಲಾಯಿತು. ಎಲೆಕ್ಟ್ರಾನಿಕ್ ವೀಸಾ ನೀಡಲಾಗಿದೆ ಎಂಬ ಇ–ಮೇಲ್‌ ಸಂದೇಶ ತಮಗೆ ಬಂದಿತ್ತು  ಎಂದು ಜಿಂಗುಹಾ ತಿಳಿಸಿದ್ದಾರೆ. ಚೀನಾ ಒತ್ತಡಕ್ಕೆ ಮಣಿದು ಭಾರತ ಈ ಕ್ರಮ ತೆಗೆದುಕೊಂಡಿದೆ ಎಂಬ ಟೀಕೆ ಕೇಳಿಬರುತ್ತಿದೆ.

ವೀಸಾ ನಿರಾಕರಣೆಗೆ ಚೀನಾ ಒತ್ತಡ ಕಾರಣವಲ್ಲ: ಡೋಲ್ಕುನ್‌ ಇಸಾಗೆ ವೀಸಾ ನಿರಾಕರಿಸಲು ಚೀನಾದ ಒತ್ತಡ ಕಾರಣ ಅಲ್ಲ. ಇಸಾ ಅವರು ಕೆಲವು ಮಾಹಿತಿಗಳನ್ನು ಮುಚ್ಚಿಟ್ಟಿದ್ದರಿಂದ ಅವರಿಗೆ ವೀಸಾ ನಿರಾಕರಿಸಲಾಯಿತು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

‘ಇ–ವೀಸಾ ಮೂಲಕ ಇಸಾ ಅವರು ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಅವರಿಗೆ ವೀಸಾ ನೀಡಲಾಗಿತ್ತು. ಆದರೆ ವೀಸಾ ದೊರೆತ ಕೂಡಲೇ ಅವರು  ಸಮಾವೇಶದಲ್ಲಿ ಭಾಗವಹಿಸುವುದಾಗಿ ಪ್ರಕಟಿಸಿದ್ದಾರೆ. ಜತೆಗೆ ಅವರ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗಿರುವುದನ್ನು ಮುಚ್ಚಿಟ್ಟಿದ್ದಾರೆ. ಈ ಕಾರಣಕ್ಕೆ ವೀಸಾ ರದ್ದುಪಡಿಸಲಾಗಿದೆ’ ಎಂದು ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT