ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ತಪ್ಪಿಸಿಕೊಂಡ ರಾಮ್‌ಪಾಲ್‌

ಶುಕ್ರವಾರ ಹಾಜರುಪಡಿಸಲು ಹೈಕೋರ್ಟ್‌ ಆದೇಶ
Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬರ್‌ವಾಲಾ, ಹರಿಯಾಣ (ಪಿಟಿಐ): ನ್ಯಾಯಾಂಗ ನಿಂದನೆ ಪ್ರಕರಣವೊಂದ­ರಲ್ಲಿ ಸೋಮವಾರ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗೆ ಹಾಜರಾ­ಗ­­ಬೇಕಿದ್ದ ವಿವಾದಾತ್ಮಕ ಧಾರ್ಮಿಕ ಗುರು ರಾಮ್‌ಪಾಲ್‌ ಅವರನ್ನು ಸೋಮ­ವಾರ ‘ಚಿಕಿತ್ಸೆ’ಗಾಗಿ ಆಶ್ರಮ­ದಿಂದ ರಹಸ್ಯ ಸ್ಥಳಕ್ಕೆ ಕರೆದೊಯ್ಯ­ಲಾಗಿದೆ. ಪಂಜಾಬ್‌ ಮತ್ತು ಹರಿ­ಯಾಣ ಹೈಕೋರ್ಟ್‌ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಿತ್ತು.

ಸೋಮವಾರ ಹೈಕೋರ್ಟ್‌ ಮುಂದೆ ಹಾಜರಾಗುವಂತೆ ಗಡುವು ನೀಡಲಾಗಿತ್ತು. ಆದರೆ ಅನಾರೋಗ್ಯದ ಕಾರಣ ನೀಡಿ ಅವರು ಹಾಜರಾಗಿಲ್ಲ.  ಹಿಸ್ಸಾರ್‌ನಲ್ಲಿನ ಅವರ ಆಶ್ರಮದಲ್ಲಿ ಸೇರಿದ್ದ ನೂರಾರು ಜನರು ರಾಮ್‌ಪಾಲ್‌ ಅವರನ್ನು ಬಂಧಿಸಲು ಬಂದಿದ್ದ ಪೊಲೀಸರಿಗೆ ಅಡ್ಡಿಪಡಿಸಿದರು.

ರಾಮ್‌ಪಾಲ್‌ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ನಂತರ ಆಶ್ರಮದ ವಕ್ತಾರ ರಾಜ್‌ ಕಪೂರ್‌ ತಿಳಿಸಿದರು. ಆದರೆ ಅವರು ಯಾವ ಆಸ್ಪತ್ರೆಯಲ್ಲಿದ್ದಾರೆ ಎಂಬ ವಿವರ ನೀಡಲು ನಿರಾಕರಿಸಿದರು.

ರಾಮ್‌ಪಾಲ್‌ ಅನಾರೋಗ್ಯ ಪೀಡಿ ತ­ರಾಗಿದ್ದಾರೆ. ಅವರು ಕೋರ್ಟ್‌ಗೆ ಹಾಜರಾಗುವುದರಿಂದ ತಪ್ಪಿಸಿ ಕೊಳ್ಳುತ್ತಿಲ್ಲ. ಆರೋಗ್ಯ ಸರಿ ಹೋದರೆ ತಕ್ಷಣವೇ ಅವರು ಕೋರ್ಟ್‌ಗೆ ಹಾಜರಾಗುತ್ತಾರೆ. ಸ್ವಲ್ಪ ಸಮಯ ಕೊಡಿ ಎಂದು ರಾಮ್‌ಪಾಲ್‌ ಪರ ವಕೀಲರು  ಕೋರ್ಟ್‌ಗೆ ವಿನಂತಿ ಮಾಡಿ ಕೊಂಡಿದ್ದಾರೆ. ಆದರೆ ಹೈಕೋರ್ಟ್‌ ಮತ್ತೆ ರಾಮ್‌ ಪಾಲ್‌ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ.

ಶುಕ್ರವಾರ ದೊಳಗೆ ಅವರನ್ನು ಹಾಜರು ಪಡಿಸುವಂತೆ ಪೊಲೀಸರಿಗೆ ಆದೇಶಿಸಿದೆ. ರಾಮ್‌ಪಾಲ್‌ ಬಂಧನ ಕ್ಕಾಗಿ ಹರಿಯಾಣ ಸರ್ಕಾರ ಕೇಂದ್ರದ ನೆರವು ಕೋರಿದೆ. ಚಟುವಟಿಕೆ ಮೇಲೆ ನಿಗಾ ಇರಿಸುವುದಕ್ಕೆ ಚಾಲಕರಹಿತ ವಿಮಾನ ಒದಗಿಸುವಂತೆ ಕೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT