ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಿಗ್‌ ಬಿ ‘ಸರ್ಕಾರ್‌’

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಮತ್ತೊಂದು ‘ಸರ್ಕಾರ್‌’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಸರ್ಕಾರ್‌’, ‘ಸರ್ಕಾರ್‌ ರಾಜ್‌’ ಚಿತ್ರಗಳ ಬಳಿಕ ‘ಸರ್ಕಾರ್‌ 3’ ಸಿನಿಮಾದಲ್ಲಿ ಬಚ್ಚನ್‌ ನಟಿಸಲಿದ್ದಾರೆ. ಇಷ್ಟು ಮಾತ್ರವಲ್ಲ, ಹಿಂದಿನ ಎರಡೂ ಸರ್ಕಾರ್‌ಗಳನ್ನು ನಿರ್ದೇಶಿಸಿದ್ದ ರಾಮ್‌ ಗೋಪಾಲ್‌ ವರ್ಮಾ ಈ ಚಿತ್ರಕ್ಕೂ ಆಕ್ಷನ್‌–ಕಟ್‌ ಹೇಳುತ್ತಿದ್ದಾರೆ.

‘ವರ್ಮಾ ಮತ್ತು ನಾನು ಚಿತ್ರದ ಕಥೆ ಹೆಣೆಯುವ ಕೆಲಸದಲ್ಲಿ ತೊಡಗಲಿದ್ದೇವೆ. ಆದಷ್ಟು ಬೇಗ ಚಿತ್ರಕಥೆ ಅಂತಿಮಗೊಳಿಸಲಾಗುವುದು’ ಎಂದು ಬಚ್ಚನ್‌ ಇತ್ತೀಚೆಗೆ ತಿಳಿಸಿದ್ದಾರೆ.

2011ರಲ್ಲಿ ‘ಬುಡ್ಡಾ ಹೋಗ ತೇರಾ ಬಾಪ್‌’ ಚಿತ್ರದ ಚಿತ್ರೀಕರಣದ ವೇಳೆ ರಾಮ್‌ ಗೋಪಾಲ್‌ ವರ್ಮಾ ಮತ್ತು ಅಮಿತಾಭ್‌ ಬಚ್ಚನ್‌ ಮಧ್ಯೆ ವೈಮನಸ್ಯ ಉಂಟಾಗಿತ್ತು. ಆದರೆ, ಅದೆಲ್ಲ ಹಳೆ ಕಥೆ ಎಂದಿರುವ ಬಚ್ಚನ್‌ – ವರ್ಮಾ ಹೊಸ ‘ಸರ್ಕಾರ್‌’ ಕಥೆ ಹೆಣೆಯುವ ಬಗ್ಗೆ ಸದ್ಯ ತಲೆಕೆಡಿಸಿಕೊಂಡಿದ್ದಾರೆ. ಅಲ್ಲದೆ ಅಂಥದ್ದೇನೂ ನಮ್ಮ ಮಧ್ಯೆ ನಡೆದೇ ಇಲ್ಲ ಎಂದಿದ್ದಾರೆ ಬಿಗ್‌ ಬಿ.

‘ನಮ್ಮಿಬ್ಬರ ಮಧ್ಯೆ ಯಾವ ವೈಮನಸ್ಯ ಇಲ್ಲ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ವರ್ಮಾ ನನ್ನ ಹತ್ತಿರದ ಗೆಳೆಯ. ನಾನು ಅವರ ಜತೆ ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಅವರೊಂದಿಗೆ ಕೆಲಸ ಮಾಡುವುದು ನನಗಿಷ್ಟ’ ಎಂದಿದ್ದಾರೆ ಬಚ್ಚನ್‌.

ಬಚ್ಚನ್‌ ಮತ್ತು ವರ್ಮಾ ಒಟ್ಟಾಗಿ ಕೆಲಸ ಮಾಡುವ ಈ ಚಿತ್ರ ಯಾವಾಗ ಸೆಟ್ಟೇರಲಿದೆ, ಯಾವಾಗ ಬೆಳ್ಳಿಪರದೆ ಮೇಲೆ ಮೂಡಿಬರಲಿದೆ ಎಂಬ ಕುತೂಹಲ ಸದ್ಯ ಬಿಟೌನ್‌ನಲ್ಲಿ ಬೆಚ್ಚಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT