ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಿಂಚಿದ ಅರವಿಂದ್‌

ಅಖಿಲ ಭಾರತ ಅಂತರ ವಿ.ವಿ. ಈಜು: ಮುಂದುವರಿದ ಮೀನಾಕ್ಷಿ ಪದಕ ಬೇಟೆ
Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಯೂತ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಎಂ. ಅರವಿಂದ್‌ ಮತ್ತು ಜೈನ್‌ ವಿಶ್ವವಿದ್ಯಾಲಯದ ವಿ.ಕೆ.ಆರ್. ಮೀನಾಕ್ಷಿ ಅವರು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿ.ವಿ. ಈಜು ಚಾಂಪಿಯನ್‌ಷಿಪ್‌ನಲ್ಲಿ ಬುಧವಾರವೂ ಪದಕದ ‘ಬೇಟೆ’ ಮುಂದುವರಿಸಿದರು.

ಪುರುಷರ 200ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಅರವಿಂದ್ ಪ್ರಾಬಲ್ಯ ಮೆರೆದರು. ಎರಡು ನಿಮಿಷ 11.88ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ  ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ದೆಹಲಿಯ ವಿ.ವಿ.ಯ ಪುಲ್ಕಿತ್‌ (ಕಾಲ: 2:16.23ಸೆ.) ಬೆಳ್ಳಿ ಜಯಿಸಿದರೆ, ಪಂಜಾಬ್‌ ವಿ.ವಿ.ಯ ಜಶನ್‌ದೀಪ್‌ ಸಿಂಗ್‌ (ಕಾಲ: 2:16.48ಸೆ.) ಕಂಚು ಗೆದ್ದರು.

ಮಹಿಳೆಯರ 200ಮೀ. ವೈಯಕ್ತಿಕ ಮೆಡ್ಲೆ ಮತ್ತು 100ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಮೀನಾಕ್ಷಿ ಬಂಗಾರ ಗೆದ್ದುಕೊಂಡರು. ಮೆಡ್ಲೆಯಲ್ಲಿ ಎರಡು ನಿಮಿಷ 31.55ಸೆ.ಗಳಲ್ಲಿ ಗುರಿ ತಲುಪಿ ಮೂರು ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು. ತಮ್ಮದೇ ತಂಡದ ಪೂರ್ವಾ ಶೇಟಿ (ಕಾಲ: 2:40.40ಸೆ.) ಹೆಸರಿನಲ್ಲಿದ್ದ ದಾಖಲೆಯಿತ್ತು.

ಬುಧವಾರ ಪದಕ ಗೆದ್ದವರು:
ಪುರುಷರ ವಿಭಾಗ:
50ಮೀ. ಫ್ರೀಸ್ಟೈಲ್‌: ನೀಲ್ ಕಂಟ್ರ್ಯಾಕ್ಟರ್‌ (ಗುಜರಾತ್‌ ವಿ.ವಿ., ಕಾಲ: 24.81ಸೆ.)–1, ಅಮನ್‌ ಘಾಯ್ (ಗುರುನಾನಕ್‌ ದೇವ್ ವಿ.ವಿ. ಕಾಲ: 24.93ಸೆ.)–2, ಪುಲ್ಕಿತ್‌ (ದೇವಿ ಲಾಲ್‌ ವಿ.ವಿ., ಕಾಲ: 25.14ಸೆ.)–3.
100ಮೀ. ಬ್ಯಾಕ್‌ಸ್ಟ್ರೋಕ್‌: ಎಂ. ಅರವಿಂದ್ (ವಿಟಿಯು; 59.75ಸೆ.)–1, ಕೆ. ಅಬ್ಬಾಸುದ್ದೀನ್ (ಅಣ್ಣಾ ವಿ.ವಿ., 1:03.21ಸೆ.)–2, ರಕ್ಷಿತ್‌ ಶೆಟ್ಟಿ (ಜೈನ್‌ ವಿ.ವಿ., 1:04.35ಸೆ.)–3.
200ಮೀ. ವೈಯಕ್ತಿಕ ಮೆಡ್ಲೆ: ಎಂ. ಅರವಿಂದ್‌ (ವಿಟಿಯು; 2:11.88ಸೆ.)–1, ಪುಲ್ಕಿತ್‌ (ದೆಹಲಿ ವಿ.ವಿ.; 2:16.23ಸೆ.)–2, ಜಶನ್‌ದೀಪ್‌ ಸಿಂಗ್‌ (ಪಂಜಾಬ್; 2:16.48ಸೆ.).
4X100ಮೀ. ಫ್ರೀಸ್ಟೈಲ್‌ ರಿಲೇ: ಪಂಜಾಬ್‌ ವಿ.ವಿ. (ಕಾಲ: 3:47.10ಸೆ.), ಮದ್ರಾಸ್‌ ವಿ.ವಿ. (ಕಾಲ: 3:50.68ಸೆ.)–2, ವಿಟಿಯು (ಕಾಲ: 3:51.87ಸೆ.)–3.

ಮಹಿಳಾ ವಿಭಾಗ:
50ಮೀ. ಫ್ರೀಸ್ಟೈಲ್‌: ಟಿ. ಸ್ನೇಹಾ (ಕಾಲ: 28.82ಸೆ.)–1, ಮೀನಾಕ್ಷಿ (ಜೈನ್‌; 29.25ಸೆ.)–2, ಅಂಜಲಿ ನಾಯರ್‌ (ದೆಹಲಿ ವಿ.ವಿ. 29.66ಸೆ.)–3.
100ಮೀ. ಬ್ಯಾಕ್‌ಸ್ಟ್ರೋಕ್‌: ಮೀನಾಕ್ಷಿ (ವಿಟಿಯು; 1:07.95ಸೆ.)–1, ಆರ್‌. ಗುಲ್ಜಾನ್‌ (ಎಂಎಎಸ್ ವಿ.ವಿ., 1:12.60ಸೆ.)–2, ಅನನ್ಯಾ ಪಾಣಿಗ್ರಹಿ (ಎಂಯುಎಚ್ಎಸ್‌ಸಿ; 1:13.88ಸೆ.)–3.
200ಮೀ. ವೈಯಕ್ತಿಕ ಮೆಡ್ಲೆ: ಮೀನಾಕ್ಷಿ (ಜೈನ್‌ ವಿ.ವಿ. 2:31.55ಸೆ.)–1, ಪೂರ್ವಾ ಶೇಟಿ (ಜೈನ್‌, 2:40.40ಸೆ.)–2, ಶ್ರಿಸ್ತಿ ನಾಗ್ (ಬಿಐಎಲ್‌; 2:42.19ಸೆ.)–3. 4X100ಮೀ. ಫ್ರೀಸ್ಟೈಲ್‌ ರಿಲೇ: ದೆಹಲಿ (4:25.02ಸೆ.)–1, ಕೇರಳ (4:26.20ಸೆ.)–2, ಕ್ಯಾಲಿಕಟ್‌ (ಕಾಲ: 4:32.81ಸೆ.)–3.
ಡೈವಿಂಗ್‌ (ಪುರುಷರ ವಿಭಾಗ, 1 ಎಂ. ಸ್ಪ್ರಿಂಗ್‌ ಬೋರ್ಡ್‌): ಗೌರವ್‌ ರಘುವಂಶಿ (238.10)–1, ಅಥರ್ವ್‌ ಅಗರವಾಲ್‌ (205.85ಸೆ.)–2, ಇಂದರ್‌ಜಿತ್‌ ಶಿಂಧೆ (187.50)–3. ಮಹಿಳಾ ವಿಭಾಗ (1 ಎಂ. ಸ್ಪ್ರಿಂಗ್‌ ಬೋರ್ಡ್‌): ವಿ. ಸುಷ್ಮಿತಾ (ಗೋವಾ, 146.55)–1, ನಮ್ಮಿ ತೇಜಾ (ವಿಟಿಯು; 138.20)–2, ಕೌಸುಬ್‌ (ದೆಹಲಿ; 126.5)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT