ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ 200ಕ್ಕೂ ಹೆಚ್ಚು ಭಾರತೀಯರು ವಾಪಸ್‌

Last Updated 6 ಜುಲೈ 2014, 10:21 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಂಘರ್ಷ ಪೀಡಿತ  ಇರಾಕ್‌ನ ನಜಾಫ್‌ನಿಂದ 200ಕ್ಕೂ ಅಧಿಕ ಭಾರತೀಯರು ಇರಾಕ್‌ ಏರ್‌ವೇಸ್‌ನ ವಿಶೇಷ ವಿಮಾನದಲ್ಲಿ ಭಾನುವಾರ ಬೆಳಿಗ್ಗೆ ಸ್ವದೇಶಕ್ಕೆ ಮರಳಿದ್ದಾರೆ.

201 ಭಾರತೀಯರನ್ನು ಹೊತ್ತ ಇರಾಕ್‌ ಏರ್‌ವೇಸ್‌ನ ವಿಮಾನ ನಸುಕಿನ ಜಾವ 4:30ರ ಸುಮಾರಿಗೆ ಇಲ್ಲಿಗೆ ಬಂದಿಳಿದಿದೆ.

ಇನ್ನೆರಡು ದಿನಗಳಲ್ಲಿ ಮತ್ತಷ್ಟು ಪ್ರಯಾಣಿಕರು ಏರ್‌ ಇಂಡಿಯಾ ಸೇರಿದಂತೆ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಹಿಂದಿರುಗುವ ನಿರೀಕ್ಷೆಗಳಿವೆ.

ಇನ್ನೆರಡು ದಿನಗಳಲ್ಲಿ ಇರಾಕ್‌ನಿಂದ ಸುಮಾರು 600 ಭಾರತೀಯರು ಸ್ವದೇಶಕ್ಕೆ ವಾಪಸ್ಸಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶನಿವಾರವಷ್ಟೇ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT