ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ಚೆನ್ನೈಗೆ ಹಾರಿದ ಜೀವಂತ ಹೃದಯ

Last Updated 19 ಡಿಸೆಂಬರ್ 2014, 8:45 IST
ಅಕ್ಷರ ಗಾತ್ರ

ಬೆಂಗಳೂರು: ಚೆನ್ನೈನ ಪೋರ್ಟಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಡೂವರೆ  ವರ್ಷದ ಮಗುವಿಗೆ ಜೋಡಿಸಲು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಿಂದ ಶುಕ್ರವಾರ ಬೆಳಿಗ್ಗೆ ಜೀವಂತ ಹೃದಯವನ್ನು ರವಾನಿಸಲಾಯಿತು. 

ಇದು ಬೆಂಗಳೂರಿನ ಎಂಟು ತಿಂಗಳ ಮಗುವಿನ ಹೃದಯ. ಈ ಮಗುವಿನ ಮಿದುಳು ನಿಷ್ಕ್ರೀಯವಾದ ಹಿನ್ನೆಲೆಯಲ್ಲಿ ಹೃದಯ ದಾನ ಮಾಡಲಾಗುತ್ತಿದೆ.

ಈ ಹೃದಯವನ್ನು ಬೆಂಗಳೂರಿನ ಎಚ್‌ಎಎಲ್‌ ಏರ್‌ಪೋರ್ಟ್‌ನಿಂದ ವಿಶೇಷ ವಿಮಾನದಲ್ಲಿ ಚೆನ್ನೈಗೆ ಸಾಗಿಸಲಾಯಿತು. ಹೃದಯವನ್ನು ತ್ವರಿತವಾಗಿ ಸಾಗಿಸಲು ಎರಡೂ ನಗರಗಳಲ್ಲಿ ಸಂಚಾರ ಪೊಲೀಸರು ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದರು. 

‘ಮಿಡಿಯುತ್ತಿದ್ದ ಹೃದಯ’ ಹೊತ್ತ ಆಂಬುಲೆನ್ಸ್‌ನ ನಿರಾತಂಕ ಸಂಚಾರಕ್ಕಾಗಿ ರಸ್ತೆಯು­ದ್ದಕ್ಕೂ ಇತರ ವಾಹನಗಳ ಓಡಾಟ ನಿಯಂತ್ರಿ­ಸಲಾಗಿದ್ದು,  ಸಿಗ್ನಲ್‌ ಮುಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಮೊದಲ ಪ್ರಕರಣ
ಕಳೆದ ಏಪ್ರಿಲ್‌ ತಿಂಗಳಲ್ಲಿ ಇದೇ ರೀತಿ  ಮಿದುಳು ನಿಷ್ಕ್ರಿಯ­ಗೊಂಡಿದ್ದ (ಬ್ರೇನ್‌ ಡೆತ್‌) ಮಹಿಳೆ­ಯೊಬ್ಬರ ‘ಜೀವಂತ ಹೃದಯ’ವನ್ನು ಬೆಂಗಳೂರಿನಿಂದ ವಿಮಾನದಲ್ಲಿ ಚೆನ್ನೈಗೆ ಸಾಗಿಸಿ ರೋಗಿಯೊಬ್ಬರಿಗೆ ಯಶಸ್ವಿ ಕಸಿ ಮಾಡಲಾಗಿತ್ತು. ಈ  ಅಪರೂಪದ ಕೀರ್ತಿಗೆ ಬಿಜಿಎಸ್‌ ಗ್ಲೋಬಲ್‌ ಮತ್ತು ಫೋರ್ಟಿಸ್‌ ಆಸ್ಪತ್ರೆಗಳು ಸಾಕ್ಷಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT