ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಗಳಿಕೆಯಲ್ಲಿ ಮುಂದಿದ್ದರೂ ‘ಸೊನ್ನೆ’ ಸುತ್ತಿದ ಬಿಎಸ್‌ಪಿ

ಲೋಕಸಭೆ ಸ್ವಾರಸ್ಯ
Last Updated 17 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಲೋಕ­ಸಭಾ ಚುನಾವಣೆಯಲ್ಲಿ ಶೇಕಡಾ­ವಾರು ಮತ ಗಳಿಕೆಯಲ್ಲಿ ಬಹುಜನ ಸಮಾಜ ಪಕ್ಷವು ಮೂರನೇ ಸ್ಥಾನ­ದಲ್ಲಿ­ದ್ದರೂ ಗೆಲುವಿನಲ್ಲಿ ಮಾತ್ರ ‘ಸೊನ್ನೆ ಸುತ್ತಿದೆ’.

ಬಿಜೆಪಿ ಮತ್ತು ಕಾಂಗ್ರೆಸ್‌ ನಂತರ ಬಿಎಸ್‌ಪಿಯು ಶೇ 4ರಷ್ಟು ಮತ ಪಡೆದು ಶೇಕಡಾವಾರು ಮತಗಳಿಕೆ­ಯಲ್ಲಿ ಮೂರನೇ ಸ್ಥಾನದಲ್ಲಿದೆ.

ಉತ್ತರ ಪ್ರದೇಶವೊಂದನ್ನೇ ಗಣನೆಗೆ ತೆಗೆ­ದು­ಕೊಂಡರೆ ಬಿಎಸ್‌ಪಿ ಶೇ 20-­ರಷ್ಟು ಮತ ಗಳಿಸಿದೆ. ಅಲ್ಲಿ ಆ ಪಕ್ಷದ 34 ಅಭ್ಯರ್ಥಿಗಳು ಎರಡನೇ ಸ್ಥಾನ ಪಡೆದಿದ್ದಾರೆ. ಆ ಪಕ್ಷ ಒಟ್ಟು 2.3 ಕೋಟಿ ಮತಗಳನ್ನು ಪಡೆದಿದೆ. ಆದರೆ, ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯ­ವಾಗಿಲ್ಲ.

ಸಮಾಜವಾದಿ ಪಕ್ಷ ಕೂಡ ಶೇ 3.4­ರಷ್ಟು ಮತಗಳನ್ನು ಪಡೆದಿದ್ದರೂ ಐದು ಸ್ಥಾನಗಳಲ್ಲಿ ಮಾತ್ರ ಜಯ ಕಂಡಿದೆ.

ಆದರೆ, ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಶೇ 3.8ರಷ್ಟು ಮತ ಗಳಿಕೆಯೊಂದಿಗೆ 34 ಸ್ಥಾನ­ಗಳನ್ನು ಪಡೆದಿದೆ. ಎಐಎಡಿಎಂಕೆ ಮತ ಗಳಿಕೆ ಶೇ 3.3ರಷ್ಟಿದ್ದು 37 ಸ್ಥಾನಗಳನ್ನು ಪಡೆ­ದಿದೆ. ಆದರೆ ಸಿಪಿಎಂ ಇಷ್ಟೇ ಪ್ರಮಾ­ಣದ (ಶೇ 3.3) ಮತ ಪಡೆದಿದ್ದರೂ ಕೇವಲ ಒಂಬತ್ತು ಕಡೆ ವಿಜಯ ದಾಖಲಿಸಿದೆ.

ಡಿಎಂಕೆ ಶೇ 1.7ರಷ್ಟು ಮತಗಳನ್ನು ಪಡೆ­ದಿದ್ದರೂ ಒಂದು ಸ್ಥಾನ ಗೆಲ್ಲಲು ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT