ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಚಲಾವಣೆ ಶೇ 67.28

ರಾಜ್ಯದಲ್ಲಿನ ಅಂತಿಮ ಚಿತ್ರಣ ಲಭ್ಯ
Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 28 ಲೋಕ­ಸಭಾ ಕ್ಷೇತ್ರಗಳ ಮತದಾನದ ಅಂತಿಮ ಚಿತ್ರಣ ಲಭ್ಯವಾಗಿದ್ದು, ಒಟ್ಟಾರೆ ಶೇ 67.28 ರಷ್ಟು ಮಂದಿ ತಮ್ಮ ಮತ ಚಲಾಯಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಸಲ ಒಟ್ಟಾರೆ ಮತದಾನ ಪ್ರಮಾಣದಲ್ಲಿ ಶೇ 8.48ರಷ್ಟು ಹೆಚ್ಚಳವಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್‌ ಕುಮಾರ್‌ ಝಾ ತಿಳಿಸಿದರು. ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಅಂದರೆ ಶೇ 77.18, ಬೆಂಗ­ಳೂರು ದಕ್ಷಿಣದಲ್ಲಿ ಅತಿ ಕಡಿಮೆ ಅಂದರೆ ಶೇ 55.69ರಷ್ಟು ಮತದಾನವಾಗಿದೆ.

ಅಲ್ಪ ಅಂತರ: 1989ರಲ್ಲಿ 67.53­ರಷ್ಟು ಮತದಾನವಾಗಿತ್ತು. ಅದನ್ನು ಹೊರತುಪಡಿಸಿದರೆ ಉಳಿದೆಲ್ಲ ಚುನಾ­ವಣೆಗಳಿಗಿಂತ ಈ ಸಲ ಅಧಿಕ ಮತ­ದಾನವಾಗಿದೆ. 1989ಕ್ಕಿಂತ ಈ ಬಾರಿ ಶೇ 0.25ರಷ್ಟು ಕಡಿಮೆ ಮತದಾನ­ವಾ­ಗಿದೆ. 2013ರ ವಿಧಾನಸಭಾ ಚುನಾ­ವಣೆ­ಯಲ್ಲಿ 71.29ರಷ್ಟು ಮತ­ದಾನ­ವಾ­ಗಿತ್ತು. ಅದಕ್ಕೆ ಹೋಲಿಸಿದರೆ ಲೋಕ­ಸಭಾ ಚುನಾವಣೆಯಲ್ಲಿ ಶೇ 4.01­ರಷ್ಟು ಕಡಿಮೆ ಮತದಾನವಾಗಿದೆ.

ಸಾಮಾನ್ಯವಾಗಿ ಹಿಂದೆಲ್ಲ ವಿಧಾನ­ಸಭೆಗೆ ಹೋಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ­ವಾಗುತ್ತಿತ್ತು. ಅದು ಈ ಬಾರಿಯೂ ಪುನರಾವರ್ತನೆಯಾಗಿದೆ.

ರಾಜಧಾನಿಯಲ್ಲಿ ಗಣನೀಯ ಹೆಚ್ಚಳ: 2009ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.

ಮೋದಿ ಪ್ರೇರಣೆ?: ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅಲೆ­ಯಿಂದಾಗಿ ಈ ಬಾರಿ ರಾಜಧಾನಿಯಲ್ಲಿ ಮತದಾನ ಪ್ರಮಾಣ ಹೆಚ್ಚಾಗಿರ­ಬ­ಹುದು ಎಂದು ವಿಶ್ಲೇಷಿಸಲಾಗಿದೆ. ಹೊಸ ಮತದಾ­ರರು, ಯುವಜನರು ಹೆಚ್ಚಿನ ಸಂಖ್ಯೆ­ಯಲ್ಲಿ ಮತದಾನ ಮಾಡಿ­­ದ್ದಾರೆ ಎಂದು ಅಂದಾಜಿಸಲಾಗಿದೆ. ಮತದಾನ ಪ್ರಮಾಣ ಹೆಚ್ಚಳದ ಲಾಭ, ನಷ್ಟದ ಬಗ್ಗೆ ರಾಜಕೀಯ ವಲಯದಲ್ಲಿ ಲೆಕ್ಕಾಚಾರ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT