ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಕ್ಕೆ ಅನುಮತಿ: ಭಾರತೀಯನಿಗೆ ಜಯ

ತೆರವುಗೊಂಡ 120 ವರ್ಷಗಳ ನಿರ್ಬಂಧ
Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): 120 ವರ್ಷಗಳಿಂದ ಮದ್ಯ ಮಾರಾಟ ನಿಷೇಧಿಸಿದ್ದ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಪಡೆಯುವ ಮೂಲಕ ಭಾರತ ಮೂಲದ ಬ್ರಿಟನ್‌ ವ್ಯಕ್ತಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

ಬೌರ್ನ್‌ವಿಲ್ಲೇ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಪಡೆಯಲು ನಡೆಸುತ್ತಿದ್ದ ಕಾನೂನು ಸಮರದಲ್ಲಿ  ಕಮಲ್‌ ಶರ್ಮಾ  ಜಯಗಳಿಸಿದ್ದು, ಬರ್ಮಿಂಗ್‌ ಹ್ಯಾಮ್‌ ಸ್ಥಳೀಯ ಆಡಳಿತ ಕೊನೆಗೂ ಪರವಾನಗಿ ನೀಡಿದೆ.

ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು ಎನ್ನುವ ಪರವಾಗಿ 400ಕ್ಕೂ ಅಧಿಕ ಜನರು ಸಹಿ ಮಾಡಿದ್ದರೆ, ವಿರುದ್ಧವಾಗಿ 230 ಮಂದಿ ಸಹಿ ಮಾಡಿದ್ದರು.

ಅಂಗಡಿ ಹೊರಗೆ ಮದ್ಯ ಸೇವಿಸಬಾರದು ಎಂಬ ಫಲಕ ಹಾಕಬೇಕು. ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಬೆಳಿಗ್ಗೆ 10 ರಿಂದ ರಾತ್ರಿ 9ರವರೆಗೆ ಮಾತ್ರ ಮದ್ಯ ಮಾರಾಟ ಮಾಡಬೇಕು ಎಂಬ  ಕಠಿಣ ಷರತ್ತುಗಳನ್ನು ವಿಧಿಸಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಬಹು ಸಂಖ್ಯೆಯಲ್ಲಿದ್ದ ಬೌರ್ನ್‌ವಿಲ್ಲೆ ಚಾಕೋಲೆಟ್‌ ತಯಾರಿಕಾ ಕುಟುಂಬದವರು ಇಲ್ಲಿ ಮದ್ಯ ಮಾರಾಟವನ್ನು ವಿರೋಧಿಸುತ್ತಿದ್ದರಿಂದ ಇಲ್ಲಿ ಮದ್ಯ ನಿಷೇಧ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT