ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ– ಮಳವಳ್ಳಿ ರಸ್ತೆಗೆ 500 ಕೋಟಿ

Last Updated 18 ಸೆಪ್ಟೆಂಬರ್ 2014, 4:53 IST
ಅಕ್ಷರ ಗಾತ್ರ

ತುಮಕೂರು: ಮಧುಗಿರಿ– ತುಮಕೂರು– ಮಳ­ವಳ್ಳಿ ಸಂಪರ್ಕಿಸುವ 193 ಕಿ.ಮೀ ಉದ್ದದ ಕೆ–ಶಿಫ್‌ ಹೆದ್ದಾರಿ ಕಾಮಗಾರಿಯನ್ನು ₨ 500 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಸಿ.­ಮಹದೇವಪ್ಪ ಬುಧವಾರ ತಿಳಿಸಿದರು.

ಪಟ್ಟಣದಲ್ಲಿ ಲೋಕೋ­ಪಯೋಗಿ ಇಲಾಖೆ ವಿಭಾಗೀಯ ಕಚೇರಿ ಹಾಗೂ ಕೊಡಿಗೇನ­ಹಳ್ಳಿಯಲ್ಲಿ ಮಧು­ಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಗೆ ರಾಜ್ಯ ಹೆದ್ದಾರಿ, ಕೆ–ಶಿಫ್, ಎಸ್ಇಪಿ, ಟಿಎಸ್‌ಪಿ ಯೋಜನೆಗಳಿಗಾಗಿ ₨ 400 ಕೋಟಿ ಬಿಡುಗಡೆ ಮಾಡಲಾಗಿದೆ. ಎತ್ತಿನಹೊಳೆ ಯೋಜನೆ­ಯಿಂದ ಮಧುಗಿರಿ ತಾಲ್ಲೂಕಿನ 45 ಕೆರೆ ತುಂಬಿಸಲು ಮತ್ತು ಕುಡಿಯುವ ನೀರಿಗಾಗಿ 1.5 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ ಎಂದರು.

ಜಿಲ್ಲಾ ಕೇಂದ್ರದಿಂದ ಮಧುಗಿರಿ ಮೂಲಕ ಆಂಧ್ರಪ್ರದೇಶದ ಹಿಂದೂಪುರವನ್ನು ಸಂಪರ್ಕಿ­ಸುವ ಕೊಡಿಗೇನಹಳ್ಳಿ ಬಳಿಯ ಪ್ರಮುಖ ರಸ್ತೆಯಾದ ದೊಡ್ಡಮಾಲೂರು ಕೆರೆ ಏರಿ ಅಗಲೀಕರಣ ಹಾಗೂ ರಸ್ತೆ ಅಭಿವೃದ್ಧಿ ಕಾಮ­ಗಾರಿಗೆ ₨ 4 ಕೋಟಿ ಬಿಡುಗಡೆ ಮಾಡಲಾಗಿದೆ. ಏರಿಯನ್ನು 4 ಮೀಟರ್‌ನಿಂದ 7 ಮೀಟರ್‌ಗೆ ವಿಸ್ತರಿಸಲಾಗುವುದು ಮತ್ತು ರಕ್ಷಣಾ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ 4ರಿಂದ ಮುದ್ದೇನಹಳ್ಳಿ ಸೇರುವ ರಸ್ತೆ ಅಭಿವೃದ್ಧಿಗೆ ₨ 4.95 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯ­ಚಂದ್ರ ಮಾತನಾಡಿ, ಮಧುಗಿರಿ ತಾಲ್ಲೂಕಿನ ಚಿಕ್ಕ­ಮಾಳೂರು ಗ್ರಾಮಕ್ಕೆ ಪಶುವೈದ್ಯ ಘಟಕ, ಕೆರೆಯೂರು ಮತ್ತು ಮರುವೇಕೆರೆಗೆ 2 ಪಶು ಆಸ್ಪತ್ರೆಗಳನ್ನು ಮಂಜೂರು ಮಾಡಲಾಗಿದೆ ಎಂದರು.

ಅಕ್ರಮ ಮರಳು ಸಾಗಾಟದಿಂದ ಜಿಲ್ಲೆಯ ರಸ್ತೆಗಳು ಹಾಳಾಗಿದ್ದು, ರಸ್ತೆಗಳ ದುರಸ್ತಿಗೆ ಅನುದಾನ ನೀಡುವಂತೆ ಸಚಿವ ಡಾ.ಮಹದ­ೇವಪ್ಪ ಅವರಿಗೆ ಮನವಿ ಮಾಡಿದರು.

ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಮಾತ­ನಾಡಿ, ಸ್ಮಾರ್ಟ್ ಸಿಟಿಯಂತಹ ಮಹತ್ವಾ­ಕಾಂಕ್ಷಿ ಯೋಜನೆಗಳು ಜಿಲ್ಲೆಗೆ ಮಂಜೂ­ರಾಗು­ತ್ತಿರುವ ಹಿನ್ನಲೆಯಲ್ಲಿ ಮುಂದಿನ 5 ವರ್ಷದಲ್ಲಿ ಜಿಲ್ಲೆಯ ಚಿತ್ರಣವೇ ಸಂಪೂರ್ಣವಾಗಿ ಬದಲಾ­ಗಲಿದೆ. ಅವಕಾಶಗಳನ್ನು ಜಿಲ್ಲೆಯ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಮಧು­ಗಿರಿ ಉಪವಿಭಾಗದ ಅಭಿವೃದ್ಧಿಗಾಗಿ ಪ್ರತ್ಯೇಕ ಲೋಕೋಪಯೋಗಿ ಇಲಾಖೆ ವಿಭಾಗ ಕಚೇರಿ ಪ್ರಾರಂಭಿಸಲಾಗಿದೆ. ಕೊರಟಗೆರೆ, ಶಿರಾ ಮತ್ತು ಪಾವಗಡ ಉಪವಿಭಾಗಗಳು ಸೇರ್ಪಡೆಗೊಂಡಿವೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಚಿಕ್ಕರಾಯಪ್ಪ, ಮುಖ್ಯ ಎಂಜಿನಿಯರ್ ತ್ಯಾಗ­ರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT