ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹಿಗಳಿಗೆ ಹೊಸ ‘ಮೆನು’!

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಮಧುಮೇಹಿಗಳಿಗೆ ಇಲ್ಲಿದೆ ಬಾಯಲ್ಲಿ ನೀರೂರಿಸುವ ವಿಶೇಷ ಖಾದ್ಯಗಳು. ನ್ಯೂಟ್ರಿಷನಿಸ್ಟ್‌ ಹಾಗೂ ನುರಿತ ಬಾಣಸಿಗರು ಸೇರಿ ತಯಾರಿಸಿರುವ ಮೆನು. ಬೆಂಗಳೂರು ಸೇರಿದಂತೆ ದೇಶದ ನಾಲ್ಕು ನಗರಗಳಲ್ಲಿನ ಹೋಟೆಲ್‌ಗಳಲ್ಲಿ ಮಧುಮೇಹ ಸ್ನೇಹಿ ಆಹಾರ ಈಗ ಲಭ್ಯ...

ಮಧುಮೇಹಿಗಳಿಗೆ ವ್ಯಾಯಾಮ ಹಾಗೂ ಔಷಧಗಳ ಜತೆಗೆ ಆಹಾರ ಪಥ್ಯ ಸಹ ಮಹತ್ವದ್ದಾಗಿದೆ. ಹೀಗಾಗಿಯೇ ಮಧುಮೇಹಿಗಳು ನಿಯಮಿತ ಆಹಾರ ಸೇವನೆಯನ್ನು ರೂಢಿಸಿಕೊಂಡಿರುತ್ತಾರೆ. ಮನಸ್ಸಿಗೆ ಇಷ್ಟವಾದದ್ದನ್ನೆಲ್ಲ ಸೇವಿಸುವ ಸ್ವಾತಂತ್ರ್ಯ ಅವರಿಗಿರುವುದಿಲ್ಲ. ಅವರು ಹೋಟೆಲ್‌ಗಳಿಗೆ ಹೋದರೂ ತುಂಬಾ ಯೋಚಿಸಿ ಆಹಾರ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದಾಗಿಯೇ ಎಲ್ಲೇ ಹೋದರೂ ಊಟಕ್ಕೆ ಸಂಬಂಧಿಸಿದ ವಿಷಯದಲ್ಲಿ ಕೊಂಚ ಕಿರಿಕಿರಿ ಅನುಭವಿಸುತ್ತಾರೆ.

ಎಲ್ಲೋ ಅಪರೂಪಕ್ಕೆ ಕೆಲವು ಹೋಟೆಲ್‌ಗಳಲ್ಲಿ ಮಾತ್ರ ಮಧುಮೇಹಿಗಳು ಸೇವಿಸುವ ಆಹಾರ ದೊರೆಯುತ್ತದೆ. ಕೆಲವು ಏರ್‌ಲೈನ್ಸ್‌ನಲ್ಲೂ ಇತ್ತೀಚೆಗೆ ಮಧುಮೇಹಿ ಪ್ರಯಾಣಿಕರಿಗೆ ಪ್ರತ್ಯೇಕವಾದ ಆಹಾರ ನೀಡುವ ಸೇವೆ ಪ್ರಾರಂಭವಾಗಿದೆ. ಇದನ್ನು ಹೊರತುಪಡಿಸಿದರೆ ನಗರದ ಬಹುತೇಕ ಹೋಟೆಲ್‌ಗಳಲ್ಲಿ ಮಧುಮೇಹಿಗಳಿಗಾಗಿಯೇ ಪ್ರತ್ಯೇಕವಾಗಿ ಆಹಾರ ದೊರೆಯುವುದಿಲ್ಲ.

ಅದಕ್ಕಾಗಿಯೇ ಬಯೋಕಾನ್‌ ಹಾಗೂ ಬ್ರಿಟಾನಿಯ ನ್ಯೂಟ್ರಿಚಾಯ್ಸ್‌ ಸಂಸ್ಥೆ ವಿಶ್ವ ಮಧುಮೇಹಿಗಳ ದಿನದ (ನ.14) ಅಂಗವಾಗಿ ‘ದ ಡಯಾಬಿಟಿಕ್‌ ಫುಡ್‌ ಟ್ರಯಲ್‌’ ಅನ್ನು ಪ್ರಾರಂಭಿಸಿದೆ. ಇದೇ ನವೆಂಬರ್‌ 14ರಿಂದ 30ರವರೆಗೆ ಬೆಂಗಳೂರು ಸೇರಿದಂತೆ ಮುಂಬೈ, ದೆಹಲಿ ಹಾಗೂ ಚೆನ್ನೈನ ನೂರಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಮಧುಮೇಹ ಸ್ನೇಹಿ ಆಹಾರ ಲಭ್ಯವಿದೆ.

‘ದ ಡಯಾಬಿಟಿಕ್‌ ಫುಡ್‌ ಟ್ರಯಲ್‌’ನಲ್ಲಿ ನೀಡಲಾಗುವ ಆಹಾರದ ಮೆನುವನ್ನು ಸಿಮೋರಾ ಎಂಟರ್‌ಟೈನ್‌ಮೆಂಟ್‌ ವರ್ಕ್ಸ್‌ ಸಂಸ್ಥೆ ಆಯ್ಕೆ ಮಾಡಿದ್ದು, ನುರಿತ ನ್ಯೂಟ್ರಿಷನಿಸ್ಟ್‌ ಹಾಗೂ ಬಾಣಸಿಗರು ಇದರಲ್ಲಿರುವ ಖಾದ್ಯಗಳನ್ನು ಸಿದ್ಧಪಡಿಸಿದ್ದಾರೆ. ಫುಡ್‌ ಟ್ರಯಲ್‌ ಮೆನುವಿನಲ್ಲಿ ಸಕ್ಕರೆ ಮುಕ್ತ ಸ್ಟಾಟರ್ಸ್‌, ಡೆಸರ್ಟ್ಸ್‌ ಹಾಗೂ ಮೇನ್‌ ಕೋರ್ಸ್‌ ಇರುತ್ತದೆ. ಸಕ್ಕರೆ ಇಲ್ಲದೆಯೂ ರುಚಿಕರ ಹಾಗೂ ಸ್ವಾದಿಷ್ಟವಾದ ಆಹಾರ ರೆಸ್ಟೊರೆಂಟ್‌ಗಳಲ್ಲಿ ಲಭ್ಯ ಎನ್ನುವುದನ್ನು ತೋರಿಸಲು ಈ ಟ್ರಯಲ್‌ ಅನ್ನು ಪ್ರಾರಂಭಿಸಲಾಗಿದೆ.  

‘ಆಹಾರಗಳಲ್ಲಿ ಇರುವ ಕ್ಯಾಲರಿ, ಕಾರ್ಬ್ಸ್‌ ಹಾಗೂ ಪೌಷ್ಟಿಕಾಂಶದ ಪ್ರಮಾಣವನ್ನು ಮಧುಮೇಹ ಸ್ನೇಹಿ ಮೆನುವಿನಲ್ಲಿರುವ ಖಾದ್ಯಗಳ ಪಕ್ಕದಲ್ಲಿ ನಮೂದಿಸಿರಲಾಗಿರುತ್ತದೆ. ಅದನ್ನು ಗಮನಿಸುವ ಮೂಲಕ ಮಧುಮೇಹಿಗಳು ತನಗೆ ಬೇಕಾದ ಹಾಗೂ ಅಗತ್ಯವಿರುವ ಆಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು.  ಮಧುಮೇಹಿಗಳು ಕಟ್ಟುನಿಟ್ಟಾಗಿ ಆಹಾರ ಪಥ್ಯ ಪಾಲಿಸಬೇಕು.

ಈ ಕಾರಣದಿಂದ ಅವರ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳಲು ಅವರಿಗೂ ರುಚಿಕರವಾದ ಸ್ವಾದಿಷ್ಟ ಆಹಾರವನ್ನು ನೀಡಲು ಈ ಟ್ರಯಲ್‌ ಆರಂಭಿಸಿದ್ದೇವೆ. ಪ್ರಾಯೋಗಿಕವಾಗಿ ಆರಂಭಿಸಿರುವ ಈ ಟ್ರಯಲ್‌ನಲ್ಲಿ ಗ್ರಾಹಕರಿಂದ ಬರುವ ಪ್ರತಿಕ್ರಿಯೆ ಆಧಾರದ ಮೇಲೆ ಇದನ್ನು ಮುಂದುವರೆಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ವಿವರಿಸಿದ್ದಾರೆ ಬಯೊಕಾನ್‌ ಮೆಟಬಾಲಿಸಂ ವಿಭಾಗದ ಮುಖ್ಯಸ್ಥ ಪಾರ್ಥರಾಯ್‌ ಚೌಧರಿ.

‘ಜನ ಇತ್ತೀಚೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಿದ್ದಾರೆ. ಅದಕ್ಕಾಗಿ ಆರೋಗ್ಯಕರ ಹಾಗೂ ಕಡಿಮೆ ಕ್ಯಾಲರಿ ಇರುವ ಆಹಾರದತ್ತ ಒಲವು ತೋರುತ್ತಿದ್ದಾರೆ. ಹೀಗಾಗಿಯೇ ಈ ಟ್ರಯಲ್‌ ಮುಗಿದ ನಂತರವೂ ಕಡಿಮೆ ಕ್ಯಾಲರಿ ಇರುವ ಆಹಾರವನ್ನು ನಮ್ಮ ಮೆನುವಿನಲ್ಲಿ ಉಳಿಸಿಕೊಳ್ಳುತ್ತೇವೆ’ ಎನ್ನುತ್ತಾರೆ ಬಾರ್ಲೆಸ್‌ ರೆಸ್ಟೊರೆಂಟ್‌ನ ಶೆಫ್‌ ಮಾರ್ಕ್‌ . 

ಸದ್ಯಕ್ಕೆ ಸಿಮೋರಾ ಸಂಸ್ಥೆ ಸಿದ್ಧಪಡಿಸಿರುವ ಮೆನುವಿನ ಜೊತೆಗೆ ಆಯಾ ರೆಸ್ಟೋರೆಂಟ್‌ನವರು ಸಹ ಕಡಿಮೆ ಕ್ಯಾಲರಿ ಹಾಗೂ ಸಕ್ಕರೆ ಅಂಶ ಇಲ್ಲದ ಆಹಾರವನ್ನು ನೀಡುತ್ತಿದ್ದಾರೆ. ಮೆನುವಿನ ಜೊತೆಯಲ್ಲಿ ಆಯಾ ಹೋಟೆಲ್‌ನ ಅಂದಿನ ವಿಶೇಷ ಖಾದ್ಯ ಸಹ ಸವಿಯಲು ದೊರೆಯುತ್ತದೆ.

ಆಹಾರ ದೊರೆಯುವ ಹೋಟೆಲ್‌ಗಳ ವಿವರ
ಬಾರ್ಬೆಕ್ಯೂ ನೇಷನ್‌, ಬಾರ್ಲೆಸ್‌, ಬೆಂಜರಾಂಗ್‌, ಎಂಟೆ ಕೇರಳಂ, ಹಯಾತ್‌ ಎಂ.ಜಿ. ರೋಡ್‌, ಮಸ್ಟರ್ಡ್‌ ಕೆಫೆ, ಸ್ಮೋಕ್‌ಹೌಸ್‌ ದೆಲಿ, ಬ್ಲೂ ಪಟೇಲ್‌ ಹೋಟೆಲ್‌, ಟೆಪ್ಪಾನ್‌, ದ ಬಂಗ್ಲೋ, ವೇರ್‌ಅಬೌಟ್ಸ್‌ ಗ್ರಿಲ್‌, ಡೈಸ್‌ ಅಂಡ್‌ ಡೈನ್‌, ಗ್ರೀನ್‌ ಥಿಯರಿ, ಲಿಟಲ್‌ ಇಟಲಿ.

ಮೆನು ವಿವರ
ಸೂಪ್‌: ಜುಪ್ಪ ಡಿ ಜುಕಾ (ಓವೆನ್‌ನಲ್ಲಿ ರೋಸ್ಟ್‌ ಮಾಡಿದ ಕುಂಬಳಕಾಯಿ ಸೂಪ್‌). ಇದರ ಬೆಲೆ ₹215,  ಸಲಾಡ್‌: ಇನ್‌ಸಲಾಟಾ ಮಿಸ್ಟಾ ಸಲಾಡ್‌ (ಮಿಕ್ಸ್‌ ಲೆಟಿಸ್‌ ಸೊಪ್ಪಿನ ಸಲಾಡ್‌). ದರ ₹245,  ಸ್ಟಾರ್ಟರ್ಸ್‌: ಬ್ರುಸೆಟ್ಟಾ ಫ್ರಂಗಿ (ವಿಶೇಷ ಅಣಬೆ ಹಾಗೂ ಈರುಳ್ಳಿ ಜಾಮ್‌), ಬ್ರುಸೆಟ್ಟಾ ಟೊಮೆಟೊ ಅಂಡ್‌ ಬೆಸಿಲ್‌ (ಕ್ರೊಸ್ಟಿನಿ ಬ್ರೆಡ್‌ ಟಾಪ್ಡ್‌ ವಿಥ್‌ ಟೊಮೆಟೊ ಅಂಡ್‌ ಬೆಸಿಲ್‌), ಹೋಲ್‌ವೀಟ್‌ ಫ್ಲಾಟ್‌ ಬ್ರೆಡ್‌ (ಬೆಳ್ಳುಳ್ಳಿ ಬ್ರೆಡ್‌ ಮೇಲೆ ತರಕಾರಿ ಹಾಗೂ ಸೊಪ್ಪಿನ ಅಲಂಕಾರ), ದರ ₹275, ಮೇನ್‌ ಕೋರ್ಸ್‌: ಪನಿನಿ ಪೊಲೊ(ಗ್ರಿಲ್ಡ್‌ ಚಿಕನ್‌ ಬ್ರೆಸ್ಟ್‌, ಚೆಸಿಲ್‌ ಪೆಸ್ಟೊ, ಲೆಟಿಸ್‌ ಸ್ಲಾವ್‌, ಪಿಕಲ್ಡ್‌ ವೆಜ್‌, ಟೊಮ್ಯಾಟೊ), ದರ ₹375, ಪೊಲೊ ಅಲ್ಲ ಗ್ರಿಗ್‌ಲಿಯಾ (ಗ್ರಿಲ್ಡ್‌ ಚಿಕನ್‌ ಬ್ರೆಸ್ಟ್‌ ವಿಥ್‌ ವೆಜ್ಜೀಸ್‌), ದರ 495,  ರವಾಸ್‌ ಅಲ್ ಗ್ರಿಗ್ಲಿಯಾ (ಚಾರ್‌ಗರಿಲ್ಡ್‌ ರಾವಾಸ್‌, ವೆಜ್ಜೀಸ್‌, ಬ್ಲಾಕ್‌ ಆಲೀವ್‌ ಸಾಸ್‌), ದರ ₹875 ಹೋಲ್‌ ವೀಟ್‌ ಸ್ಪೆಗೆಟಿ ಅಗ್ಲಿಯೊ ಒಲಿಯೊ (ಸ್ಪೆಗೆಟಿ ಪಾಸ್ತಾ, ಗಾರ್ಲಿಕ್‌, ವೆಜ್ಈಸ್‌, ಎಕ್ಟ್ರಾ ವರ್ಜಿನ್‌ ಆಲೀವ್‌ ಆಯಿಲ್‌), ದರ ₹475, ಡೆಸರ್ಟ್ಸ್‌: ಬೆಸಿಲ್‌ ಪನ್ನಾಕೊಟ್ಟ, ದರ ₹200 ಹಾಗೂ ಓಟ್ಸ್‌ ಅಂಡ್‌ ಆಲ್ಮಂಡ್ಸ್‌ ಸ್ಟಿಕ್ಕಿ ಕೇಕ್‌, ದರ ₹315.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT