ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹ ಪತ್ತೆ ಸ್ಮಾರ್ಟ್‌ಪೆನ್‌

Last Updated 17 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮಧುಮೇಹ ಇದೆಯೋ, ಇಲ್ಲವೋ ಎಂದು ತಿಳಿದುಕೊಳ್ಳಲು ಇನ್ನು ಮುಂದೆ ವೈದ್ಯರ ಬಳಿ ಹೋಗಬೇಕಾದ ಅಗತ್ಯವೇ ಇಲ್ಲ. ನೀವು ಬಳಸುವ ಪೆನ್ ಮೂಲಕವೇ ಇದನ್ನು ಪತ್ತೆ ಹಚ್ಚಬಹುದು!

ಅಚ್ಚರಿ ಅನಿಸಿದರೂ ಇದು ನಿಜ ಸಂಗತಿ. ಬಾಲ್‌ಪಾಯಿಂಟ್ ಪೆನ್‌ಗೆ ಬಳಸುವ ಆಧುನಿಕ ಜೈವಿಕ ಶಾಯಿಯಿಂದಲೇ ಮಧುಮೇಹ ಪತ್ತೆಹಚ್ಚುವ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿಯಲಾಗಿದೆ.

ಗ್ಲೂಕೋಸ್ ಸೇರಿದಂತೆ ಹಲವು ರಾಸಾಯನಿಕಗಳ ಮಿಶ್ರಣ ದಿಂದ ಅತ್ಯಾಧುನಿಕ ಜೈವಿಕ ಶಾಯಿಯನ್ನು ತಂತ್ರಜ್ಞರ ತಂಡ ಅಭಿವೃದ್ಧಿಪಡಿಸಿದ್ದು, ಇದು ಬಾಲ್‌ಪಾಯಿಂಟ್ ಪೆನ್‌ನಲ್ಲಿ ಇರುವ ಸೆನ್ಸರ್ ಮೂಲಕ ಮಧುಮೇಹವನ್ನು ಪತ್ತೆ ಹಚ್ಚಲಿದೆ. ಈ ವಿಶೇಷ ಲೇಖನಿ ಚರ್ಮವನ್ನು ಸ್ಪರ್ಶಿಸುತ್ತಿದ್ದಂತೆಯೇ ಮಧುಮೇಹ ಪ್ರಮಾಣದ ಮಾಹಿತಿ ಲಭ್ಯವಾಗುತ್ತದೆ ಎಂದು ತಂತ್ರಜ್ಞರು ಹೇಳಿಕೊಂಡಿದ್ದಾರೆ.

ಸ್ಯಾನ್‌ಡಿಯಾಗೊದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಸಂಶೋಧನೆಗೆ ಮುಕ್ತ ಅವಕಾಶವಿದ್ದು, ಈ ರೀತಿಯ ಸಂಶೋಧನೆ ಯನ್ನು ಯಾರು ಬೇಕಾದರೂ ಕೈಗೊಳ್ಳಬಹುದು ಎಂದು ವಿಜ್ಞಾನಿ ಗಳು ತಿಳಿಸಿದ್ದಾರೆ. ಆಧುನಿಕವಾದ ಜೈವಿಕ ಶಾಯಿ ಮತ್ತು ಸೆನ್ಸರ್ ಸಾಧನ ಮೂಲಕ ಮಧುಮೇಹವನ್ನಷ್ಟೇ ಅಲ್ಲದೆ ಎಲೆಗಳ ಮಾಲಿನ್ಯ ವನ್ನೂ ತಿಳಿಯಬಹುದು.

ಬಲು ಸೂಕ್ಷ್ಮವಾದ ಈ ಸೆನ್ಸರನ್ನು ಸ್ವಂತ ಬಳಕೆಗಾಗಿ ಸ್ಮಾರ್ಟ್‌ ಫೋನ್‌ನಲ್ಲಿಯೂ ಅಳವಡಿಸಿಕೊಳ್ಳಬಹುದು. ಆರೋಗ್ಯ ತಪಾಸ ಣೆಗೆ ಇದು ಸುಲಭ ವಿಧಾನವಾಗಿದ್ದು, ಇದಕ್ಕೆ ತಗಲುವ ವೆಚ್ಚವೂ ಕಡಿಮೆ ಇರುತ್ತದೆ. ವ್ಯಕ್ತಿಯ ಆರೋಗ್ಯ ತಪಾಸಣೆಗಷ್ಟೇ ಅಲ್ಲದೆ ಪರಿಸರದಲ್ಲಿನ ವಾಯು ಮಾಲಿನ್ಯ ಅಳೆಯಲೂ ಈ ಸಾಧನವನ್ನು ಬಳಸಬಹುದಾಗಿದೆ. ಎಲೆಗಳ ಮೇಲಿನ ದೂಳು, ಮಾಲಿನ್ಯವನ್ನೂ ಕಂಡುಕೊಳ್ಳಬಹುದಾದಷ್ಟು ಸೂಷ್ಮ ಸಾಧನ ಇದಾಗಿದೆ.

ಯುದ್ಧಭೂಮಿಯಲ್ಲಿ ಬಳಕೆ
ಈ ಸೆನ್ಸರನ್ನು ಯುದ್ಧ ಭೂಮಿಯಲ್ಲೂ ಬಳಸಬಹುದು. ಯೋಧರು ಗಾಯಗೊಂಡರೆ, ನರಗಳಿಗೆ ಹಾನಿಯಾದರೆ, ಅದನ್ನೂ ಸಹ ಇದು ಪತ್ತೆ ಹಚ್ಚಲಿದೆ. ವಿಶಿಷ್ಟ ತಂತ್ರಾಂಶದ ನೆರವಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ಬಾಲ್‌ಪಾಯಿಂಟ್‌ ಪೆನ್‌ನ ಜೈವಿಕ ಶಾಹಿ ಹೆಚ್ಚಿನ ಉಪಯೋಗಕ್ಕೆ ಬರುತ್ತದೆ ಎನ್ನುತ್ತಾರೆ ನ್ಯಾನೊ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಜೋಸೆಫ್ ವಾಂಗ್.

ತಂತ್ರಜ್ಞರ ತಂಡ, ಪೆನ್ ಮೂಲಕ ಸೆನ್ಸರ್ ಬಳಕೆ, ಗ್ಲೂಕೋಸ್ ಮೇಲೆ ಪರಿಣಾಮ ಬೀರುವ ಶಾಯಿಯನ್ನು ಪೆನ್‌ನಲ್ಲಿ ಹೇಗೆ ಬಳಸಬೇಕು ಎಂಬುದನ್ನು ವಿವರಿಸಿದೆ.

ಸೆನ್ಸರ್ ಸಾಧನದ ಪುನರ್ ಬಳಕೆಗೆ ಅವಕಾಶವಿದೆ. ಪೆನ್ ಮೇಲಿನ ಮಾಹಿತಿ ಪರದೆ ಪಾರದರ್ಶಕವಾಗಿದೆ. ಯಾವ ರೀತಿ ಬೇಕಾದರೂ ಬದಲಾಯಿಸಿಕೊಳ್ಳುವಷ್ಟು ಅದು ಸರಳವಾಗಿದೆ. ಬೆರಳ ತುದಿಯಲ್ಲಿನ ರಕ್ತವನ್ನು ಸೆನ್ಸರ್‌ಗೆ ತಾಗಿಸಿದಾಗ, ರಕ್ತದಲ್ಲಿ ಮಧುಮೇಹ ಇದೆಯೋ, ಇಲ್ಲವೋ ಎಂಬ ಮಾಹಿತಿ ಪರದೆ ಮೇಲೆ ಗೋಚರಿಸಲಿದೆ ಎನ್ನುತ್ತಾರೆ ತಂತ್ರಜ್ಞರು.

ಒಂದು ಪೆನ್‌ನಲ್ಲಿ ಮಧುಮೇಹವನ್ನು ಪತ್ತೆ ಹಚ್ಚುವ 500 ಸ್ಟ್ರಿಪ್ಸ್ ಇರುತ್ತವೆ. ನ್ಯಾನೊ ಎಂಜಿನಿಯರ್‌ಗಳ ಪ್ರಕಾರ ಸೆನ್ಸರ್ ಕಂಡುಕೊಂಡಿರುವ ಚರ್ಮದ ಮೇಲೆ ಮಾಹಿತಿಯನ್ನು ಬ್ಲೂಟೂತ್ ಸೌಲಭ್ಯವಿರುವ ಎಲೆಕ್ಟ್ರಾನಿಕ್ ಉಪಕರಣದ ಮೂಲಕ ರವಾನೆ ಮಾಡಲೂ ಸಾಧ್ಯವಿದೆ. ಇದನ್ನು ಪ್ರೊಟೇನ್ಷಿಯೊ ಸ್ಟ್ಯಾಟ್ ಎನ್ನುವ ಎಲೆಕ್ಟೋಲ್ಸ್ ನಿಯಂತ್ರಣ ಮಾಡುತ್ತದೆ.

ಒಂದು ಎಲೆಯ ಮೇಲೆ ನೀರು ಮತ್ತು ಇನ್ನೊಂದು ಎಲೆಯ ಮೇಲೆ ಫೆನಾಯಿಲ್ ಹಾಕಿ ಸೆನ್ಸರ್‌ನ ಸಾಮರ್ಥ್ಯವನ್ನು ಪರಿಶೀಲಿಸಲಾಗಿದೆ. ಫೆನಾಯಿಲ್ ಹಾಕಿದ ಎಲೆ ಮೇಲೆ ಹಾನಿಕಾರಕ ಅಂಶಗಳು ಜಾಸ್ತಿ ಇದೆ ಎಂಬುದನ್ನು ಸೆನ್ಸರ್‌ ಗುರುತಿಸಿತು‌ ಎಂದು ತಂತ್ರಜ್ಞರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT