ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹನ್‌ ವಿರುದ್ಧ ಟೀಕೆ

Last Updated 11 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು 2 ಜಿ ತರಂಗಾಂತರ ಮತ್ತು ಕಲ್ಲಿದ್ದಲು ನಿಕ್ಷೇಪ ಮಂಜೂರಾತಿ ಹಗರಣಗಳಿಗೆ ತಾನು ಕಾರಣನಲ್ಲ ಎಂದು ನುಣುಚಿಕೊಳ್ಳು­ವಂತೆಯೇ ಇಲ್ಲ ಎಂದು ಮಾಜಿ ಮಹಾ­ಲೇಖಪಾಲ (ಸಿಎಜಿ) ವಿನೋದ್‌ ರಾಯ್‌ ಹೇಳಿದ್ದಾರೆ.

‘2 ಜಿ ತರಂಗಾಂತರ ಮಂಜೂರಾತಿ ಸಂದರ್ಭದಲ್ಲಿ ಆಗಿನ ದೂರಸಂಪರ್ಕ ಸಚಿವ ಎ.ರಾಜಾ ಅವರು ಪ್ರತಿ­ಯೊಂದು ಪತ್ರವನ್ನೂ ಮನಮೋಹನ್‌ ಅವರಿಗೇ ಬರೆದಿದ್ದರು. ರಾಜಾ ಅವರ ಪ್ರತಿ ಪತ್ರಕ್ಕೂ ಮನಮೋಹನ್‌ ಅವರು ಪ್ರತ್ಯುತ್ತರ ನೀಡಿದ್ದಾರೆ. ಅದೇ ಸಂದರ್ಭದಲ್ಲಿ ನಾನು ಕೂಡ ಅವರಿಗೆ ಎಷ್ಟೊಂದು ಪತ್ರಗಳನ್ನು ಬರೆದಿದ್ದೆ. ಆದರೆ ನನ್ನ ಒಂದು ಪತ್ರ­ಕ್ಕಾದರೂ ಅವರಿಂದ ಪ್ರತಿಕ್ರಿಯೆ ಬರಲಿಲ್ಲ’ ಎಂದು ಇಂಗ್ಲಿಷ್‌ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘2 ಜಿ ಪ್ರಕರಣದಲ್ಲಿ ಸರ್ಕಾರದ ತಪ್ಪು ನಿರ್ಧಾರದಿಂದಾಗಿ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ’ ಎಂದು ನಾನು ಅಂದಾಜಿ­ಸಿದ್ದೆ. ‘ಆದರೆ ಇದು ನಷ್ಟ ಅಂದಾ­ಜಿಸುವ ಸರಿಯಾದ ವಿಧಾನ ಅಲ್ಲ’ ಎಂದು ನನಗೇ ನೇರವಾಗಿ ಹೇಳಿ­ದ್ದರು. ಆಗ ನಾನು, ಹೀಗೆ ಲೆಕ್ಕ ವಿಧಾನವನ್ನು ನಮಗೆಲ್ಲಾ ಕಲಿಸಿದವರೇ ನೀವು ಎಂದು ಅವರಿಗೆ ಹೇಳಿದ್ದೆ’ ಎಂದು ರಾಯ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT