ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹನ್ ವಿಚಾರಣೆ: ಸಿಬಿಐಗೆ ಸೂಚನೆ

Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನ­ಮೋಹನ್ ಸಿಂಗ್ ಅವರನ್ನು ಕೂಡ ಪ್ರಶ್ನಿ­ಸುವಂತೆ ವಿಚಾರಣಾ ನ್ಯಾಯಾ­ಲಯ ಮಂಗಳ­ವಾರ ಸಿಬಿಐಗೆ ಆದೇಶಿಸಿದೆ.

2005ರಲ್ಲಿ ಕಲ್ಲಿದ್ದಲು ಖಾತೆ­ಯ­ನ್ನೂ ಹೊಂದಿದ್ದ ಪ್ರಧಾನಿ ಮನ­ಮೋಹನ್‌ ಸಿಂಗ್ ಒಡಿಶಾದ ತಲ­ಬಿರಾ ಎರಡನೇ ಕಲ್ಲಿ­ದ್ದಲು ನಿಕ್ಷೇಪವನ್ನು ಕುಮಾರ ಮಂಗಲಂ ಬಿರ್ಲಾ ಒಡೆತನದ ಹಿಂಡಾಲ್ಕೊ ಕಂಪೆನಿಗೆ ವಹಿಸಿದ ಪ್ರಕ­ರಣದ ತನಿಖೆ ನಡೆಸಿದ್ದ ಸಿಬಿಐ ನ್ಯಾಯಾ­ಲಯಕ್ಕೆ ಪರಿ­ಸಮಾಪ್ತಿ ವರದಿ ಸಲ್ಲಿಸಿತು.

ಆದರೆ, ಇದನ್ನು ಒಪ್ಪದ ನ್ಯಾಯಾ­ಲಯ ಪ್ರಕರಣದ ಹೆಚ್ಚಿನ ತನಿಖೆ ಅಗತ್ಯ­ವಿದೆ ಎಂದು ಹೇಳಿ ಸಿಬಿಐ ಸಲ್ಲಿಸಿದ್ದ ಪರಿಸಮಾಪ್ತಿ ವರದಿ­ಯನ್ನು  ತಿರಸ್ಕರಿಸಿ­ತು. ಅಲ್ಲದೇ  ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಮರಳಿ ಸಿಬಿಐಗೆ ವಹಿಸಿತು. 

ಸಿಬಿಐ ತನಿಖಾಧಿ­ಕಾರಿಗಳನ್ನು ತರಾ­ಟೆಗೆ ತೆಗೆದು­ಕೊಂಡ ನ್ಯಾಯಾಧೀಶ ಭರತ್‌ ಪರಾಶರ್‌,  ಮರು ತನಿಖೆ ಆರಂಭಿ­ಸುವ ಮುನ್ನ ಅಂದಿನ ಕಲ್ಲಿದ್ದಲು ಸಚಿವ­ರನ್ನು (ಮನ­ಮೋಹನ್‌ ಸಿಂಗ್‌) ಮೊದಲು ವಿಚಾ­ರಣೆಗೆ ಒಳ­ಪಡಿ­ಸಿ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT