ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನವೊಲಿಕೆ ಎಲ್ಲಿಂದ ಶುರುವಾಗಬೇಕು?

Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ತಾಯ್ನುಡಿ ಪರ ಯುದ್ಧ (ಪ್ರ.ವಾ. ಸೆ.17) ಸಾರಬೇಕೆಂದಿರುವ ನಟರಾಜ್‌ ಹುಳಿಯಾರರು, ‘ಮಾಧ್ಯಮದ ಸಮಸ್ಯೆ ಬಗೆ­ಹರಿ­ಯುವ ತನಕ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾತೃಭಾಷೆಯ ಮಕ್ಕಳು ಕಡ್ಡಾಯ­ವಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಯುವಂತೆ ಕಾನೂನು ಮಾಡಬೇಕು’ ಎಂದಿ­ರುವುದು ಸರಿಯಲ್ಲ. ಇಲ್ಲಿ ಮಾತೃ­ಭಾಷೆಯ ಪ್ರಶ್ನೆಯೇ ಬರಬಾರದು.

ಕರ್ನಾಟಕದಲ್ಲಿ ಓದುತ್ತಿರುವ  ಪ್ರತಿ­ಯೊಂದು ಮಗುವೂ ರಾಜ್ಯಭಾಷೆ ಕನ್ನಡ­ವನ್ನು ಪ್ರಥಮ ಭಾಷೆಯಾಗಿಯೇ
ಓದ­­ಬೇಕು. ಇನ್ನುಳಿದ ಎರಡು ಭಾಷೆಗಳ ಆಯ್ಕೆ ಪೋಷಕರಿಗೆ ಬಿಟ್ಟಿದ್ದು ಎಂದಾಗ­ಬೇಕು. ಇರುವ ಕಾನೂನುಗಳು ಏನಾ­ದವು ಎಂಬ ಪ್ರಶ್ನೆಗೆ ಉತ್ತರ ಮಾತ್ರ ಕೇಳ­ಬೇಡಿ; ಆದರೂ ಹೊಸ ಕಾನೂನು ಮಾಡಿ ಎಂಬುದು ಕುಚೋದ್ಯದಂತೆ ಕಾಣುತ್ತದೆ.

ಇನ್ನೂ ಮುಂದುವರೆದು ಅವರು, ‘ಕನ್ನಡ­ಪರ ವಿದ್ಯಾರ್ಥಿಗಳು, ಬೋಧಕರು, ರಾಜ­ಕಾರ­ಣಿಗಳು, ಹೋರಾಟಗಾರರು
ಮನೆ­ಮನೆಗೆ ತೆರಳಿ ಪೋಷಕರ ಮನವೊಲಿಸಬೇಕು’ ಎಂದಿದ್ದಾರೆ (ಇಲ್ಲಿ ಉದ್ದೇಶಪೂರ್ವಕವಾ­ಗಿಯೇ ಸಾಹಿತಿಗಳನ್ನು ಕೈಬಿಟ್ಟಿರುವಂತೆ ಕಾಣು­ತ್ತದೆ! ಸ್ವಾಗತಾರ್ಹ ನಿರ್ಧಾರ). ಆದರೆ ಈ ಮನವೊಲಿಕೆ ಎಲ್ಲಿಂದ ಶುರು­ವಾಗಬೇಕು?
ನಿಮ್ಮ ಗುರಿ ಅದೇ ಗ್ರಾಮೀಣ ಪ್ರದೇಶದ, ಬಡವರ, ರೈತರ, ಕೂಲಿ–­ಕಾರ್ಮಿ­ಕರ ಮಕ್ಕಳ ಪೋಷಕರೇ ಆಗಿದ್ದರೆ ಅದು ಇನ್ನೊಂದು ದೊಡ್ಡ ಘಾತು­ಕತನವಾಗುತ್ತದೆ. ಅರ್ಧ ಶತಮಾನದಿಂದ ಸಾಕಷ್ಟು ಗೊಂದಲ­ದಲ್ಲೇ ಮುಳುಗಿರುವ­ವರನ್ನು ಮತ್ತೆ ಒಂದೆ­ರಡು ತಲೆಮಾರು ಗೊಂದಲದಲ್ಲಿ ಮುಳುಗಿ­ಸುವ ಮೂರ್ಖ­ತನವೂ ಇದಾಗುತ್ತದೆ.

ಅದರ ಬದಲು, ನಗರ ಪ್ರದೇಶದ ಅದ­ರಲ್ಲೂ ಪ್ರತಿಷ್ಠಿತ ಬಡಾವಣೆಯ ಪೋಷಕರ ಮನವೊಲಿಕೆಗೆ ಮೊದಲು ಪ್ರಯತ್ನಿಸಲಿ. ಅಲ್ಲಿ ನೀವು ಯಶಸ್ವಿಯಾದರೆ ಮಾತ್ರ ರಾಜ್ಯ­ದಾದ್ಯಾಂತ ಈ ಮನವೊಲಿಕೆ ವಿಸ್ತರಿಸಲಿ. ಕನ್ನಡಿಗರಿಗೇ, ಕನ್ನಡವನ್ನು ಪ್ರಥಮ ಭಾಷೆ­ಯಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಮನ­ವೊಲಿಸುವ ಸ್ಥಿತಿ ಬಂದಿರುವುದು ಕನ್ನಡದ ದುರಂತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT