ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯ ಒಂಟಿಯಾದಾರೆ ಹುಚ್ಚನಾಗುತ್ತಾನೆ

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮನುಷ್ಯ ಸಂಘ ಜೀವಿ, ಸಮಾಜದಿಂದ ಹೊರತುಪಡಿಸಿ ಗುಡ್ಡಗಾಡಿನಲ್ಲಿ ವಾಸಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಸಮೂಹ, ಸಮುದಾಯ, ಹಳ್ಳಿ, ಪಟ್ಟಣ, ನಾಡು, ರಾಜ್ಯ, ದೇಶವೆಂದು ನಮ್ಮ ಪೂರ್ವಿಕಾರು ಇಂತಹ ವ್ಯವಸ್ಥೆಯನ್ನು ರಚನೆ ಮಾಡಿಕೊಂಡಿದ್ದಾರೆ. ಮನುಷ್ಯನ ಜೀವನವು ಒಂದೇ ಕಡೆಯಲ್ಲಿ ನೆಲೆಸಲು ಕುಟುಂಬವೆಂಬ ಪರಿಕಲ್ಪನೆಯನ್ನು ರೂಪಿಸಿಕೊಂಡಿದ್ದಾನೆ. ಇದು ಪ್ರಕೃತಿಯ ಸಹಜ ನಿಯಮವಾಗಿದೆ. ಬಹುಶಃ ಈ ನಿಯಮವು ಈ ಜಗತ್ತಿನ ಎಲ್ಲಾ ಜೀವರಾಶಿಗಳಿಗೆ ಅನ್ವಯಿಸುತ್ತದೆ.

ಮಧ್ಯವಯಸ್ಸಿನಲ್ಲಿ ಪುರುಷ ಸ್ತ್ರೀ ನಡುವೆ ಸಾಂಗತ್ಯ ಮತ್ತು ಸಾಮೀಪ್ಯ ಈ ಎರಡೂ ಮನುಷ್ಯನ ಜೀವನಕ್ಕೆ ತುಂಬಾ ಅವಶ್ಯಕ. ಇದಕ್ಕೆ ಬಲವಾದ ಅಂಶವಿದೆ. ಅದು ಮಧ್ಯವಯಸ್ಸಿನಲ್ಲಿ ಸಂಗಾತಿಯ ವಿಯೋಗದಿಂದ ಏಕಾಂಗಿಯಾಗಿರುವವರು ತಮ್ಮ ಮನಸ್ಸಿನಲ್ಲಿ ಬಹಳ ನೋವನ್ನು ತುಂಬಿಕೊಂಡಿರುತ್ತಾರೆ.

ಮಧ್ಯವಯಸ್ಸಿನವವರು ತಮ್ಮ ಜೀವನದ ಸಂಗಾತಿಯನ್ನು ಕಳೆದುಕೊಂಡ ಕ್ಷಣಗಳಿಂದ ಅವರ ವರ್ತನೆಗಳಲ್ಲಿ ಹಾಗೂ ಆಲೋಚನಗಳಲ್ಲಿ ತುಂಬಾ ಬದಲಾವಣೆ ಕಾಣಬಹುದು. ಅದು ಹೀಗೆ ಒಂಟಿಯಾದ ಈ ಸಮಯದಲ್ಲಿ ಪುರುಷರಾಗಲಿ ಅಥಾವ ಮಹಿಳೆಯರಾಗಲಿ ಒಂಟಿಯಾದ ಸ್ವಲ್ಪ ದಿನಗಳು ಕಳೆದ ಮೇಲೆ ಇವರು ಮನೋಧೈರ್ಯ, ಆತ್ಮಸ್ಥೈರ್ಯವನ್ನು ಕ್ರಮೇಣ ಕುಗ್ಗಿಸಿಕೊಳ್ಳುತ್ತಾರೆ, ತಮ್ಮ ಆಲೋಚನಾಶಕ್ತಿ ಕುಗ್ಗಿ ವಿಚಿತ್ರವಾಗಿ ಚಿಂತಿಸಲು ಆರಂಭಿಸುತ್ತಾರೆ.

ನನ್ನ ಹಿರಿಯ ಅಣ್ಣ ವಿವಾಹವಾಗಿ 25 ವರ್ಷಗಳು ಕಳೆದಿವೆ, ಒಬ್ಬ ಹೆಣ್ಣು ಮಗಳು ಕೂಡ ಇದ್ದಾಳೆ. ಕಾರಣ ತಿಳಿಯದು ಇವನ ದಾಂಪತ್ಯದ ಜೀವನದಲ್ಲಿ ಬಿರುಕು ಉಂಟಾಗಿ ಕಳೆದ 6 ವರ್ಷದಿಂದ ಗಂಡ-ಹೆಂಡತಿ ದೂರವಾಗಿದ್ದಾರೆ. ಈ ನೋವಿನಿಂದ ಹಾಗೂ ತನ್ನ ಮಗಳನ್ನು ಲಾಲನೆ ಪಾಲನೆ ಮಾಡಲು ತಾಯಿಯಿಲ್ಲ ಮಗಳನ್ನು ನೋಡಿಕೊಳ್ಳುವವರು ಯಾರು ಎಂದು ನನ್ನ ಅಣ್ಣ ಮಾನಸಿಕವಾಗಿ ಕೊರಗಿ ಕೊರಗಿ ನಮ್ಮೂರಿನ ಬೀದಿಗಳಲ್ಲಿ ಹುಚ್ಚನಂತೆ ಅಲೆದಾಡುತ್ತಿದ್ದಾನೆ. ಇದನ್ನು ನೆನಪಿಸಿಕೊಂಡರೆ ನಮ್ಮ ಅಣ್ಣನ ಜೀವನಕ್ಕೆ ಸಂಗಾತಿಯ ಆಸರೆಯು ಅತಿ ಮುಖ್ಯವೆಂದು ನಮ್ಮ ಮನೆಯವರಿಗೆ ಈಗ ಅರ್ಥವಾಗುತ್ತಿದೆ.

ಆದರೆ ಬಹುಮುಖ್ಯವಾಗಿ ಜೀವನದಲ್ಲಿ ಲೈಂಗಿಕ ಬಯಕೆಗಳನ್ನ ಮತ್ತು ಆಸೆ-ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಗಂಡಿಗೆ ಹೆಣ್ಣುಬೇಕು, ಹೆಣ್ಣಿಗೆ ಗಂಡುಬೇಕು. ಹಾಗೇ ಮುಪ್ಪಿನಲ್ಲಿ ಯಾರಾದರು ಹತ್ತಿರವಿರಬೇಕೆಂದು ಹಂಬಲಿಸುತ್ತಾರೆ. ಇದನ್ನು ನೋಡಿದವರಿಗೆ ಮಧ್ಯವಯಸ್ಸಿನಲ್ಲಿ ಸಂಗಾತಿಯ ವಿಯೋಗದಿಂದ ಮತ್ತೆ ಸಂಗಾತಿ ಆಸರೆ ಖಂಡಿತವಾಗಿ ಬೇಕೇಬೇಕು.

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಜೀವನದಲ್ಲಿ ಸಂಗಾತಿ ವಿಯೋಗದಿಂದ ಏಕಾಂಗಿಯಾಗಿರುವವರು ತಮ್ಮ ಜೀವನದ ಎರಡೇ ಇನ್ನಿಂಗ್ಸ್ ಖಂಡಿತವಾಗಿ ಆರಂಭಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಹೀಗೆ ಇನ್ನೊಬ್ಬ ಸಂಗಾತಿಯೊಂದಿಗೆ ಜೀವನ ಆರಂಭಿಸುವ ಮೊದಲು ತನ್ನ, ತನ್ನ ಕುಟುಂಬದ ಹಾಗೂ ತಮ್ಮ ಮಕ್ಕಳ ಭವಿಷ್ಯವನ್ನು ಅಲೋಚಿಸಿ ನಂತರ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದರೆ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT