ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಭೇಟಿಗೆ ವಿರೋಧ

Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಢಾಕಾ (ಪಿಟಿಐ):  ಇಸ್ಲಾಮಿಕ್‌ ಉಗ್ರ­ವಾದಿ­­ಗಳ ಬಗ್ಗೆ ಮೆದು ಧೋರಣೆ ಹೊಂದಿರುವ ಪಶ್ಚಿಮ ಬಂಗಾ­ಲದ ಮುಖ್ಯ­ಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಮ್ಮ ಬಾಂಗ್ಲಾ ಪ್ರವಾಸದ ನಿಯೋಗದಲ್ಲಿ ಕರೆತರ­ಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಲ್ಲಿನ ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಬುಧವಾರ  ಇಲ್ಲಿ ಪತ್ರಿಕಾಗೋಷ್ಠಿ ನಡೆ­ಸಿದ ‘ವೇದಾಂತ ಸಾಂಸ್ಕೃತಿ ಮಂಚೊ’ ಪ್ರಧಾನ ಕಾರ್ಯದರ್ಶಿ ಬಿನಯ್‌ ಭೂಷಣ್‌ ಜಾಯ್‌ಭರ್‌, ‘ಇಸ್ಲಾಮಿಕ್‌ ಉಗ್ರಗಾಮಿಗಳು ಪಶ್ಚಿಮ ಬಂಗಾಲದ ಮುಖ್ಯಮಂತ್ರಿಗಳ ಮೆದು ಧೋರಣೆಯಿಂದಾಗಿ ಬಾಂಗ್ಲಾದೇಶ ಮತ್ತು ಭಾರತ ವಿರೋಧಿ ಚಟುವಟಿಕೆ­ಗಳನ್ನು ನಡೆಸುತ್ತಿರಬೇಕು. ಎರಡೂ ದೇಶ­ಗಳ ಶಾಂತಿಪ್ರಿಯ ಜನರು ಈ ಬಗ್ಗೆ ಮಾತನಾಡುತ್ತಿದ್ದರೂ ಮೌನ ವಹಿಸಿ­ರುವ ಮಮತಾ ಬಾಯಿ­ಬಿಡಬೇಕು. ಒಂದು ವೇಳೆ ಅವರು ಬಾಂಗ್ಲಾದೇಶಕ್ಕೆ ಬಂದರೆ ಅವರನ್ನು ಹಿಂದಕ್ಕೆ ಕಳುಹಿಸು­ವ­ವರೆಗೆ ಪ್ರತಿಭಟನೆ ನಡೆಸಬೇಕು’ ಎಂದು ಎಲ್ಲಾ ವಿಮೋಚನಾ ಪರ ಸಂಘಟನೆಗಳನ್ನೂ  ಒತ್ತಾಯಿಸಿದರು.

ಈ ವಾರದಲ್ಲಿ ಎರಡು ದಿನಗಳ ಬಾಂಗ್ಲಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಅವರ ತಂಡದಲ್ಲಿ ಮಮತಾ ಬ್ಯಾನರ್ಜಿ ಕೂಡಾ ಸೇರಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT