ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಮಾಫಿಯಾ

ಅಕ್ಷರ ಗಾತ್ರ

ಮರಳು ವಿತರಣೆ ಮತ್ತು ಸಾಗಣೆಯನ್ನು ಆನ್‌ಲೈನ್‌ ವ್ಯವಸ್ಥೆಗೆ ಒಳಪಡಿಸಬೇಕು ಎಂದು ಮರಳು ಅಕ್ರಮ ಗಣಿಗಾರಿಕೆ ಕುರಿತ ವಿಧಾನಸಭಾ ಸದಸ್ಯರ ಅಧ್ಯಯನ ಸಮಿತಿ ಶಿಫಾರಸು ಮಾಡಿದೆ. ನದಿಯಲ್ಲಿ ನೀರು ಬತ್ತಿದಾಗ ಮರಳನ್ನು ತೆಗೆಯಬಹುದು ಎಂದು ಸಹ ಅದು ಹೇಳಿದೆ.

ಈಗಾಗಲೇ ಮಳೆ ಪ್ರಮಾಣ ಕಡಿಮೆಯಾಗಿ ನದಿಗಳಲ್ಲಿ ನೀರಿಲ್ಲದೆ ಬತ್ತಿ ಹೋಗುವ ಸಮಯ ಬಂದಿದೆ. ಇನ್ನು ಮರಳು ಗಣಿಗಾರಿಕೆಗೆ ಅನುಮತಿ ನೀಡಿದರೆ ಅಲ್ಪಸ್ವಲ್ಪ ನೀರೂ ಸಿಗದಂತಾಗಿ ನದಿಗಳು ಸಂಪೂರ್ಣವಾಗಿ ಬತ್ತುತ್ತವೆ. ಹಾಗೆಯೇ ಮರಳು ಗಣಿಗಾರಿಕೆಗೆ ಯಂತ್ರಗಳನ್ನು ಬಳಸಿ ನದಿ ಮೂಲಗಳಲ್ಲಿ ಮರಳನ್ನು ತೆಗೆಯಲು ಅನುಮತಿ ನೀಡಬಹುದು ಎಂದು ವರದಿಯಲ್ಲಿದೆ.

ಇದರಿಂದ ಅಂತರ್ಜಲದ ಮಟ್ಟ ಕುಸಿಯುತ್ತದೆ ಮತ್ತು ನೀರು ಕಲುಷಿತಗೊಳ್ಳುತ್ತದೆ. ಹಾಗೆಯೇ ಜಲಚರಗಳಿಗೂ ಹಾನಿಯುಂಟಾಗುತ್ತದೆ. ಇದರಿಂದ ಪ್ರಯೋಜನ ಪಡೆದುಕೊಳ್ಳುವವರು ಮರಳು ಗಣಿಗಾರಿಕೆ ವ್ಯಾಪ್ತಿಯ ಶಾಸಕರೇ ಹೊರತು ನಾಗರಿಕರಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT