ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಸಿಡಿಸ್‌ ಬೆಂಜ್‌ ಪರಿಚಯಿಸಿದೆ ‘ಸಿಎಲ್‌ಎ 45 ಎಎಂಜಿ’ ಕಾರು

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಗ್ರೇಟರ್‌ ನೊಯಿಡಾ(ಉತ್ತರ ಪ್ರದೇಶ): ಐಷಾರಾಮಿ ಕಾರುಗಳ ವಿಭಾಗದಲ್ಲಿ ಹೆಸರು ಮಾಡಿರುವ ಜರ್ಮನಿ ಮೂಲದ ‘ಮರ್ಸಿಡಿಸ್‌ ಬೆಂಜ್‌’ ಕಂಪೆನಿ, ಭಾರತದ ಮಾರುಕಟ್ಟೆಗೆ ‘ಸಿಎಲ್‌ಎ45 ಎಎಂಜಿ’ ಕಾರನ್ನು ಇಲ್ಲಿ ಬಿಡುಗಡೆ ಮಾಡಿತು.

ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ‘ಮರ್ಸಿಡಿಸ್‌ ಬೆಂಜ್‌ ಇಂಡಿಯಾ’ದ ವ್ಯವಸ್ಥಾಪಕ ನಿರ್ದೇಶಕ ಎಬೆರ್ಹಾರ್ಡ್‌ ಕೆರ್ನ್‌, ಇದು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿರುವ ಕಂಪೆನಿಯ 7ನೇ ಕಾರು. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಐಶಾರಾಮಿ ಕಾರು ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.

‘ಸಿಎಲ್‌ಎ45 ಎಎಂಜಿ’ ಕಾರಿಗೆ ಅಳ ವಡಿಸಿರುವ 4 ಸಿಲಿಂಡರ್‌ಗಳ, 2.0 ಲೀಟರ್‌ ಟರ್ಬೊ ಎಂಜಿನ್‌, ಗರಿಷ್ಠ 265 ಕಿಲೊವಾಟ್‌ ಶಕ್ತಿ ಹೊರಹೊಮ ್ಮಿಸುವ ಸಾಮರ್ಥ್ಯದ್ದಾಗಿದೆ. ಕೇವಲ 4.6 ಸೆಕೆಂಡ್‌ಗಳಲ್ಲಿ 0 ಇಂದ 100 ಕಿ.ಮೀಗಳಿಗೆ ವೇಗ ಹೆಚ್ಚಿಸಿಕೊಳ್ಳಬಲ್ಲದು. ಕ್ರೀಡಾಕಾರುಗಳಿಗೆ ಅಳವಡಿಸುವಂತಹ ಉತ್ಕೃಷ್ಟ ಗುಣಮಟ್ಟ ಸಸ್ಪೆನ್ಷನ್‌ ಈ ಕಾರಿಗೂ ಅಳವಡಿಸಲಾಗಿದೆ.

ವೇಗಕ್ಕಷ್ಟೇ ಅಲ್ಲ, ಚಾಲಕ ಮತ್ತು ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಗಮನ ನೀಡಿ ಕಾರನ್ನು ವಿಶೇಷವಾಗಿ ವಿನ್ಯಾಸಗೊಳಿಸ ಲಾಗಿದೆ. ದೆಹಲಿಯಲ್ಲಿ ಕಾರಿನ ಎಕ್ಸ್‌ ಷೋರೂಂ ಬೆಲೆ ₨68.50 ಲಕ್ಷ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT