ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲತಾಯಿ ಧೋರಣೆ: ಆಕ್ರೋಶ

Last Updated 1 ಮಾರ್ಚ್ 2015, 19:49 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ನಿವೇಶನ ಇಲ್ಲದ ಕಡುಬಡವರಿಗೆ ಮತ್ತು ಸ್ಮಶಾನಕ್ಕೆ ಜಾಗ ಮೀಸಲಿಡುವಲ್ಲಿ ಸರ್ಕಾರ ಮಲತಾಯಿ ಧೋರಣೆ ತಾಳುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಮೋಹಳ್ಳಿಯಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌ ಕಾರ್ಯಕ್ರಮದಲ್ಲಿ ಭಾಗ-ವಹಿ-ಸಿದ್ದ ಹಲವು ಗ್ರಾಮಸ್ಥರು ಸರಿ-ಯಾಗಿ ಮಾಹಿತಿ ನೀಡದೆ ಕಾರ್ಯಕ್ರಮ ನಡೆಸುತ್ತಿರು-ವುದು ಸರಿಯೇ ಎಂದು ಪ್ರಶ್ನಿಸಿದರು.

ವಿಶೇಷ ತಹಶೀಲ್ದಾರ್‌ ರಘು ಆಚಾರ್‌, ಪ್ರಚಾರದ ಕೊರತೆ ಬಗ್ಗೆ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಹಲವು ಪಂಚಾಯ್ತಿಗಳಲ್ಲಿ ನಡೆಯುವ ಕಂದಾಯ ಅದಾಲತ್‌ನಲ್ಲಿ ಸರಿಪಡಿಸ-ಲಾಗುವುದು. ಕಾರ್ಯಕ್ರಮ ಸುಗಮ-ವಾಗಿ ನಡೆಯಲು ಅವಕಾಶ ಮಾಡಿ-ಕೊಡಿ ಎಂದು ಮನವಿ ಮಾಡಿದರು.

ಪಂಚಾಯ್ತಿ ಸದಸ್ಯ ವಿ.ವೇಣುಗೋಪಾಲ್‌, ಹಲವಾರು ಗ್ರಾಮಗಳಲ್ಲಿ ನಿವೇಶನಕ್ಕಾಗಿ ಬಡವರು ಕಾಯುತ್ತಿದ್ದು, ಮಾನವೀಯ ದೃಷ್ಟಿಯಿಂದ ನಿವೇಶನ ವಿತರಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT