ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಅಬ್ಬರದ ಮಳೆ

Last Updated 23 ಜುಲೈ 2014, 19:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶ­ದಲ್ಲಿ ಭಾರಿ ಮಳೆ ಬುಧವಾ­ರವೂ ಮುಂದು­ವರಿದಿದೆ. ಕೊಡಗು ಜಿಲ್ಲೆ­ಯಲ್ಲಿ ಶಾಲಾ ಕಾಲೇಜುಗಳಿಗೆ ರಜೆಯನ್ನು ಗುರುವಾರ­ದವರೆಗೆ  ವಿಸ್ತರಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂ­ಕಿ­ನಲ್ಲಿ ಶಾಲಾ ಕಾಲೇಜುಗಳಿಗೆ ಬುಧ­ವಾರ ರಜೆ ಸಾರಲಾಗಿತ್ತು. ಸಾಗರ ತಾಲ್ಲೂ­ಕಿನಲ್ಲಿ ವರದಾ ನದಿ ಪ್ರವಾಹ­ದಿಂದ ಸುಮಾರು 1100 ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ.

ಬೆಳಗಾವಿ ವರದಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಭಾರಿ ಮಳೆಯಿಂದಾಗಿ ಮಂತುರ್ಗಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಲಾತ್ರಿ ಹಳ್ಳದಲ್ಲಿ ಪ್ರವಾಹ ಉಂಟಾಗಿ­ರುವುದರಿಂದ ಬುಧವಾರ 40ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ­ವಾಗಿದೆ.
ಮಹಾರಾಷ್ಟ್ರದ ವಿವಿಧ ಜಲಾಶಯ, ಬ್ಯಾರೇಜ್‌ಗಳಿಂದ ಕೃಷ್ಣಾ ಮತ್ತು ಅದರ ಉಪನದಿಗಳಿಗೆ ಒಟ್ಟು 90,663 ಕ್ಯೂಸೆಕ್‌ ನೀರು ಬಿಡಲಾಗಿದೆ.

ಯಲ್ಲಾಪುರ ವರದಿ: ಉತ್ತರ ಕನ್ನಡ ಜಿಲ್ಲೆ­ಯಾದ್ಯಂತ ಮಳೆ ಮುಂದುವರಿದ್ದು ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತಿ­ತರ ಕಡೆಗಳಲ್ಲಿ ಕೆಲವೆಡೆ ಅಡಿಕೆ, ತೆಂಗಿನ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಹುಬ್ಬಳ್ಳಿ–ಧಾರವಾಡದಲ್ಲಿ ಬೆಳಿಗ್ಗೆ­ಯಿಂದ ಸತತವಾಗಿ ಮಳೆ ಸುರಿದಿದೆ. ಬೆಳಗಾವಿ, ಗದಗ, ವಿಜಾಪುರ ಜಿಲ್ಲೆಗ­ಳಲ್ಲೂ ಮಳೆಯಾಗಿದೆ.

ಮಡಿಕೇರಿ ವರದಿ: ಭಾಗಮಂಡಲದಲ್ಲಿ ಕನ್ನಿಕಾ ಉಪನದಿ ತುಂಬಿ ಹರಿಯುತ್ತಿರು­ವುದರಿಂದ ಕೆಲ ಹೊತ್ತು ಮಡಿಕೇರಿ ರಸ್ತೆ ಜಲಾವೃತಗೊಂಡಿತ್ತು. ದಕ್ಷಿಣ ಕೊಡಗಿ­ನಲ್ಲಿ ಲಕ್ಷ್ಮಣತೀರ್ಥ ನದಿ ರಭಸದಿಂದ ಹರಿ­ಯು­ತ್ತಿದೆ. ಬಾಳೆಲೆ– ನಿಟ್ಟೂರು ಸೇತುವೆ ಈಗಲೂ ನೀರಿನಲ್ಲಿ ಮುಳುಗಿದೆ.

ಚಿಕ್ಕಮಗಳೂರು ವರದಿ: ಜಿಲ್ಲೆಯಾ­ದ್ಯಂತ ಮುಂಗಾರು ಮಳೆ ಮುಂದುವರಿ­ದಿದ್ದು, ಬುಧವಾರ ಇಡೀ ದಿನ ಧಾರಾ­ಕಾರ ಮಳೆ ಸುರಿಯಿತು.
ನಾಲ್ಕೈದು ದಿನಗಳಿಂದ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತುಂತುರಿ­ನಂತೆ ಸುರಿಯುತ್ತಿದ್ದ ಮಳೆ, ಬುಧವಾರ ಮಧ್ಯಾಹ್ನದ ನಂತರ ಅಬ್ಬರ ಪಡೆದು­ಕೊಂಡಿದೆ. ಇಡೀ ದಿನ ಬಹುತೇಕ ರೈತ­ರಿಗೆ ಕೃಷಿ ಮತ್ತು ತೋಟಗಾರಿಕೆ ಚಟು­ವಟಿಕೆ ನಡೆಸಲು ಮಳೆ ಆಸ್ಪದ ನೀಡಲಿಲ್ಲ.

ಶಿವಮೊಗ್ಗ ವರದಿ: ಸಾಗರ ತಾಲ್ಲೂ­ಕಿ­ನಲ್ಲಿ ಬುಧವಾರ ಭಾರಿ ಮಳೆಯಾಗಿದ್ದು ತಾಳಗುಪ್ಪ ಹೋಬಳಿಯ ಕಾನ್ಲೆ, ಮಂಡ­ಗ­ಳಲೆ, ಸೈದೂರು ಸುತ್ತಮುತ್ತಲ ಗ್ರಾಮ­ಗಳ 1100 ಎಕರೆ ಕೃಷಿ ಭೂಮಿ ವರದಾ ನದಿ ಪ್ರವಾಹದಿಂದ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಶಾಲೆಗೆ ರಜೆ: ಸಾಗರ ತಾಲ್ಲೂಕಿನಲ್ಲಿ  ಮಳೆ ಮುಂದುವರಿದರೆ ಶಾಲಾ ಕಾಲೇಜು­­ಗಳಿಗೆ ರಜೆಯನ್ನು ಗುರುವಾ­ರವೂ ಮುಂದುವರಿ­ಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಕೆ.ಆರ್.ಎಸ್. ಗೆ ಒಂದೇ ದಿನ ಮೂರು ಅಡಿ ನೀರು
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾ­ಗು­ತ್ತಿ­ರುವುದರಿಂದ ಕೆ.ಆರ್.ಎಸ್. ಅಣೆಕಟ್ಟೆಗೆ ಬುಧವಾರ 3 ಅಡಿ­ಗಳಷ್ಟು ನೀರು ಬಂದಿದೆ. ಮಂಗಳವಾರ 103.60 ಅಡಿ­ಯ­ಷ್ಟಿದ್ದ ನೀರು ಬುಧವಾರ ಸಂಜೆಯ ವೇಳೆಗೆ 106.60 ಅಡಿಗೆ ಏರಿದೆ. ಒಳ ಹರಿವು 35,373 ಕ್ಯೂಸೆ­ಕ್‌ಗೆ ಹೆಚ್ಚಿದೆ. ಹೊರ ಹರಿ­ವನ್ನು 6,437 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT