ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆರಾಯನ ಮಾಯೆ

ಪಿಕ್ಚರ್‌ ಪ್ಯಾಲೆಸ್‌
Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮಳೆಯೆಂದರೆ ಮೋಡ ಕರಗಿ ಆಕಾಶದಿಂದಿಳಿಯುವ ನೀರ ಹನಿಗಳಷ್ಟೇ ಅಲ್ಲ. ವಸುಂಧರೆಯೊಡನೆ ಆಗಸ ನಡೆಸುವ ಒಲುಮೆಯ ಒಡನಾಟ. ಭೂಮಿಯಮ್ಮನ ಎದೆನೆಲವ ತೋಯಿಸಿ ಪ್ರೀತಿ ಹಸಿರನು ಚಿಗುರಿಸುವ ಜೀವ–ಭಾವದ ನಿಸರ್ಗದಾಟ.. ಹೊಳೆ ಹೊಳೆಯುತ ಬಾನಿಂದ ಇಳೆಗಿಳಿವ ಪ್ರತಿ ಹನಿಯೂ ಅನನ್ಯ. ನೆನೆಯುವ ಮಾನವ,ಕಾಣುವ ಕಣ್ಣಿಗೂ ಮಳೆ ಅಷ್ಟೇ ಭಿನ್ನ.

ಬಯಲ ಬಿಸಿಲಲಿ ದಿನದ ಅನ್ನವ ಹುಟ್ಟಿಸಿಕೊಳ್ಳುವವರಿಗೆ ಮಳೆಯೆಂಬುದು ಹೊಟ್ಟೆಪಾಡಿಗೆ ಅಡ್ಡಿಯಾಗುವ ಅಡಚಣಿ. ಮಫ್ಲರು ಸುತ್ತಿ ಬೀದಿಗಿಳಿದ ಎಳೆ ಮಗುವಿಗೆ ಮಳೆಹನಿ ಹೊಸ ಜಗತ್ತಿನ ಸ್ಪರ್ಶಮಣಿ.. ಮುಸ್ಸಂಜೆಯ ನಸುಗತ್ತಲಲಿ ಕೊಡೆ ಹಿಡಿದು ಹೊರಟವರ ಮನದ ಗಾಯ ತೊಳೆಯಲು ಮಳೆಯ ಮಾಯೆಯೇ ಬೇಕು.

ಮಳೆನಿಂತ ಮುಂಜಾವು ಹನಿಯ ಉದುರಿಸಿ ಪುಳಕವೆಬ್ಬಿಸುವ ಮರದ ಕೆಳಗೆ ಇಬ್ಬರ ಪಾಲಿಗೆ ಒಂದೇ ಕೊಡೆ.. ಸಂಬಂಧದ ನವೀಕರಣಕ್ಕೆ ಇನ್ನೇನು ಬೇಕು? ಬಣ್ಣದ ಕೊಡೆಯೊಳಗೆ ಭುಜವಷ್ಟೇ ನೆನೆಯುತ್ತಿದ್ದರೆ ಮನಸು ನೆನೆಸಿಕೊಳ್ಳುವ ಮುಖದ ಚಹರೆ ಮಳೆಗಷ್ಟೇ ಗೊತ್ತು. ಧಗೆಯಲ್ಲಿ ಬೆವರುತ್ತಿದ್ದ ನಗರಕ್ಕೆ ಅನಿರೀಕ್ಷಿತ ಅತಿಥಿಯಾಗಿ ಬಂದು ಮೂರು ದಿನ ಉಳಿದು ಹೋದ ಮಳೆರಾಯ ರೂಪಿಸಿದ ಸುಖದ ಮುಖಗಳು ಕ್ಯಾಮೆರಾ  ಫ್ರೇಮಿನೊಳಗೆ ಶಾಶ್ವತಗೊಂಡದ್ದು ಹೀಗೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT