ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವದ ಒಪ್ಪಂದಗಳ ಚರ್ಚೆ

ಪ್ರಣವ್‌ ಬೆಲಾರಸ್‌ ಭೇಟಿ; ಬಿಎಚ್ಇಎಲ್‌ ಯೋಜನೆಗೆ ಚಾಲನೆ
Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಮಿನ್ಸ್ಕ್‌ (ಪಿಟಿಐ): ಪೂರ್ವ ಯುರೋಪಿ­ಯನ್‌ ರಾಷ್ಟ್ರಗಳ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಬುಧವಾರ ಬೆಲಾರಸ್‌ಗೆ ಭೇಟಿ ನೀಡಿದ್ದು ಅಧ್ಯಕ್ಷ ಎ.ಜಿ. ಲುಕಾಷೆಂಕೊ ಅವರೊಂ­ದಿಗೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳುವ ಸಂಬಂಧ ಮಾತುಕತೆ ನಡೆಸಿದರು.

ಪ್ರಮುಖವಾಗಿ ರಕ್ಷಣೆ, ಭದ್ರತೆ, ವಾಣಿಜ್ಯ ಕ್ಷೇತ್ರದಲ್ಲಿನ ಸಹಕಾರವನ್ನು ವೃದ್ಧಿಗೊಳಿಸುವುದು, ಗಣಿಗಾರಿಕೆ ಮತ್ತು ಶಿಕ್ಷಣ ಕ್ಷೇತ್ತದಲ್ಲಿ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಉಭಯ ರಾಷ್ಟ್ರಗಳ ಅಧ್ಯಕ್ಷರು ಚರ್ಚೆ ನಡೆಸಿದರು.

ಪೂರ್ವ ಯುರೋಪ್‌ ರಾಷ್ಟ್ರಗಳಿಗೆ ಭೇಟಿ ನೀಡಿದ ಭಾರತದ ಪ್ರಥಮ ನಾಯಕ ಎಂಬ ಹೆಗ್ಗಳಿಕೆಗೆ ಪ್ರಣವ್‌ ಪಾತ್ರ­ರಾಗಿದ್ದಾರೆ. ಮಂಗಳವಾರ ರಾತ್ರಿ ಬಂದಿಳಿದ ರಾಷ್ಟ್ರಪತಿ ಅವರನ್ನು ‘ಪ್ಯಾಲೆಸ್‌ ಆಫ್‌ ಇಂಡಿಪೆಂಡೆನ್ಸ್‌’ನಲ್ಲಿ  ಅಭೂತ­ಪೂರ್ವ ಸ್ವಾಗತದೊಂದಿಗೆ ಬರಮಾಡಿ­ಕೊಳ್ಳಲಾಯಿತು. ವಾಣಿಜ್ಯ, ಶಿಕ್ಷಣ, ಭಾರಿ ಯಂತ್ರೋಪಕರಣ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿನ ಉಭಯ ರಾಷ್ಟ್ರಗಳ ನಡು­ವಿನ ಸಹಕಾರವನ್ನು ಬಲಪಡಿಸುವ ಬಗ್ಗೆ ಇಬ್ಬರೂ ನಾಯಕರು ಮಾತುಕತೆ ನಡೆಸಿದರು.

ಪ್ರಣವ್‌, ಬೆಲಾರಸ್‌ ಸ್ಟೇಟ್‌ ವಿ.ವಿ ಆವರಣದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಅನಾ­ವರಣ ಮಾಡ­ಲಿದ್ದು,  ಇದೇ ವೇಳೆ ವಿ.ವಿಯ ಗೌರವ ಪದವಿಯನ್ನೂ ಸ್ವೀಕರಿಸಲಿದ್ದಾರೆ.

ಬಿಎಚ್ಇಎಲ್‌ನ ಯೋಜನೆಗೆ ಚಾಲನೆ
ಬೆಲಾರಸ್‌ಗೆ ನೀಡಿರುವ ಮೊದಲ ಭೇಟಿಯಲ್ಲಿ ಪ್ರಣವ್‌ ಮುಖರ್ಜಿ ಅವರು ಕೆಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅವುಗಳಲ್ಲಿ ಭಾರತ್‌ ಹೆವಿ ಇಲೆಕ್ಟ್ರಿಕಲ್ಸ್‌ ಲಿಮಿಟೆಡ್‌ (ಬಿಎಚ್ಇಎಲ್‌) ಮರುವಿನ್ಯಾಸ ಮಾಡಿರುವ ಮಹತ್ವದ ಒಂದು ವಿದ್ಯುತ್‌ ಯೋಜನೆಯೂ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT