ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದಾಯಿ ಶೀಘ್ರ ಇತ್ಯರ್ಥ

ತ್ವರಿತ ವಿಚಾರಣೆಗೆ ನ್ಯಾಯಮಂಡಳಿ ಸಮ್ಮತಿ
Last Updated 2 ಮೇ 2016, 19:54 IST
ಅಕ್ಷರ ಗಾತ್ರ

ನವದೆಹಲಿ: ಮಹಾದಾಯಿ ನದಿ ನೀರು ಹಂಚಿಕೆ ವಿವಾದವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ನ್ಯಾಯಮೂರ್ತಿ ಜೆ.ಎಂ. ಪಾಂಚಾಲ ಅವರ ನೇತೃತ್ವದ ನ್ಯಾಯಮಂಡಳಿ ಸೋಮವಾರ ಸಮ್ಮತಿಸಿತು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದು ನೀರಿಗೆ ಹಾಹಾಕಾರ ತಲೆದೋರಿರುವುದರಿಂದ ಈ ವಿವಾದವನ್ನು  ಬೇಗ  ಪರಿಹರಿಸಬೇಕೆಂದು ಕರ್ನಾಟಕ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ನ್ಯಾಯಮಂಡಳಿ ಅಂಗೀಕರಿಸಿತು.

ಇದಕ್ಕೂ ಮೊದಲು ಶೀಘ್ರ ವಿವಾದ  ಇತ್ಯರ್ಥಕ್ಕೆ ಆಗ್ರಹಿಸಿ ನ್ಯಾಯಮಂಡಳಿಗೆ ಬರೆದಿದ್ದ ಪತ್ರವನ್ನು ಕರ್ನಾಟಕ ಬುಧವಾರ ಹಿಂದಕ್ಕೆ ಪಡೆದಿತ್ತು. ಈ ಪತ್ರಕ್ಕೆ ನ್ಯಾಯಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಕರ್ನಾಟಕ ಕ್ಷಮೆ ಯಾಚಿಸಿತ್ತು.

ಸೋಮವಾರದ ವಿಚಾರಣೆ ವೇಳೆ ಕರ್ನಾಟಕದ ವಕೀಲ ನಿಶಾಂತ ಪಾಟೀಲ ಹಾಜರಿದ್ದರು.

ಒಪ್ಪದ ಗೋವಾ: ಮಹಾದಾಯಿ ವಿವಾದವನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ತನ್ನ ವಿರೋಧವಿಲ್ಲ. ಆದರೆ, ಕರ್ನಾಟಕದಲ್ಲಿ ಬರಗಾಲವಿದೆ ಎಂಬ ವಾದವನ್ನು ಒಪ್ಪುವುದಿಲ್ಲ ಎಂದು ವಿವಾದದಲ್ಲಿ ಭಾಗಿಯಾಗಿರುವ ಗೋವಾ,  ನ್ಯಾಯಮಂಡಳಿಯ ಮುಂದೆ ಸ್ಪಷ್ಟಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT