ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಬಿಜೆಪಿಗೆ ಶಿವಸೇನೆ ಎಚ್ಚರಿಕೆ

Last Updated 27 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಾಳ ಠಾಕ್ರೆ ಅವರು ಹಿಂದೂತ್ವದ ಪರ ಸೆಟೆದು  ನಿಂತಿದ್ದರಿಂದ ಅವರ ಪ್ರಭಾವದ ಲಾಭ ಪಡೆದು ಅನೇಕರು ರಾಜಕೀಯ­ವಾಗಿ ಬೆಳೆದರು. ಆದರೆ ಮಹಾರಾಷ್ಟ್ರದ­ಮೇಲೆ ಸವಾರಿ ಮಾಡಲು ಬಂದವರು ಮಣ್ಣು ಮುಕ್ಕಿ­ದ್ದಾರೆ ಎಂಬುದನ್ನು ಮರೆ­ಯ­ಬಾರದು ಎಂದು ಶಿವಸೇನೆ­ಯು ಪರೋಕ್ಷ­ವಾಗಿ ತನ್ನ ಮಾಜಿ ಮಿತ್ರಪಕ್ಷ­ ಬಿಜೆಪಿಗೆ ಎಚ್ಚರಿಕೆ ನೀಡಿದೆ.

ಠಾಕ್ರೆ ಪ್ರಭಾವದಿಂದ ಬಿಜೆಪಿ ಕೇಂದ್ರ­ದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ನಡೆಯುವ ವಿಧಾನಸಭೆ ಚುನಾ­ವಣೆ ಆತ್ಮಗೌರವ ಕಾಪಾಡುವ ಹೋರಾ­­­ಟ­ವಾಗಿದೆ ಎಂದು ಶಿವಸೇನೆ ಮುಖವಾಣಿ ‘ಸಾಮ್ನಾ’­ದಲ್ಲಿ ಬರೆಯ­ಲಾಗಿದೆ.

‘ಶಿವಾಜಿ ಮಹಾ­ರಾಜನ ನಂತರ ಬಾಳ ಠಾಕ್ರೆ ಅವರೇ ಹಿಂದೂತ್ವವನ್ನು ಕಾಪಾಡಿ­ದರು. ಆದರೆ ಕೆಲವರು ಬಾಯಲ್ಲಿ ರಾಮ ಜಪ ಮಾಡುತ್ತ ಬಗ­ಲಲ್ಲಿ ಚೂರಿ ಇಟ್ಟು-­ಕೊಂಡು ದ್ರೋಹ ಬಗೆಯು­ತ್ತಿದ್ದಾರೆ’ ಎಂದು ಬಿಜೆಪಿ  ಪಕ್ಷದ ವಿರುದ್ಧ ಹರಿಹಾಯ­ಲಾಗಿದೆ.

ಮಾಜಿ ಮೇಯರ್‌ ಎಂಎನ್ಎಸ್‌ ಅಭ್ಯರ್ಥಿ: ಶಿವ­ಸೇನೆ ಪ್ರಮುಖ ನಾಯಕಿ ಮತ್ತು ಮಾಜಿ ಮೇಯರ್ ಶುಭಾ ರಾವಲ್ ಎಂಎನ್ಎಸ್‌ ಅಭ್ಯ­ರ್ಥಿ­­ಯಾಗಿ ಈ ಬಾರಿ ದಹಿಸಾರಾ ವಿಧಾನ­ಸಭಾ ಕ್ಷೇತ್ರ­ದಿಂದ ಸ್ಪರ್ಧಿಸುತ್ತಿ­ರು­ವುದ­ರಿಂದ ಶಿವಸೇನೆಗೆ ಆಘಾತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT