ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಶಸ್ತ್ರಾಗಾರದಲ್ಲಿ ಬೆಂಕಿ ದುರಂತ 17 -ಯೋಧರು ಸಾವು

Last Updated 31 ಮೇ 2016, 5:26 IST
ಅಕ್ಷರ ಗಾತ್ರ

ನಾಗಪುರ(ಪಿಟಿಐ): ಮಹಾರಾಷ್ಟ್ರದ ಪುಲ್ಗಾಂವ್‌ನಲ್ಲಿನ ಸೇನಾ ಶಸ್ತ್ರಾಗಾರದಲ್ಲಿ ಮಂಗಳವಾರ ಬೆಳಗಿನಜಾವ ಬೆಂಕಿ ದುರಂತ ಸಂಭವಿಸಿದ್ದು, ಇಬ್ಬರು ಯುವ ಸೇನಾ ಅಧಿಕಾರಿಗಳು ಸೇರಿದಂತೆ 17 ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ.

ಘಟನೆಯಲ್ಲಿ 17 ರಕ್ಷಣಾ ಭದ್ರತಾ ಪಡೆಯ(ಡಿಎಸ್‌ಸಿ) ಯೋಧರು ಸಾವಿಗೀಡಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಸಂಗ್ರಹಾಗಾರದಲ್ಲಿನ ಒಂದು ಕೊಠಡಿಯಲ್ಲಿನ ಬೆಂಕಿಯನ್ನು ನಂದಿಸಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ. ಇತರ ಕೊಠಡಿಗಳಲ್ಲಿ ಮತ್ತೆ ಇಂಥ ಅವಘಡ ಮುಂದುವರಿಯುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದ್ದಾರೆ. 

ರಾಷ್ಟ್ರದಲ್ಲಿನ ಬಹುದೊಡ್ಡ ಈ ಶಸ್ತ್ರಾಗಾರ ಪುಲ್ಗಾಂವ್‌ನಲ್ಲಿದ್ದು, ನಾಗಪುರದಿಂದ 110 ಕಿ.ಮೀ. ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT