ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸಚಿವಾಲಯ ಕಚೇರಿಯಲ್ಲಿ ಬೆಂಕಿ

Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಹಾರಾಷ್ಟ್ರ ರಾಜ್ಯ­ಸಚಿವಾಲಯದ ಕಚೇ­ರಿ ಕಟ್ಟಡದ ಮೊದಲ ಮಹಡಿ­ಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಸೋಮವಾರ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ­ಯಿಂದಾಗಿ ಯಾವುದೇ ಅನಾಹುತ ಉಂಟಾಗಿಲ್ಲ.

ಮಧ್ಯಾಹ್ನ  3.45ರ ಸುಮಾರಿಗೆ ಶಾರ್ಟ್‌ ಸರ್ಕಿಟ್‌­ನಿಂದಾಗಿ ಸಾಮಾ­ಜಿಕ ನ್ಯಾಯ ಇಲಾಖೆ  ಕಾರ್ಯ­ದರ್ಶಿ ಆರ್‌.ಡಿ.ಶಿಂಧೆ ಹಾಗೂ ಬುಡ­ಕಟ್ಟು ವ್ಯವಹಾರಗಳ ರಾಜ್ಯ ಸಚಿವ  ರಾಜೇಂದ್ರ ಗವಿಟ್‌ ಕಚೇರಿಯಲ್ಲಿ ಬೆಂಕಿ ಕಾಣಿಸಿ­ಕೊಂಡಿತು. ಕಟ್ಟಡದಲ್ಲಿದ್ದ ಜನರನ್ನು ಸ್ಥಳಾಂತರಿಸಿ, ವಿದ್ಯುತ್‌ ಸಂಪರ್ಕ­ವನ್ನು ಕಡಿತಗೊಳಿಸಲಾಯಿತು.

‘ಇದೊಂದು ಸಣ್ಣ ಘಟನೆ. ಮೂರು ಅಗ್ನಿಶಾಮಕದಳ, ಎರಡು ನೀರಿನ ಟ್ಯಾಂಕರ್‌  ಹಾಗೂ ಒಂದು ಜಂಬೊ ಟ್ಯಾಂಕರ್‌­­ಗಳು ಸ್ಥಳಕ್ಕೆ ದೌಡಾ­ಯಿಸಿ­ದವು’  ಎಂದು ಅಗ್ನಿಶಾಮಕ­ದಳದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.  

2012ರ ಜೂನ್‌ 21ರಂದು ಇದೇ ಕಟ್ಟಡದ ಆರನೇ ಮಹಡಿಯಲ್ಲಿ ಅಗ್ನಿ ದುರಂತ ಸಂಭವಿಸಿ ಐದು ಜನರು ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT