ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಕೈಗಾರಿಕಾ ಪಾರ್ಕ್‌

₹8 ಕೋಟಿ ನೀಡಲು ಕೇಂದ್ರ ಒಪ್ಪಿಗೆ
Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಮಹಿಳಾ ಉದ್ಯಮಿ ಗಳಿಗೆ ಪ್ರತ್ಯೇಕವಾದ ಕೈಗಾರಿಕಾಭಿವೃದ್ಧಿ ಪಾರ್ಕ್‌  ಸ್ಥಾಪಿಸಲು ಸಿದ್ಧತೆ ನಡೆದಿದೆ.

ಈ ತಿಂಗಳ ಒಳಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಕೆಐಎಡಿಬಿಗೆ ಸೂಚನೆ ನೀಡಿದ್ದಾರೆ.

ಮಹಿಳಾ ಕೈಗಾರಿಕಾಭಿವೃದ್ಧಿ ಪಾರ್ಕ್‌ ನಿರ್ಮಾಣ ಕುರಿತು ಮಹಿಳಾ ವಿನ್ಯಾಸಕರ ಜತೆ ಅವರು ಶುಕ್ರವಾರ ಚರ್ಚೆ ನಡೆಸಿದರು.

ಕೇಂದ್ರದ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ ಸಚಿವಾಲಯವು ಮಹಿಳಾ ಕೈಗಾರಿಕಾ ಪಾರ್ಕ್‌ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದೆ. ಇದಕ್ಕೆ ₹8 ಕೋಟಿ ಕೊಡಲು ತಾತ್ವಿಕ ಒಪ್ಪಿಗೆ ಕೂಡ ಕೊಟ್ಟಿದೆ ಎಂದು ರತ್ನಪ್ರಭಾ ಸಭೆಗೆ ತಿಳಿಸಿದರು.

ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ನಿವೇಶನಕ್ಕಾಗಿ 45 ಮಹಿಳಾ ಉದ್ಯಮಿಗಳು ಹೆಸರು ಗಳನ್ನು ನೋಂದಾಯಿಸಿಕೊಂಡಿದ್ದಾರೆ.  ಇದೇ 22ರೊಳಗೆ ಅರ್ಜಿ ಸಲ್ಲಿಸುವು ದಕ್ಕೂ ಸೂಚಿಸಲಾಗಿದೆ ಎಂದರು. ಮಹಿಳೆಯರಿಗಾಗಿ ಮಹಿಳೆಯರೇ ರೂಪಿಸಿದ ವಿನ್ಯಾಸದಲ್ಲಿ ಕೈಗಾರಿಕಾಭಿ ವೃದ್ಧಿ ಪಾರ್ಕ್‌ ಅಭಿವೃದ್ಧಿಪಡಿಸಲಾಗು ವುದು. ಇಡೀ ದೇಶದಲ್ಲೇ ಮಾದರಿ ಪಾರ್ಕ್‌ ಇದಾಗಲಿದೆ ಎಂದರು.

ಇದೇ ಮಾದರಿಯ ಮಹಿಳಾ ಕೈಗಾರಿಕಾ ಪಾರ್ಕ್‌ಗಳನ್ನು ಮೈಸೂರು, ಹುಬ್ಬಳ್ಳಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲೂ ಸ್ಥಾಪಿಸಲಾಗುವುದು. ಎರಡನೇ ಹಂತದಲ್ಲಿ ಬೆಳಗಾವಿಯಲ್ಲಿ ಸ್ಥಾಪಿಸುವ ಉದ್ದೇಶ ಇದೆ ಎಂದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವಾದ ಮಾರ್ಚ್‌ 8ರಂದು ಎಲ್ಲ ಜಿಲ್ಲಾಧಿಕಾರಿಗಳು ಮಹಿಳಾ ಉದ್ಯಮಿಗಳನ್ನೇ ಸಮಾರಂಭಕ್ಕೆ ಕರೆದು, ಈ ಕಾರ್ಯಕ್ರಮದ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.

ಮಹಿಳಾ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿಯೇ ಪ್ರತ್ಯೇಕ ಘಟಕ ತೆರೆಯಲಾಗುವುದು. ಈ ಕೆಲಸವನ್ನು ಕೈಗಾರಿಕಾ ಇಲಾಖೆ ನಿರ್ದೇಶನಾಲಯ ಮಾಡಲಿದೆ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT