ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಉದ್ಯೋಗಿ ಭದ್ರತೆ ಸಂಸ್ಥೆಯದು

Last Updated 6 ಮೇ 2016, 8:44 IST
ಅಕ್ಷರ ಗಾತ್ರ

ಅರಸೀಕೆರೆ:  ಖಾಸಗಿ ಸಂಸ್ಥೆ ಮತ್ತು ಕಂಪನಿಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಸೂಕ್ತ ರಕ್ಷಣೆ ಒದಗಿಸುವುದು ಸಂಬಂಧಪಟ್ಟ ಸಂಸ್ಥೆ ಹಾಗೂ ಕಂಪೆನಿಯಾ ಜವಾಬ್ದಾರಿ ಎಂದು ಇಲ್ಲಿನ ಜೆಎಂಎಫ್‌ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಈ. ಚಂದ್ರಕಲಾ ಈಚೆಗೆ ತಿಳಿಸಿದರು.

ನಗರದ ಹೊರ ವಲಯದ ಕೆರೆ ಕೋಡಿ ಬಳಿಯಿರುವ ಅರವಿಂದ್‌ ಗಾರ್ಮೆಂಟ್ಸ್‌ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಅರವಿಂ ದ್‌ ಗಾರ್ಮೆಂಟ್ಸ್‌ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿ ಯಿಂದ ಹಾಗೂ ನಿರ್ಭೀತಿಯಿಂದ ಜೀವನ ನಡೆಸಬೇಕಾದರೆ ಕನಿಷ್ಠ ಕಾನೂನಿನ ಅರಿವು ಇರಬೇಕಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ಮಹಿಳಾ ಕಾರ್ಮಿಕರೂ ಸಹ ಕಾನೂನನ್ನು ತಿಳಿದುಕೊಂಡರೆ ಸಂಸ್ಥೆ ಮತ್ತು ಕಂಪೆನಿಗಳಲ್ಲಿ ತಮಗೆ ದೊರೆಯಬಹುದಾದ ಸವಲತ್ತುಗಳನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಕಿವಿಮಾತು ಹೇಳಿದ ಅವರು ಈ ಹಿಂದೆ ನಾಲ್ಕು ಗೋಡೆಗಳ ಮಧ್ಯೆ ಕೀಳರಿಮೆಯಿಂದ ಹೊರ ಬರದೇ ಮನೆಯಲ್ಲಿಯೇ ಕುಟುಂಬ ನಿರ್ವಹಣೆಯಲ್ಲಿದ್ದ  ಮಹಿಳೆಯರು  ಪ್ರಸ್ತುತ ಎಲ್ಲ ರಂಗದಲ್ಲಿಯೂ ಪುರುಷರಿಗಿಂತ ತಾವು ನಿರ್ವಹಿಸುವ ಕೆಲಸದಲ್ಲಿ ಅವರಿಗೆ ಕಡಿಮೆ ಇಲ್ಲದಂತೆ ಮುಂಚೂಣಿಯಲ್ಲಿ ನಿಂತು ಸಾಧನೆ ಮಾಡಿರುವುದನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಆದರೆ, ಗ್ರಾಮೀಣ ಭಾಗದ ಮಹಿಳೆಯರು ತಮ್ಮ ವ್ಯಾಪ್ತಿಯಲ್ಲಿ ದೊರೆಯುವ ಉದ್ಯೋಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಂತಹ ಕಡೆಗಳಲ್ಲಿ ಖಾಸಗಿ ಸಂಸ್ಥೆ ಮತ್ತು ಕಂಪೆನಿ ಯ ಮಾಲೀಕರು ಹಾಗೂ ಮೇಲಧಿಕಾರಿಗಳಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿರುವ ವರದಿಗಳು ನಿತ್ಯ ಕೇಳಿ ಬರುತ್ತಿದೆ. ಈ ರೀತಿ ದೌರ್ಜನ್ಯಕ್ಕೆ ಒಳಗಾ ದ ಮಹಿಳೆಯರಿಗೆ ಕಾನೂನು ಅರಿವು ದೊರಕಿಸುವ ಕೆಲಸವನ್ನು ಪ್ರಗತಿಪರ ಸಂಘಟನೆಗಳು ಅವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿ ಎಂದು ಅವರು ತಿಳಿಸಿದರು.

ಉಪನ್ಯಾಸ:  ದೇಶದ ಆರ್ಥಿಕ  ಅಭಿವೃದ್ಧಿಯಲ್ಲಿ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳ ಪಾತ್ರ ಮತ್ತು ಅಸಂಘಟಿತ ಕಾರ್ಮಿಕರ ಪಿಂಚಣಿ, ಹೊಸ ಯೋಜನೆಗಳ ವಿಷಯ ಕುರಿತು  ವಕೀಲ ಆರ್‌. ವಿಜಯ್‌ ಕುಮಾರ್‌ ಹಾಗೂ ಬೋನಸ್‌ ಕಾಯಿದೆ ಮತ್ತು ಉಪಧನ ಕಾಯಿದೆ ಕುರಿತು ವಕೀಲ ಎಂ.ಆರ್‌.  ಸರ್ವೇಶ್‌ ಉಪನ್ಯಾಸ ನೀಡಿದರು.
ಸರ್ಕಾರಿ ಅಭಿಯೋಜಕಿ ಯಶೋದಾ, ವಕೀಲ ಕಲ್ಯಾಣಕುಮಾರ್‌, ಅರವಿಂದ್‌ ಗಾರ್ಮೆಂಟ್ಸ್‌ ಲಿಮಿಟೆಡ್‌ನ ವಾಸುದೇವ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT