ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರೀಡಾಕೂಟ:ರಾಜ್ಯಕ್ಕೆ ಹಿನ್ನಡೆ

Last Updated 19 ಡಿಸೆಂಬರ್ 2014, 8:57 IST
ಅಕ್ಷರ ಗಾತ್ರ

ಉಡುಪಿ: ಇಲ್ಲಿನ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ರಾಜೀವ್ ಗಾಂಧಿ ಖೇಲ್ ಅಭಿಯಾನ (ಆರ್‌ಜಿಕೆಎ) ರಾಷ್ಟ್ರ ಮಟ್ಟದ ಮಹಿಳಾ ಕ್ರೀಡಾಕೂಟದ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ರಾಜಸ್ತಾನದ ಎದುರು 2–0 ಅಂತರದಿಂದ ಜಯಗಳಿಸಿದ ಹರಿಯಾಣ, ಕರ್ನಾಟಕದ ಎದುರು 2–0 ಅಂತರದಲ್ಲಿ ಜಯಗಳಿಸಿದ ತಮಿಳು ನಾಡು, ಆಂಧ್ರಪ್ರದೇಶದ ಎದುರು 2–0 ಅಂತರದಲ್ಲಿ ಜಯಗಳಿಸಿದ ತೆಲಂಗಾಣ, ದೆಹಲಿ ಎದುರು 2–1 ಅಂತರದಿಂದ ಗೆಲುವು ಸಾಧಿಸಿದ ಮಹಾರಾಷ್ಟ್ರ ತಂಡಗಳು ಸೆಮಿಫೈನಲ್‌ ಪ್ರವೇಶಿಸಿವೆ.

ಟೇಬಲ್‌ ಟೆನ್ನಿಸ್: ಕರ್ನಾಟಕವನ್ನು 3–0 ಅಂತರ ದಿಂದ ಸೋಲಿಸಿದ ತಮಿಳುನಾಡು, ಬಿಹಾರವನ್ನು 3–0 ಅಂತ ರದಿಂದ ಸೋಲಿಸಿದ ತೆಲಂಗಾಣ ತಂಡ ಸೆಮಿಫೈನಲ್‌ ಪ್ರವೇಶಿಸಿದೆ. ಬ್ಯಾಡ್ಮಿಂಟನ್‌ನ ಮೊದಲ ಸುತ್ತಿನಲ್ಲಿ ಗುಜರಾತ್‌ ಅನ್ನು 2–0 ಅಂತರದಿಂದ ಸೋಲಿಸಿದ ತೆಲಂಗಾಣ, ಹಿಮಾಚಲ ಪ್ರದೇಶವನ್ನು 2–0 ಅಂತರದಲ್ಲಿ ಸೋಲಿ ಸಿದ ಕರ್ನಾಟಕ, ಮಣಿಪುರವನ್ನು 2–0 ಅಂತರದಿಂದ ಸೋಲಿಸಿದ ದೆಹಲಿ, ಪಶ್ಚಿಮ ಬಂಗಾಳವನ್ನು 2–0 ಅಂತರದಿಂದ ಮಣಿಸಿದ ರಾಜಸ್ತಾನ ಫ್ರೀಕ್ವಾರ್ಟರ್‌ ಫೈನಲ್‌ ಪ್ರವೇಶಿತ್ತು.

ಫ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಹರಿಯಾಣ ಮಧ್ಯ ಪ್ರದೇಶವನ್ನು 2–0 ಅಂತರದಿಂದ, ತಮಿಳುನಾಡು 2–0 ಅಂತರದಿಂದ ಉತ್ತರಖಂಡವನ್ನು, ಮಹಾರಾಷ್ಟ್ರ ತಂಡ ಬಿಹಾರ ತಂಡವನ್ನು 2–0 ಅಂತರದಿಂದ ಸೋಲಿಸಿತು. ಆಂಧ್ರಪ್ರದೇಶ 2–0 ಅಂತರದಿಂದ ಉತ್ತರಪ್ರದೇಶ ವನ್ನು, ಕರ್ನಾಟಕ 2–0 ಅಂತರದಿಂದ ಪಂಜಾಬ್‌ ತಂಡ ವನ್ನು, ದೆಹಲಿ 2–0 ಅಂತರದಿಂದ ಚತ್ತೀಸ್‌ಗಡ ವನ್ನು, ತೆಲಂಗಾಣ 2–0 ಅಂತರದಿಂದ ಕೇರಳ ತಂಡ ವನ್ನು ಸೋ ಲಿಸಿತು. ರಾಜಸ್ತಾನ ತಂಡ ವಾಕ್‌ ಓವರ್‌ ಪಡೆದಿತ್ತು.

ಟೇಬಲ್‌ ಟೆನ್ನಿಸ್‌ ಪ್ರಥಮ ಸುತ್ತು: ಆಂಧ್ರಪ್ರದೇಶ 3–2 ಅಂತರದಿಂದ ರಾಜಸ್ತಾನವನ್ನು, ಹರಿಯಾಣ 3–0 ಅಂತರದಿಂದ ಮಣಿಪುರವನ್ನು, ತೆಲಂಗಾಣ 3–0 ಅಂತ ರದಿಂದ ಉತ್ತರಪ್ರದೇಶವನ್ನು, ಗುಜರಾತ್‌ 3–0 ಅಂತರದಿಂದ ಮಧ್ಯಪ್ರದೇಶವನ್ನು ಸೋಲಿಸಿ 2ನೇ ಸುತ್ತು ಪ್ರವೇಶಿಸಿತ್ತು.

ಎರಡನೇ ಸುತ್ತಿನಲ್ಲಿ ಪಶ್ಚಿಮ ಬಂಗಾಳ 3–0 ಅಂತ ರದಿಂದ ಉತ್ತರಖಂಡವನ್ನು, ಬಿಹಾರ 3–0 ಅಂತರ ದಿಂದ ಚತ್ತೀಸ್‌ಗಡವನ್ನು, ಕರ್ನಾಟಕ 3–0 ಅಂತರ ದಿಂದ ತ್ರಿಪುರವನ್ನು, ತೆಲಂಗಾಣ 3–0 ಅಂತರ ದಿಂದ ಕೇರಳವನ್ನು, ದೆಹಲಿ 3–0 ಅಂತರದಿಂದ ಗುಜ ರಾತ್‌ ತಂಡವನ್ನು, ತಮಿಳುನಾಡು 3–0 ಅಂತರದಿಂದ ಆಂಧ್ರಪ್ರದೇಶ ತಂಡವನ್ನು, ಮಹಾರಾಷ್ಟ್ರ 3–1 ಅಂತ ರದಿಂದ ಹಿಮಾಚಪ್ರದೇಶವನ್ನು ಮತ್ತು ಪಂಜಾಬ್‌ 3–0 ಅಂತರದಿಂದ ಹರಿಯಾಣ ತಂಡವನ್ನು ಸೋಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT