ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಭದ್ರತೆಗೆ ಕ್ರಮ: ಡಿವೈಎಸ್‌ಪಿ

Last Updated 30 ಜುಲೈ 2014, 8:44 IST
ಅಕ್ಷರ ಗಾತ್ರ

ಹುಮನಾಬಾದ್: ಮಹಿಳೆಯರು ಮತ್ತು ಮಕ್ಕಳಿಗೆ ಭದ್ರತೆ ಒದಗಿಸಲು ಪೊಲೀಸ್‌ ಇಲಾಖೆ ಸಿದ್ಧ ಎಂದು ಡಿವೈ­ಎಸ್‌ಪಿ ಅಮರನಾಥರೆಡ್ಡಿ ಹೇಳಿದರು.

ಇಲ್ಲಿನ ಇಂದಿರಾ ನಗರದ ಡಾ.ಅಂಬೇ­ಡ್ಕರ್‌ ಸಮುದಾಯ ಭವನ­ದಲ್ಲಿ ಮಹಿಳೆಯರು ಹಾಗೂ ಮಕ್ಕಳ ಸಂರಕ್ಷಣೆ ಕುರಿತು ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಲಕರು ಹೆಣ್ಣು ಮಕ್ಕಳಿಗೆ ಕಡ್ಡಾ­ಯ­­ವಾಗಿ ಶಿಕ್ಷಣ ನೀಡಬೇಕು. ಮಹಿಳಾ ಮೀಸಲಾತಿ ಅಡಿಯಲ್ಲಿ ಉದ್ಯೋಗ ಪಡೆಯಬಹುದು. ಪ್ರೌಢ­ಶಾಲೆ ಹಾಗೂ ಕಾಲೇಜು ಹಂತದ ವಿದ್ಯಾರ್ಥಿ­ನಿ­ಯರಿಗೆ ಮೊಬೈಲ್‌ ನೀಡು­ವುದನ್ನು ತಕ್ಷಣವೇ ಕೈಬಿಡಬೇಕು ಎಂದರು.

ಪುರಸಭೆ ಅಧ್ಯಕ್ಷ ವಿನಾಯಕ ಯಾದವ್‌ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಕುರಿತು ಕಳವಳ ವ್ಯಕ್ತಪಡಿಸಿದರು. ಉಪ ವಿಭಾಗ ವ್ಯಾಪ್ತಿಯ ಪೊಲೀಸ್‌ ಅಧಿ­ಕಾ­ರಿ­ಗಳು ಉತ್ತಮ ಕೆಲಸ ಮಾಡುತ್ತಿ­ದ್ದಾರೆ. ಹೆಚ್ಚಿನ ಭದ್ರತೆ ಒದಗಿಸಲು ಹೊಸ ಯೋಜನೆ ರೂಪಿಸಬೇಕು ಎಂದರು.

ಇನ್‌ಸ್ಪೆಕ್ಟರ್‌ ದತ್ತಾತ್ರೇಯ, ಸಬ್ ಇನ್‌ಸ್ಪೆಕ್ಟರ್‌ ಎಲ್‌.ಬಿ.ಅಗ್ನಿ, ಸಮು­ದಾಯ ಸಮನ್ವಯ ಅಧಿಕಾರಿ ಮೀನಾ­ಕುಮಾರಿ ಬೋರಾಳ್ಕರ್‌, ಧರ್ಮ­ರಾಯ ಘಾಂಗ್ರೆ ಮಾತ­ನಾಡಿದರು. ಪರಮೇಶ್ವರ ಆರ್ಯ, ಗೌತಮ್‌ ಮೇಟಿ, ಖಾಜಾ ಪಟೇಲ್‌ ಶೇರಿಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT