ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಅಟಾರ್ನಿ ಜನರಲ್‌ ಜಿ.ಇ. ವಾಹನ್ವತಿ

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದೇಶದ ಪ್ರಥಮ ಮುಸ್ಲಿಂ ಉನ್ನತ ಕಾನೂನು ಅಧಿಕಾರಿ ಎನಿಸಿದ ಮಾಜಿ ಅಟಾರ್ನಿ ಜನರಲ್‌ ಜಿ.ಇ. ವಾಹನ್ವತಿ ಮಂಗಳ­ವಾರ ಇಲ್ಲಿ ಹೃದಯಾಘಾತದಿಂದ ನಿಧನರಾದರು.

ಗೂಲಂ ಎಸ್ಸಾಜಿ ವಾಹನ್ವತಿ (65) ಅವರಿಗೆ  ಪತ್ನಿ ಮತ್ತು ಪುತ್ರ ಇದ್ದಾರೆ. ಕೆಲ ಕಾಲದಿಂದ ಶ್ವಾಸಕೋಶ ಸೋಂಕಿ­­ನಿಂದ ಬಳಲುತ್ತಿದ್ದ ಅವರು, ನಗರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಯುಪಿಎ ಸರ್ಕಾರವು 2009ರ ಜೂನ್‌­ನಲ್ಲಿ ಮೂರು ವರ್ಷಗಳ ಅವಧಿ­ಗಾಗಿ ವಾಹನ್ವತಿ ಅವರನ್ನು 13ನೇ ಅಟಾರ್ನಿ ಜನರಲ್‌ ಆಗಿ ನೇಮಿಸಿದ್ದು, ನಂತರ 2012ರಲ್ಲಿ ಮುಂದಿನ ಎರಡು ವರ್ಷಗಳವರೆಗೆ ಅಧಿಕಾರಾವಧಿ ವಿಸ್ತರಿ­ಸಿತ್ತು. 2014 ಮೇನಲ್ಲಿ ಕೇಂದ್ರದಲ್ಲಿ ಹೊಸ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜೀನಾಮೆ ಸಲ್ಲಿಸಿದ್ದರು.

ಅಟಾರ್ನಿ ಜನರಲ್‌ ಆಗುವ ಮುನ್ನ, ವಾಹನ್ವತಿ ಅವರು, 2004ರ ಜೂನ್‌ 20ರಿಂದ 2009ರ ಜೂನ್‌ 7ರವರೆಗೆ ಸಾಲಿಸಿ­ಟರ್‌ ಜನರಲ್‌ ಆಗಿ ಸೇವೆ ಸಲ್ಲಿ­ಸಿ­ದ್ದರು. ಅದಕ್ಕೂ ಮುಂಚೆ ಅವರು ಮಹಾ­ರಾಷ್ಟ್ರದ ಅಡ್ವೊಕೇಟ್‌ ಜನ­ರಲ್‌ ಆಗಿ ಸೇವೆ ಸಲ್ಲಿಸಿದ್ದರು.

1949ರ ಮೇ 7ರಂದು ಜನಿಸಿದ ವಾಹನ್ವತಿ ಅವರು, ಇಲ್ಲಿನ ಸೇಂಟ್‌ ಗ್ಸೇವಿಯರ್‌ ಕಾಲೇಜಿನಲ್ಲಿ ಪದವಿ ಮತ್ತು ಸರ್ಕಾರಿ ಕಾನೂನು ಕಾಲೇಜಿ­ನಲ್ಲಿ ಕಾನೂನು ಪದವಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT