ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ರೂಪದರ್ಶಿ ಆತ್ಮಹತ್ಯೆ

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಾಜಿ ರೂಪದರ್ಶಿ­ಯೊಬ್ಬರು, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ­ಕೊಂಡಿ­ರುವ ಘಟನೆ ಮುಂಬೈನ ಹೊರವಲಯದ ಅಂಧೇರಿಯಲ್ಲಿ ನಡೆದಿದೆ.

ಮಾಡೆಲಿಂಗ್‌ ತೊರೆದು ಫೈನಾನ್ಸಿ­­ಯಲ್‌ ಕನ್ಸಲ್ಟೆಂಟ್‌ ಆಗಿ ಕೆಲಸ ಮಾಡು­ತ್ತಿದ್ದ ಅರ್ಚನಾ ಪಾಂಡೆ (26) ಆತ್ಮಹತ್ಯೆ ಮಾಡಿ­ಕೊಂಡ ದುರ್ದೈವಿ.

‘ಮೂರು ದಿನದ ಹಿಂದೆಯೇ ಅರ್ಚನಾ ಅವರು ತನ್ನ ಕೋಣೆ­ಯಲ್ಲಿ ಆತ್ಮ­ಹತ್ಯೆ ಮಾಡಿಕೊಂಡಿ­ದ್ದಾರೆ. ಅವರ ಮನೆಯಿಂದ ಬರುತ್ತಿದ್ದ ಕೆಟ್ಟ ವಾಸನೆ ಗಮನಿಸಿ, ಅಕ್ಕಪಕ್ಕದವರು ದೂರು ನೀಡಿ­ದಾಗ, ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೂ ಮುನ್ನ ಪತ್ರ­ವೊಂದನ್ನು ಬರೆದಿಟ್ಟಿರುವ ಅವರು, ‘ಈ ನಿರ್ಧಾರಕ್ಕೆ ನನ್ನ ಪ್ರಿಯಕರನೇ ಕಾರಣ’ ಎಂದು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT