ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಚಿವೆ ವಿರುದ್ಧ ಹೆಚ್ಚುವರಿ ದೋಷಾರೋಪ

ಆಂಧ್ರದಲ್ಲಿ ಓಬಳಾಪುರಂ ಗಣಿ ಹಗರಣದ ಪ್ರತಿಧ್ವನಿ
Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ಕರ್ನಾಟ­ಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾಗಿಯಾಗಿರುವ ಓಬಳಾಪುರಂ ಗಣಿ (ಒಎಂಸಿ)  ಹಗರಣ­ದಲ್ಲಿ ಆಂಧ್ರದ ಮಾಜಿ ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಹಾಗೂ ನಿವೃತ್ತ ಐಎಎಸ್‌್ ಅಧಿ­ಕಾರಿ, ಮಾಜಿ ಗಣಿ ಕಾರ್ಯ­ದರ್ಶಿ ಬಿ.ಕೃಪಾ­ನಂದಂ ವಿರುದ್ಧ ಸಿಬಿಐ ಬುಧವಾರ ಹೆಚ್ಚುವರಿ ದೋಷಾರೋಪ ಸಲ್ಲಿಸಿದೆ.

ಕೃಪಾನಂದಂ ಅವರನ್ನು ಎಂಟನೇ ಮತ್ತು ಸಬಿತಾ ಅವರನ್ನು ಒಂಬತ್ತನೇ ಆರೋಪಿಯನ್ನಾಗಿ ಹೆಸರಿಸಲಾ­ಗಿದೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌­­ಗಳ ಅಡಿಯಲ್ಲಿ ಇವರಿಬ್ಬರ ವಿರುದ್ಧ ಅಪರಾಧ ಸಂಚು,­ ನಂಬಿಕೆ ದ್ರೋಹ ಆರೋಪ ಹೊರಿಸ­ಲಾಗಿದೆ.
‘ಇವರಿಬ್ಬರು, ಗಣಿ ಗುತ್ತಿಗೆ ಪಡೆ­­ಯಲು ಬಂದಿದ್ದ ಇತರ ಅರ್ಜಿ­­ಗಳನ್ನು ತಿರ­ಸ್ಕರಿಸಿ ಒಎಂಸಿ ಪ್ರಸ್ತಾ­ವಕ್ಕೆ ಆದ್ಯತೆ  ನೀಡಿ­­­­ದ್ದರು’ ಎಂದು ಕೋರ್ಟ್‌ಗೆ ಸಿಬಿಐ ತಿಳಿಸಿದೆ.

‘ಈ ಹೆಚ್ಚುವರಿ ದೋಷಾರೋಪ­ಗಳನ್ನು ಅಂತಿಮ ವರದಿಯನ್ನಾಗಿ ಪರಿಗ­ಣಿ­ಸ­­ಬಹುದು’ ಎಂದೂ  ಸಿಬಿಐ ಹೇಳಿದೆ.
ಹೆಚ್ಚುವರಿ ದೋಷಾರೋಪದಲ್ಲಿ 104 ದಾಖಲೆಗಳು ಹಾಗೂ 36 ಸಾಕ್ಷಿ­ಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.

‘ಇದರಲ್ಲಿ ಸಬಿತಾ ಹಾಗೂ ಕೃಪಾ­ನಂದಂ ಪಾತ್ರ ರುಜುವಾತಾಗಿದೆ. ಹಾಗಾಗಿ ಅವರ ವಿರುದ್ಧ ಹೆಚ್ಚುವರಿ ದೋಷಾರೋಪ ಸಲ್ಲಿಸಲಾಗಿದೆ’ ಎಂದು­ ಸಿಬಿಐ ವಕೀಲರು ಕೋರ್ಟ್‌ಗೆ ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌­ನಿಂದ ಟಿಕೆಟ್‌್ ವಂಚಿತರಾ­ಗಿ­ರುವ ಸಬಿತಾ ಅವರಿಗೆ ಈ ಬೆಳವಣಿಗೆ­ಯಿಂದ ಮತ್ತಷ್ಟು ಹಿನ್ನಡೆಯಾಗಿದೆ.

‘ಸಬಿತಾ ಅವರನ್ನು ಶೀಘ್ರವೇ ಬಂಧಿ­ಸುವ ಸಾಧ್ಯತೆ ಇದೆ’ ಎಂದು ಸಿಬಿಐ ಮೂಲಗಳು ಹೇಳಿವೆ. ಹಾಗೇನಾದರೂ ಆದಲ್ಲಿ ಟಿಡಿಪಿ, ಟಿಆರ್‌ಎಸ್‌್ ಹಾಗೂ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಇದೊಂದು ಅಸ್ತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
₨5000 ಕೋಟಿ ಹಗರಣದಲ್ಲಿ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾ­­­ರ್ದನ ರೆಡ್ಡಿ ಈಗಾಗಲೇ ಜೈಲಿ­ನಲ್ಲಿದ್ದಾರೆ. ಕಡಪಾ ಸಂಸದ, ವೈಎಸ್‌­ಆರ್‌ಸಿ ಅಧ್ಯಕ್ಷ ವೈ.ಎಸ್‌.ಜಗನ್‌ ಮೋಹನ್‌್ ರೆಡ್ಡಿ ಭಾಗಿಯಾಗಿರುವ ಗಣಿ ಹಗರಣಕ್ಕೆ ಸಂಬಂಧಿಸಿದ ಆರೋಪ­ಪಟ್ಟಿಯಲ್ಲಿ ಈಗಾಗಲೇ ಸಬಿತಾ ಅವರನ್ನು ಸಾಕ್ಷಿ­ಯನ್ನಾಗಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT