ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಹೊನಲು ಹರಿಯಲಿ...

ENGLISH ಕಲಿಯೋಣ ಬನ್ನಿ
Last Updated 29 ಮಾರ್ಚ್ 2015, 19:30 IST
ಅಕ್ಷರ ಗಾತ್ರ

Public speakingನಲ್ಲಿ ವಿಷಯ ಮಂಡನೆಗೆ ಸಂಬಂಧಿಸಿದಂತೆ ಕೆಲವು ಸೂಚನೆಗಳು ಇಲ್ಲಿವೆ: ಎಷ್ಟೋ ಬಾರಿ ಮಾತನಾಡುತ್ತಿದ್ದ ಹಾಗೆಯೇ ನಮಗೆ ಖಾಲಿತನದ ಅನುಭವವಾಗುತ್ತದೆ. ಅಂದರೆ, ಎಲ್ಲವನ್ನೂ ಹಠಾತ್ ಮರೆತು ಹೋಗುವುದು. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಒಂದು ಸುಲಭ ಉಪಾಯವಿದೆ.

ಮರವೊಂದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಬೇರು, ಕಾಂಡ ಮತ್ತು ರೆಂಬೆಗಳನ್ನು ಕಲ್ಪಿಸಿಕೊಳ್ಳಿ. ನಿಮ್ಮ ಮಾತಿನ ಮರದ ಕಾಂಡವೇ  ನಿಮ್ಮ ವಿಷಯ. ಈ ವಿಷಯ ಕಾಂಡಕ್ಕೆ ನೀವು ಆರು ರೆಂಬೆಗಳನ್ನು ಕಲ್ಪಿಸಿಕೊಳ್ಳಬಹುದು. ಅವೇ ಇಂಗ್ಲಿಷ್‌ನಲ್ಲಿರುವ wh-question why, what, where, when, how and which. ಉದಾ: The greatness of Indian civilization ಎಂಬುದು ನಿಮ್ಮ ಭಾಷಣದ ವಿಷಯ ಎಂದಿಟ್ಟುಕೊಳ್ಳಿ.

ನಿಮ್ಮ ನೆನಪಿನಲ್ಲಿದ್ದುದ್ದೆಲ್ಲಾ ಸೋರಿ ಹೋಗುತ್ತಿರುವ ಅನುಭವ ನಿಮಗೆ ವೇದಿಕೆಯ ಮೇಲೆ ಆಗುತ್ತಿದ್ದಾಗ ನೀವು ಈ wh ರೆಂಬೆಗಳನ್ನು ಮನಸ್ಸಿನಲ್ಲಿ ಸ್ಪರ್ಶಿಸಿ. ಅನೇಕ ಬಾರಿ ಇದರಿಂದ ಒಳಗೆ ಅವಿತಿರುವ ವಿಷಯದ ಹೊಳವುಗಳು ತಂತಾನೆ ನಿಮಗೆ ಮತ್ತೆ ಒದಗಿ ಬರತೊಡಗುತ್ತವೆ. ಅಭ್ಯಾಸ ಬಲದಿಂದ ಕೆಲವೇ ಸೆಕೆಂಡುಗಳಲ್ಲಿ ಯಾವುದೇ ವಿಷಯವನ್ನು ಕುರಿತಾದರೂ ಈ ತಂತ್ರವನ್ನು ಉಪಯೋಗಿಸಬಹುದು, ಇದನ್ನು stem and branch method ಎಂದು ಕರೆಯಲಾಗುತ್ತದೆ.

ಎರಡನೆಯ ಉಪಾಯವೆಂದರೆ, ವಿಷಯ ಮಂಡನೆಯಲ್ಲಿ ಪರಿಕಲ್ಪನೆಗಳಿಗಿಂತ ಹೆಚ್ಚಾಗಿ ಪದಚಿತ್ರಗಳನ್ನು ಉಪಯೋಗಿಸುವುದು. ಉದಾ: I bought a new vehicle ಎಂಬ ವಾಕ್ಯಕ್ಕೆ ಬದಲಾಗಿ I bought a brand new apple red Benz ಎಂದಾಗ ಅದರ ಪರಿಣಾಮವೇ ಬೇರೆ ರೀತಿ ಇರುತ್ತದೆ. ಏಕೆಂದರೆ ಎಲ್ಲಾ ಕೇಳುಗರೂ ಐದು ತಂತಿಗಳಿರುವಂತಹ ಪಂಚವೀಣೆಯಂತೆ. Sight, sound, touch, smell and taste - ಇವೇ ಆ ಪಂಚವೀಣೆಯ ತಂತಿಗಳು. ಪರಿಣಿತ ಭಾಷಣಕಾರನೊಬ್ಬ ತನ್ನ ವಿಷಯ ಮಂಡನೆಯನ್ನು ಕೇಳುಗರ ಪಂಚೇಂದ್ರಿಯಗಳ ಅನುಭವಕ್ಕೆ ದಕ್ಕುವಂತೆ ಕಲಾತ್ಮಕವಾಗಿ ಸಂಭಾಷಿಸುತ್ತಿರುತ್ತಾನೆ. ಬೇಂದ್ರೆಯವರ ‘ಮೂಡಲ ಮನೆಯ ಮುತ್ತಿನ..’ ಎಂಬ ಪದ್ಯದ ಮಾಂತ್ರಿಕತೆ ಈ ಅಂಶದಲ್ಲೇ ಅಡಗಿದೆ.

ಮೂರನೆಯದಾಗಿ, ನಮ್ಮ ಭಾಷಣ ಬತ್ತಳಿಕೆಯಲ್ಲಿ ವಿವಿಧ ಆಯ್ಕೆಗಳಿರಬೇಕು. Quotations(ಉಲ್ಲೇಖಗಳು), anecdotes(ಸ್ವಾರಸ್ಯಕರ ಅನುಭವಗಳು), relevant statistics(ಸಂದರ್ಭೋಚಿತ ಅಂಕಿ ಅಂಶಗಳು), illustrations (ದೃಷ್ಟಾಂತಗಳು) ಇವುಗಳಲ್ಲಿ ಕೆಲವು.

ಕಡೆಯದಾಗಿ, public speaking ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುವುದು ನಮ್ಮಲ್ಲಿ ಇರಬೇಕಾದ ತೀಕ್ಷ್ಣವಾದ ಸಮಯಪ್ರಜ್ಞೆ, ಕೇಳುಗರ ಸಮಯ ಮತ್ತು ಗಮನಮಿತಿಯ (attention span) ಬಗ್ಗೆ ಪಬ್ಲಿಕ್ ಸ್ಪೀಕರ್‌ಗೆ ಅಪಾರವಾದ ಗೌರವ ವಿರಬೇಕು. ವಂದನಾರ್ಪಣೆಯನ್ನು ಮಾಡಲು ಹೋಗಿ ಆತ್ಮ ಚರಿತ್ರೆಯ ಜಾಡು ಹಿಡಿದು, ಕೇಳುಗರ ನಿದ್ದೆಗೆ ಕಾರಣರಾದ ಎಷ್ಟೋ ಜನ ಆಗಿಹೋಗಿದ್ದಾರೆಂಬುದನ್ನು ನಾವು ಮರೆಯಬಾರದು.

ಮಾಹಿತಿಗೆ: 98452 13417
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT