ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಕತೆಗೆ ಆತುರ ಇಲ್ಲ: ಪಾಕ್

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ‘ಭಾರತವು ಮಾತುಕತೆಗೆ ಸಿದ್ಧವಾಗುವ­ವ­ರೆಗೂ ಕಾಯುತ್ತೇವೆ. ಈ ವಿಷಯ­ದಲ್ಲಿ ನಾವು ಆತುರಪಡುವುದಿಲ್ಲ’ ಎಂದು ಪಾಕಿಸ್ತಾನ ಹೇಳಿದೆ.

ಉಭಯ ರಾಷ್ಟ್ರಗಳ ನಡುವಣ ಮಾತುಕತೆಗೆ ಭಾರತದಿಂದ ಸಕಾ­ರಾತ್ಮಕ ಪ್ರತಿಕ್ರಿಯೆ ಬರುವವರೆಗೂ ಸುಮ್ಮನಿರಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿ ಅಬ್ದುಲ್‌ ಬಸಿತ್‌ ಅವರೊಂದಿಗೆ ಪ್ರಧಾನಿ ನವಾಜ್‌ ಷರೀಫ್‌ ಅವರು ಬುಧವಾರ ಮಾತು­ಕತೆ ನಡೆಸಿದ್ದು, ಆ ಸಂದರ್ಭದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಲಾಯಿತು ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

‘ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಮಾತುಕತೆಗೆ ಸಿದ್ಧವಾಗುವ­ವರೆಗೂ ನಾವು ಕಾಯುತ್ತೇವೆ’ ಎಂದು ಪಾಕಿಸ್ತಾನ ತಿಳಿಸಿರುವುದಾಗಿ ಪತ್ರಿಕೆ ಉಲ್ಲೇಖಿಸಿದೆ.

ಭಾರತ ಪ್ರಮುಖವಾದ ನೆರೆ ರಾಷ್ಟ್ರ­ವಾ­ಗಿದ್ದು,  ಆ ದೇಶದೊಂದಿಗೆ ಸಹಜ­ವಾದ ಸಂಬಂಧವನ್ನು ಹೊಂದಲು ಪಾಕಿಸ್ತಾನ ಬಯಸುತ್ತದೆ. ಪರಮಾಧಿ­ಕಾರ, ಸಮಾನತೆ ವಿಷಯ­ದಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಗೌರವಿ­ಸಬೇಕು ಎಂದು ಷರೀಫ್‌ ಅವರು ಬಸಿತ್‌ ಅವರಿಗೆ ಸ್ಪಷ್ಟಪಡಿಸಿದ್ದಾರೆ.

ಬಸಿತ್‌ ಅವರು ಕಳೆದ ಆಗಸ್ಟ್‌ನಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸಿದ ಪರಿಣಾಮ, ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಮುರಿದಿಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT