ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕವಸ್ತು ಪ್ರಕರಣ:ಬಾಲಿವುಡ್ ನಟಿ, ಪತಿಗಾಗಿ ಶೋಧ

ತಲೆಮರೆಸಿಕೊಂಡಿರುವ ಮಮತಾ ಕುಲಕರ್ಣಿ–ವಿಕ್ಕಿ ಗೋಸ್ವಾಮಿ ದಂಪತಿ
Last Updated 29 ಏಪ್ರಿಲ್ 2016, 4:55 IST
ಅಕ್ಷರ ಗಾತ್ರ

ಮುಂಬೈ: ಈಚೆಗೆ ಠಾಣೆಯಲ್ಲಿ ವಶಪಡಿಸಿಕೊಳ್ಳಲಾದ ₹ 2 ಸಾವಿರ ಮೌಲ್ಯದ ಮಾದಕ ವಸ್ತು ಪ್ರಕರಣದಲ್ಲಿ  ಬಾಲಿವುಡ್‌ ಮಾಜಿ ನಟಿ ಮಮತಾ ಕುಲಕರ್ಣಿ ಮತ್ತು  ಅವರ ಪತಿ ವಿಕ್ಕಿ ಗೋಸ್ವಾಮಿ ಅವರ ಪಾತ್ರವಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜತೆಗೆ ಕೀನ್ಯಾದಲ್ಲಿ ತಲೆಮರೆಸಿಕೊಂಡಿರುವ ಮಮತಾ ಮತ್ತು ವಿಕ್ಕಿಗಾಗಿ ಶೋಧಕಾರ್ಯ ನಡೆದಿದೆ. ಇವರ ವಿರುದ್ಧ ಇಂಟರ್‌ಪೋಲ್‌ ನೋಟಿಸ್‌ ಸಹ ಜಾರಿಯಲ್ಲಿದೆ. ಈ ಪ್ರಕರಣಕ್ಕೆ ಜಾಗತಿಕ ಮಟ್ಟದಲ್ಲಿ ಸಂಪರ್ಕ ಇರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಈ ಪ್ರಕರಣದಲ್ಲಿ ವಿಕ್ಕಿ ನೇರವಾಗಿ ಭಾಗಿಯಾಗಿರುವ ಸಾಧ್ಯತೆ ಇದೆ. ಆದರೆ ಮಮತಾ ಇದರಲ್ಲಿ ಭಾಗಿಯಾಗಿದ್ದಾರೆಯೇ ಇಲ್ಲವೇ ಎಂಬುದು ತನಿಖೆಯಿಂದ ಪತ್ತೆಯಾಗಬೇಕಿದೆ. ವಿಕ್ಕಿ ವಿರುದ್ಧ ಈಗಾಗಲೇ ಮಾದಕ ವಸ್ತು ಕಳ್ಳಸಾಗಣೆ ಸಂಬಂಧ ಹಲವು ಪ್ರಕರಣಗಳು ದಾಖಲಾಗಿವೆ. 

ದುಬೈನಲ್ಲಿ ಇಂಥದ್ದೇ ಪ್ರಕರಣದಲ್ಲಿ ವಿಕ್ಕಿಯನ್ನು ಬಂಧಿಸಿ, 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜಾಮೀನಿನ ಮೇಲೆ ಹೊರಬಂದಿದ್ದ ವಿಕ್ಕಿ ನಂತರ ಅಲ್ಲಿಂದ ತಲೆಮರೆಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಠಾಣೆಯ ವಿವಿಧೆಡೆ ನಡೆಸಿದ ದಾಳಿಯಲ್ಲಿ ಪೊಲೀಸರು 18.5 ಟನ್ ಎಫೆಡ್ರೈನ್ ಮತ್ತು 2.5 ಟನ್ ಅಸೆಟಿಕ್ ಆ್ಯನ್‌ಹೈಡ್ರೈಡ್‌  ರಸಾಯನಿಕ ವಶಪಡಿಸಿಕೊಂಡಿದ್ದರು. 

ಅವುಗಳ ಒಟ್ಟು ಮೌಲ್ಯ ಸುಮಾರು ₹ 2 ಸಾವಿರ ಕೋಟಿ. ಏವನ್ ಲೈಫ್‌ಸೈನ್ಸಸ್ ಲಿಮಿಟೆಡ್‌ ಇವುಗಳನ್ನು ತಯಾರಿಸಿತ್ತು. ಈ ಸಂಬಂಧ ಕಂಪೆನಿಯ ಮಾಲೀಕ, ನಿರ್ದೇಶಕ ಸೇರಿ ಈವರೆಗೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಠಾಣೆ ಪೊಲೀಸರು ತಿಳಿಸಿದ್ದಾರೆ. ಎಫೆಡ್ರೈನ್‌ನಿಂದ ಮಾದಕ ವಸ್ತುಗಳನ್ನು ತಯಾರಿಸಬಹುದು.

ಎಫೆಡ್ರೈನ್‌ ಅನ್ನು ತಯಾರಿಸಲು ಏವನ್ ಲೈಫ್‌ಸೈನ್ಸಸ್‌ಗೆ ಪರವಾನಗಿ ಇದೆ. ಆದರೆ ಕಂಪೆನಿ ವಿವರಗಳನ್ನು ಮುಚ್ಚಿಟ್ಟು ಅಧಿಕ ಪ್ರಮಾಣದಲ್ಲಿ ಎಫೆಡ್ರೈನ್‌ ತಯಾರಿಸುತ್ತಿತ್ತು. ಅದನ್ನು ಭಾರತದಾದ್ಯಂತ ಮತ್ತು ವಿದೇಶಗಳಿಗೂ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಕಂಪೆನಿಯ ಮಾಲೀಕ ಮತ್ತು ನಿರ್ದೇಶಕರು ಹಲವು ಭಾರಿ ಕೀನ್ಯಾಗೆ ಹೋಗಿದ್ದಾರೆ.

ಅಲ್ಲಿ ವಿಕ್ಕಿ ಗೋಸ್ವಾಮಿಯನ್ನು ಭೇಟಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಂಪೆನಿಯಿಂದ ಅಮೆರಿಕಕ್ಕೂ ಮಾದಕ ವಸ್ತು ಕಳ್ಳಸಾಗಣೆ ಆಗಿರುವ ಸಾಧ್ಯತೆ ಇದೆ. ಹೀಗಾಗಿ ಅಮೆರಿಕದ ಡ್ರಗ್ ತಡೆ ಸಂಸ್ಥೆ ಸಹ ತನಿಖೆ ಆರಂಭಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT